ಹುಬ್ಬಳ್ಳಿ: ನಗರದ ಪ್ರಸಿದ್ದ ಶ್ರೀ ಸಿದ್ಧಾರೂಢ ಮಠದ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಆರಂಭಗೊಂಡಿರುವ ವಿವಿಧ ಕಾರ್ಯಕ್ರಮಗಳು ಮಾ. 2ರವರೆಗೆ ರವರೆಗೆ ನಡೆಯಲಿದ್ದು, ಮಾ. 2ರಂದು ಸಂಜೆ 5-30 ಗಂಟೆಗೆ ರಥೋತ್ಸವ ಜರುಗಲಿದೆ ಎಂದು ಟ್ರಸ್ಟ್ ಕಮೀಟಿ ಚೇರಮನ್ ದೇವೇಂದ್ರಪ್ಪ ಮಾಳಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 2 ರವೆರೆಗೆ ಕೈಲಾಸ ಮಂಟಪದಲ್ಲಿ ಬೆಳಿಗ್ಗೆ 7.45 ಗಂಟೆಗೆ ಶಿವಾನಂದ ಜೋಶಿ ಅವರು ’ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ’ ಪುರಾಣವನ್ನು ಪಠಿಸುವರು. ಹಾಗೂ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿವಿಧ ಮಠಾಧೀಶರಿಂದ ವೇದಾಂತ ಉಪನ್ಯಾಸ ಕಾರ್ಯಕ್ರಮ ಜರುಗಲಿವೆ. ಸಂಜೆ 5ಗಂಟೆಗೆ ಕೀರ್ತನೆ ನಡೆದು ಮಹಾಪೂಜೆ ನಡೆಯುತ್ತವೆ ಎಂದರು.
ಮಾ. 1 ರಂದು ಮಹಾಶಿವರಾತ್ರಿ ಜಾಗರಣೆ ನಿಮಿತ್ತ ಶ್ರೀ ಸಿದ್ಧಾರೂಢರ ಪಲ್ಲಕ್ಕಿ ಉತ್ಸವವು ಗಣೇಶಪೇಟೆಯಲ್ಲಿರುವ ಜಡಿಸ್ವಾಮಿ ಮಠಕ್ಕೆ ಹೋಗಿ ಮರಳಿ ಶ್ರೀಮಠಕ್ಕೆ ಬರುವುದು. ಮಾ. 2ರಂದು ಸಂಜೆ 5.30 ಗಂಟೆಗೆ ರಥೋತ್ಸವ ನಡೆಯುವುದು. ಶಿವರಾತ್ರಿ ಅಮವಾಸ್ಯೆ ನಿಮಿತ್ಯ ಮಾ. 2ರಂದು ಬೆಳಿಗ್ಗೆ 5 ರಿಂದ 6 ಗಂಟೆವರೆಗೆ ಶ್ರೀಗಳ ಗದ್ದುಗೆಗೆ ಭಸ್ಮ ಸ್ನಾನ ನೆರವೇರು ವುದು. ಮಾ. 4ರಂದು ಸಂಜೆ 6 ಗಂಟೆಗೆ ಕೌದಿ ಪೂಜೆಯೊಂದಿಗೆ ಪ್ರಸಕ್ತ ಸಾಲಿನ ಜಾತ್ರಾ ಉತ್ಸವ ಸಮಾಪ್ತಿಯಾಗಲಿದೆ ಎಂದು ತಿಳಿಸಿದರು.
ಶ್ರೀಗಳ ರಥೋತ್ಸವ ನೆರವೇರಬೇಕಾದರೆ ಕೋವಿಡ್-19 ನಿಯಮಾವಳಿ ಗಳನ್ನು ಪಾಲಿಸಬೇಕಾಗಿದೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾವಣೆ ಆಗದಂತೆ ಸಹಕರಿಸಬೇಕು. ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವಿನಂತಿಸಿದರು.
ವೈಸ್ ಚೇರಮನ್ ಡಾ.ಗೋವಿಂದ ಮಣ್ಣೂರ, ಧರ್ಮದರ್ಶಿಗಳಾದ ಜಿ.ಎಸ್.ನಾಯಕ, ಎಸ್.ಐ.ಕೋಳಕೂರ, ಧರಣೇಂದ್ರ ಜವಳಿ, ಮಹೇಶಪ್ಪ ಹನಗೋಡಿ, ಶಾಮಾನಂದ ಪೂಜೇರಿ, ಮ್ಯಾನೇಜರ್ ಈರಣ್ಣ ತುಪ್ಪದ ಗೋಷ್ಠಿಯಲ್ಲಿದ್ದರು.