ಹುಬ್ಬಳ್ಳಿ : ಹುಬ್ಬಳ್ಳಿ ಗಲಭೆಗೆ ಹಲವು ಸಂಘಟನೆಗಳ ಕೈವಾಡ ಇದೆ ಎಂಬ ಗೃಹ ಸಚಿವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯದ್ದಾಗಿದ್ದು, ಅವರು ಜವಾಬ್ದಾರಿಯಿಂದ ಹೇಳಿಕೆ ಕೋಡಬೇಕು. ಇಲ್ಲವೆಂದಾದಲ್ಲಿ ರಾಜೀನಾಮೆ ಕೊಟ್ಟು ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಆದರೆ ಅವರೇ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಅರಗ ಜ್ಞಾನೇಂದ್ರ ಗೃಹ ಮಂತ್ರಿಗಳಾಗಲು ಅನ್ ಫಿಟ್ ಎಂದರು.
ಹುಬ್ಬಳ್ಳಿಯಲ್ಲಿ ಕಳೆದ ಶನಿವಾರ ನಡೆದ ಗಲಭೆಯನ್ನು ಈಗಾಗಲೇ ಖಂಡಿಸಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ನಿರಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬೇಡಿ ಬಿಜೆಪಿ ಅವರಿಗೆ ತಾಕತ್ತಿದ್ದರೆ, ಶಾಂತಿ ಕದಡುವ ಎಸ್.ಡಿ.ಪಿ.ಐ, ಎಐಎಂಐಎಂ, ಆರ್.ಎಸ್.ಎಸ್, ಭಜರಂಗದಳ ಸಂಘಟನೆಗಳನ್ನು ಬ್ಯಾನ್ ಮಾಡಲಿ.ಕೂಸನ್ನೂ ಚೂಟಿ ತೊಟ್ಟಿಲು ತೋಗುವ ಕೆಲಸ ಮಾಡಬೇಡಿ ಎಂದು ಕಿಡಿ ಕಾರಿದರು.
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅಕ್ರಮ ಯಾರೇ ಮಾಡಿದ್ರು ಕ್ರಮ ಜರುಗಿಸಬೇಕು. ಕೆಲವರಿಗೆ ಅನ್ಯಾಯ ವಾಗಿದೆ.ಈ ಕುರಿತು ತನಿಖೆ ನಡೆದಿದೆ ಎಂದರು.
40% ಸರ್ಕಾರ ವಿಚಾರವನ್ನು ಜನಗಳೇ ಮುಂದೆ ತೀರ್ಮಾನ ಮಾಡುತ್ತಾರೆ ಎಂದ ಅವರು, ಆಪ್ ಪಕ್ಷ ಬಹಳ ದಿನಗಳಿಂದ ಇದೆ. ಕೇಜ್ರಿವಾಲ್ ಬಂದು ಚುನಾವಣೆ ನಿಂತರೂ ಇಲ್ಲಿ ಆಯ್ಕೆಯಾಗಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಪ್ರಕಾಶ ರಾಠೋಡ, ಅನಿಲಕುಮಾರ ಪಾಟೀಲ ಇದ್ದರು.