ಒಂದೇ ಸೂರಿನಡಿ ಹಲವು ವಿಶೇಷ ಶ್ಯಾಮಿಯಾನ್ ಸಾಮಾಗ್ರಿಗಳ ಪ್ರದರ್ಶನ
ಹುಬ್ಬಳ್ಳಿ: ಉತ್ತರ ಕರ್ನಾಟಕ ಶಾಮಿಯಾನ ಸಪ್ಲೈಯರ್ಸ್ ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಆ.5, 6 ಹಾಗೂ 7 ರಂದು ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್ ನಲ್ಲಿ ’ಶೃಂಗಾರ-2’ ನೇ ಮಹಾಧಿವೇಶನ ಶಾಮಿಯಾನ ಮಳಿಗೆಗಳ ಬೃಹತ್ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕೆ.ನರಸಿಂಹಮೂರ್ತಿ ಅಪ್ಪಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾಮಿಯಾನ ಸಿಬ್ಬಂದಿಗೆ ಒಂದೇ ಸೂರಿನಡಿ ಹಲವು ವಿಶೇಷ ಶ್ಯಾಮಿಯಾನ್ ಸಾಮಾಗ್ರಿಗಳು ದೊರೆಯಬೇಕು ಎಂಬ ಉದ್ದೇಶದಿಂದ ಶಾಮಿಯಾನ ಮಳಿಗೆಗಳ ಬೃಹತ್ ವಸ್ತು ಪದರ್ಶನ ಏರ್ಪಡಿಸಲಾಗಿದೆ ಎಂದರು.
5 ರಂದು ಎಐಡಿಡಬ್ಲು ಓ ವೈಸ್ ಚೇರಮನ್ ಜಿ. ಪೂರ್ಣ ಚಂದ್ರರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಅಧ್ಯಕ್ಷತೆ ಶಿವಾನಂದ ಮಾನಕರ್ ವಹಿಸುವರು ಎಂದರು.
ಮೊದಲನೆ ದಿನದ ಕಾರ್ಯಕ್ರಮದಲ್ಲಿ ಸಂಜೆ 5.30ಕ್ಕೆ ಡಾ.ಮೂಜಗು ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ವೀಣಾ ಬಾರದ್ವಾಡ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಪಾಲ್ಗೊಳ್ಳುವರು ಎಂದರು.
ಸಮಾರೋಪದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಎನ್ ಎಚ್.ಕೋನರೆಡ್ಡಿ ಸಹಿ ತ ಅನೇಕ ಗಣ್ಯ ಪಾಲ್ಗೊಳ್ಳಲಿದ್ದಾರೆಂದರು. ಪ್ರಧಾನ ಕಾರ್ಯದರ್ಶಿ ಬಿ.ಎಂ ಸೋಮಶೇಖರ್, ಎಐಡಿಡಬ್ಲ್ಯೂಓ ಉಪ ಚೇರಮನ್ ಜಿ. ಪೂರ್ಣಚಂದ್ರರಾವ್, ಶ್ರೀನಿವಾಸ ರಾವ್, ಗಂಗಧರ ದುಬೈ, ಮೋಹನ ಗಜಕೋಶ, ಇ. ಸುಬ್ರಹ್ಮಣ್ಯ, ಮೃತ್ಯುಂಜಯ ರೊಟ್ಟಿಮಠ, ರವಿ ಶೆಟ್ಟಿ, ವಿಜಯ ದಂಡಗಿ ಸಹಿತ ಅನೇಕರು ಗೋಷ್ಟಿಯಲ್ಲಿದ್ದರು.