ಹುಬ್ಬಳ್ಳಿ: ಇಲ್ಲಿನ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ನೂತನ ಪಿಎಸ್ಐ ಆಗಿ ಆರ್.ಎಚ್.ನದಾಫ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಧಾರವಾಡ ತಾಲೂಕಿನ ಲೋಕೂರ ಗ್ರಾಮದ ನದಾಫ್, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕುಸ್ತಿ ಪಟುವಾಗಿದ್ದಾರೆ.
ಇಲಾಖೆಯಲ್ಲಿ ತಮ್ಮ ದಕ್ಷ ಸೇವೆಯಿಂದ ಮುಖ್ಯಮಂತ್ರಿಗಳಿಂದ ಪದಕ ಪುರಸ್ಕೃತರಾಗಿರುವ ನದಾಫ್ ಅವರು, ಇತ್ತೀಚೆಗೆ ಡಬಲ್ ಸ್ಟಾರ್ಗೆ ಬಡ್ತಿ ಪಡೆದಿದ್ದರು.