ಹುಬ್ಬಳ್ಳಿ: ಅಂತರರಾಷ್ಟ್ರೀಯ ಕ್ಯಾನ್ಸರ್ ದಿನದ ಅಂಗವಾಗಿ ಭಾನುವಾರ ಬೆಳಿಗ್ಗೆ 7.30ಕ್ಕೆ ನಗರದ ಕಿಮ್ಸ್ ಆಸ್ಪತ್ರೆಯಿಂದ ರೆಡಾನ್ ಆಸ್ಪತ್ರೆವರೆಗೆ ಸ್ಕೇಟಿಂಗ್ ರ್‍ಯಾಲಿ ಹಮ್ಮಿಕೊಳ್ಳಲಾಯಿತು.
ರ್‍ಯಾಲಿಯಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ, ರೋಗದ ಕುರಿತು ಮಾಹಿತಿ ನೀಡಲಾಯಿತು.
ರ್‍ಯಾಲಿ ನೇತೃತ್ವವನ್ನು ಹುಬ್ಬಳ್ಳಿ ರೌಂಡ್ ಟೇಬಲ್ 37, ಹುಬ್ಬಳ್ಳಿ ಲೇಡಿಸ್ ಸರ್ಕಲ್ 45, ಹುಬ್ಬಳ್ಳಿ ರೊಲರ್ ಸ್ಕೇಟಿಂಗ್ ಅಕಾಡಮಿ, ರೆಡಾನ್ ಕ್ಯಾನ್ಸ್‌ರ್ ಸೆಂಟರ್ ವಹಿಸಿತ್ತು.
ರ್‍ಯಾಲಿಯಲ್ಲಿ ಹುಬ್ಬಳ್ಳಿ ಲೇಡಿಸ್ ಸರ್ಕಲ್ 45ರ ಅಧ್ಯಕ್ಷೆ ಪೂನಮ್ ಪ್ರಮೋದ್ ಹುಟಗಿಕರ, ಎಚ್‌ಆರ್‌ಟಿ ಚೆರಮನ್ ಆದರ್ಶ ಮೆಹರವಾಡೆ, ಪ್ರಮೋದ ಹುಟಗಿಕರ, ಎಚ್‌ಆರ್‌ಸಿಎ ಅಧ್ಯಕ್ಷೆ ಸಿ.ಸಿ.ನಿರ್ಮಲಾ, ಡಾ.ವೆಂಕಟೇಶ ಮೂಲಿಮನಿ, ಡಾ.ಸಂಜೀವ ಕುಲಗೋಡ, ಸ್ಕೇಟಿಂಗ್ ತರಬೇತುದಾರ ಅಕ್ಷಯ ಸೂರ್ಯವಂಶಿ, ಸಚೀನ ಶಾ, ಡಾ.ವಿವೇಕ ಪಾಟೀಲ, ಡಾ.ಸಂಜೀವ ಕುಲಗೋಡ, ಡಾ.ಶೀತಲ ಕುಲಗೋಡ, ಹುಮಾನಸು ಕೊಠಾರಿ, ಮಾನಸಿ ಕೋಠಾರಿ, ಮೈಥಾಲಿ ಅನಂತ ಮುಳಗುಂದ, ಡಾ.ಸಂಜಯ ಮಶಾಲ, ಡಾ. ರಾಘವೇಂದ್ರ, ಡಾ.ಅಪೂರ್ವಾ, ಪುನೀತ ಮಾಶಾಳ, ಸಚಿನ ಆಕಳವಾಡಿ, ಶಿರೂರ, ವೇದಿಕಾ ಮುಳಗುಂದ, ಉಷಾ ಕುಬಸದ ಗೌಡರ ಸೇರಿದಂತೆ ಮಕ್ಕಳು, ಕ್ಲಬ್ ಸದಸ್ಯರು, ರೆಡಾನ್ ಆಸ್ಪತ್ರೆ ಸಿಬ್ಬಂದಿ ಇದ್ದರು.