ಈಗ ನಾನು ನೋಡಿಕೊಳ್ಳುತ್ತೇನೆ; ಚುನಾವಣೆ ನಂತರ ಅವರು ನೋಡಿಕೊಳ್ಳಲಿ
ಪ್ರಚಾರಕ್ಕೆ ಸ್ವಾಮೀಜಿ ಬೇಕು; ರಾಜಕಾರಣಕ್ಕೆ ಬೇಡವೇ
ಬಹುಸಂಖ್ಯಾತ ಮತದಾರರಿಗೆ ದ್ರೋಹ ಎಸಗಿದವರಿಗೆ 4 ಲಕ್ಷ ಲೀಡ್ ಬರಲು ಸಾಧ್ಯವೇ?
ಡಾ. ನಾಲವಾಡ, ಅಂಗಡಿ, ಕಾಂತೇಶ, ಈಶ್ವರಪ್ಪ, ಹಾಲಹರವಿ, ಚಂದ್ರಶೇಖರ ಗೋಕಾಕ್ ಸೇರಿದಂತೆ ಹಲವು ನಾಯಕರಿಗೆ ಮೋಸ: ಧಾರವಾಡ ಭಕ್ತರ ಸಭೆಯಲ್ಲಿ ದಿಂಗಾಲೇಶ್ವರ ಶ್ರೀಗಳ ಹೇಳಿಕೆ
ವ್ಯಕ್ತಿಯ ಹಿತಕ್ಕಾಗಿ ಹೋರಾಟ ಮಾಡಿದವನು ನಾನಲ್ಲ. ನಾನೂ ಹತ್ತು ವರ್ಷದವನು ಇದ್ದಾಗ ಹೋರಾಟ ಮಾಡಿ ಮನೆ ಬಿಟ್ಟು, ಸನ್ಯಾಸಿ ಆದವನು. ಸ್ವಾಮೀಜಿಗಳಿಗೆ ರಾಜಕಾರಣ ಏಕೆ ಬೇಕೆಂದು ಜೋಶಿ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತಾರೆ ಮತ್ತು ಮಾತನಾಡುತ್ತಾರೆ. ನಿಮ್ಮ ಕಾರ್ಯಕ್ರಮ ವೇದಿಕೆ ಹಂಚಿಕೊಂಡು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಸ್ವಾಮೀಜಿಗಳು ಬೇಕಾಗಿತ್ತಾ ಎಂದು ಪ್ರಶ್ನಿಸಿದರಲ್ಲದೇ, ನಾನು ಮಠದಲ್ಲಿ ಇದ್ರು ಅಷ್ಟೇ, ಬಯಲಿನಲ್ಲಿ ಇದ್ದರು ಅಷ್ಟೇ ಎಂದು ತಿಳಿದು ಈ ಹೋರಾಟ ಮಾಡುತ್ತಿದ್ದೆನೆ. ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕುಬಾರದು. ನೊಂದವರ ಬೆನ್ನಿಗೆ ಸ್ವಾಮೀಜಿಗಳು ನಿಲ್ಲಬೇಕು ಎಂದರು.
ಧಾರವಾಡ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ವಾರ್ಥ ರಾಜಕಾರಣಿ. ಅವರು ಕೇವಲ ಲಿಂಗಾಯತರಿಗೆ ಅಷ್ಟೇ ಅಲ್ಲದೇ, ದಲಿತರಿಗೆ, ಹಿಂದುಳಿದವರಿಗೆ ಮೋಸ ಮಾಡಿದ್ದಾರೆ. ರಾಜಕೀಯವಾಗಿ ಅನೇಕ ಬಹುಸಂಖ್ಯಾತರು ಜೋಶಿ ಹೊಡೆತಡತಕ್ಕೆ ನುಚ್ಚು ನೂರಾಗಿದ್ದಾರೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಸಾಧನಕೇರಿ ರಸ್ತೆಯ ಸೇವಾಲಯ ಹಾಲ್‌ನಲ್ಲಿ ನಡೆದ ಇಡೀ ರಾಜ್ಯವೇ ಕಾತರದಿಂದ ಕಾಯುತ್ತಿರುವ ಬೃಹತ್ ಭಕ್ತರ ಸಭೆಯ ಸಾನಿಧ್ಯ ವಹಿಸಿರುವ ಅವರು, ವೀರಶೈವ ಲಿಂಗಾಯತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವನು ನಾನು. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೋರಾಟ ಮಾಡುತ್ತಿದ್ದಾಗ, ಅವೆರಡೂ ಒಂದೇ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆ. ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಹೈಕಮಾಂಡ್ ವಿರುದ್ಧ ಹೋರಾಟ ಮಾಡಿದ್ದೆ. ಹಿಂದಿನ ಸರ್ಕಾರದಲ್ಲಿ 40 ಪರ್ಸಂಟ್ ಕಮಿಷನ್ ವಿರುದ್ಧ ಹೋರಾಟ ಮಾಡಿದ್ದೆ. ಜೋಶಿಯವರ ವಿರುದ್ಧ ಹೋರಾಟವನ್ನ ಈಗ ಆರಂಭ ಮಾಡಿದ್ಡೆನೆ. ನ್ಯಾಯ ಸಿಗುವವರೆಗೂ ನಾನು ಕೊರಳಲ್ಲಿ ಮಾಲೆ ಹಾಕುವುದಿಲ್ಲ ಎಂದು ಹೇಳಿದರು.
ನನ್ನ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾನಿರುವ ವೇದಿಕೆಯಲ್ಲಿ ಮಾಲೆ ಹಾಕಲು ಬಿಡುವುದಿಲ್ಲ. ಗುರಿ ಮುಟ್ಟುವವರೆಗೂ ರಾಜ್ಯದ ಜನತೆ ನನಗೆ ಮಾಲೆ ಹಾಕಬೇಡಿ.ಹೋರಾಟಕ್ಕೆ ಜಯ ಸಿಕ್ಕ ಮೇಲೆ ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಮಾಲೆ ಹಾಕಬೇಕು.ಜಾತಿ ಮತ್ತು ಪಕ್ಷದ ಪರವಾದ ಹೋರಾಟ ನನ್ನದ್ದಲ್ಲ ಎಂದು ಭಕ್ತರನ್ನುದ್ದೇಶಿಸಿ ಹೇಳಿದರು.
ಜೋಶಿಯವರನ್ನ ಬಹುಸಂಖ್ಯಾತ ಸಮಾಜದದವರು ಗೆಲ್ಲಿಸಿದ್ರು. ಗೆಲ್ಲಿಸಿದವರನ್ನೇ ಜೋಶಿಯವರು ಮರೆತರು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಜನರಿಗೆ ಟಿಕೆಟ್ ಆಮಿಷ ತೋರಿಸಿದರು. ಡಾ.ಮಹೇಶ ನಾಲವಾಡ ಅವರನ್ನ ಬಳಕೆ ಮಾಡಿಕೊಂಡು ಬಿಸಾಕಿದ್ದಾರೆ. ಶರಣು ಅಂಗಡಿ, ಕಾಂತೇಶ ಅವರನ್ನ ಸಹ ಜೋಶಿಯವರು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರ ಮಾಡಲು ಕಳಿಸಿದ್ದರು. ಈಶ್ವರಪ್ಪನವರಿಗೂ ಮೋಸ ಮಾಡಿದರು. ವೀರಭದ್ರಪ್ಪ ಹಾಲಹರವಿಗೆ, ಚಂದ್ರಶೇಖರ ಗೋಕಾಕ್ ಮೋಸ ಮಾಡಿದ್ದಾರೆ. ಜೋಶಿ ನಿಮಗೆ ಮೋಸ ಮಾಡ್ತಾರೆ ನಾನು ಲಿಖಿತ ರೂಪದಲ್ಲಿ ಬರೆದು ಕೊಡುತ್ತೆನೆಂದು ಈಶ್ವರಪ್ಪನವರಿಗೆ ನಾನು ಮೊದಲೇ ಹೇಳಿದ್ದೆ ಎಂದರು.
ವ್ಯಕ್ತಿಯ ಹಿತಕ್ಕಾಗಿ ಹೋರಾಟ ಮಾಡಿದವನು ನಾನಲ್ಲ. ನಾನೂ ಹತ್ತು ವರ್ಷದವನು ಇದ್ದಾಗ ಹೋರಾಟ ಮಾಡಿ ಮನೆ ಬಿಟ್ಟು, ಸನ್ಯಾಸಿ ಆದವನು. ಹದಿನೈದು ವರ್ಷದ ಹಿಂದೆ ಕೇಂದ್ರ ಮಂತ್ರಿ ಆದ ವ್ಯಕ್ತಿ ಈಗ ಶಾಸಕನಾಗಿ ಇವರ ಕೈಗೊಂಬೆ ಆಗಿದ್ದಾರೆ.. ಜೋಶಿ ಏನ್ ಹೇಳುತ್ತಾರೋ ಅದನ್ನೇ ಒದರುತ್ತಿದ್ದಾರೆ. ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ ಹೆಸರು ಹೇಳದೇ ವಾಗ್ದಾಳಿ ನಡೆಸಿದ ದಿಂಗಾಲೇಶ್ವರ ಶ್ರೀಗಳು, ಸದಾಕಾಲವೂ ಮೋದಿ ಪಕ್ಕ ಇರುವ ಜೋಶಿ ನಮ್ಮ ನಾಡಿಗೆ ಏನಾದ್ರೂ ತಂದು ಹಾಕ್ತಾರೆಂದು ಕಾಯ್ದು ನೋಡಿದ್ವಿ. ಆದರೆ ಏನೂ ತಂದು ಹಾಕಲಿಲ್ಲ, ಎಲ್ಲವನ್ನೂ ತಿಂದು ಹಾಕಿದ್ದಾರೆಂದು ಆರೋಪಿಸಿದರು.
ಸ್ವಾಮೀಜಿಗಳಿಗೆ ರಾಜಕಾರಣ ಏಕೆ ಬೇಕೆಂದು ಜೋಶಿ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತಾರೆ ಮತ್ತು ಮಾತನಾಡುತ್ತಾರೆ. ನಿಮ್ಮ ಕಾರ್ಯಕ್ರಮ ವೇದಿಕೆ ಹಂಚಿಕೊಂಡು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಸ್ವಾಮೀಜಿಗಳು ಬೇಕಾಗಿತ್ತಾ ಎಂದು ಪ್ರಶ್ನಿಸಿದರಲ್ಲದೇ, ನಾನು ಮಠದಲ್ಲಿ ಇದ್ರು ಅಷ್ಟೇ, ಬಯಲಿನಲ್ಲಿ ಇದ್ದರು ಅಷ್ಟೇ ಎಂದು ತಿಳಿದು ಈ ಹೋರಾಟ ಮಾಡುತ್ತಿದ್ದೆನೆ. ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕುಬಾರದು. ನೊಂದವರ ಬೆನ್ನಿಗೆ ಸ್ವಾಮೀಜಿಗಳು ನಿಲ್ಲಬೇಕು ಎಂದರು.
ಚುನಾವಣೆ ಮೊದಲು ನಾನು ಅವರನ್ನು ನೋಡಿಕೊಳ್ಳುತ್ತೇನೆ. ಚುನಾವಣೆ ಮುಗಿದ ಮೇಲೆ ಅವರು ನನ್ನನ್ನು ನೋಡಿಕೊಳ್ಳಲಿ, ನಾನು ಎಲ್ಲದಕ್ಕೂ ಸಿದ್ಧ ಎಂದು ಸವಾಲು ಹಾಕಿದ್ದರು. ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದು ಬರ್ತೆನಿ ಎಂದು ಜೋಶಿ ಹೇಳುತ್ತಿದ್ದಾರೆ. ಇವರಿಗೆ ಎಷ್ಟು ಅಹಂಕಾರ ಬಂದಿದೆ ಎನ್ನುವುದಕ್ಕೆ ಇದು ಉದಾಹರಣೆ. ಮತದಾರರ ಇವರ ಕಿಸೆಯಲ್ಲಿ ಇದ್ದಾರೆಯೆ ಎಂದರಲ್ಲದೇ ನಾನು ಇಂದಿನವರೆಗೆ ಬಿಜೆಪಿ ಟೀಕಿಸಿಲ್ಲ. ಯಾವುದೇ ನಾಯಕರನ್ನೂ ಎಳೆದು ತಂದಿಲ್ಲ. ಆದರೆ, ಜೋಶಿ ಅವರಂತಹ ಪ್ರತಿನಿಧಿ ಈ ಕ್ಷೇತ್ರಕ್ಕೆ ಬೇಡ ಎಂಬುದು ಒಂದಂಶದ ಅಜೆಂಡಾ ಎಂದರು.
ಸಭೆಯಲ್ಲಿ ರಾಘವೇಂದ್ರ ಸೊಂಡುರು, ಕಲ್ಲಪ್ಪ ಎಲಿವಾಳ, ಈಶ್ವರಚಂದ್ರ ಹೊಸಮನಿ, ಜಗದಿಶ ಹೊಸಮನಿ, ಸಿದ್ದಣ್ಣ ಕಂಬಾರ, ರಾಜು ನಾಯಕವಾಡಿ, ಶಿವಾನಂದ ಮುತ್ತಣ್ಣನವರ, ಆರ್.ಬಿ.ಪಾಟೀಲ, ವೀರಣ್ಣ ನೀರಲಗಿ, ನಾಗನಗೌಡ ನೀರಲಗಿ, ಎಂ.ಎಫ್.ಹಿರೇಮಠ, ಎ.ಬಿ.ಉಪ್ಪಿನ, ಬಳ್ಳೋಳ್ಳಿ, ಕುಮಾರಗೌಡ ಪಾಟೀಲ, ಹಾಲಯ್ಯ ಮುಚಖಂಡಿ, ರಾಜಶೇಖರ, ವಾಸುದೇವ ಮೇಟಿ, ನೀರಮಲ್ಲಯ್ಯ ಹೆಬ್ಬಳ್ಳಿ, ಎಂ.ಅರವಿಂದ ಸೇರಿದಂತೆ ಹಲವು ಸಮುದಾಯದ ಮುಖಂಡರು ಇದ್ದರು.