ಹುಬ್ಬಳ್ಳಿ-ಧಾರವಾಡ ಸುದ್ದಿ

ದಕ್ಷಿಣ ನೋಂದಣಿ ಕಚೇರಿಗೆ ಕೊನೆಗೂ ’ಕೋಟಿ’ಯಿಂದ ಮುಕ್ತಿ

ಭ್ರಷ್ಟಾಚಾರ ಆರೋಪದ ಹಿನ್ನೆಲೆ : ರಾಮದುರ್ಗಕ್ಕೆ ವರ್ಗ

ಮುದ್ರಾಂಕ ಆಯುಕ್ತರಿಂದ ಕಾರಣ ಕೇಳಿ ನೋಟಿಸ್

ಸಬ್ ರಿಜಿಸ್ಟ್ರಾರ್ ಕಚೇರಿ ಅಕ್ರಮ: ವರದಿಗೆ ಡಿಸಿ ಖಡಕ್ ಸೂಚನೆ

ಹುಬ್ಬಳ್ಳಿ : ನಗರದ ಮಿನಿ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಉಪ ನೋಂದಣಿ ಕಚೇರಿ ( ದಕ್ಷಿಣ )ಯಲ್ಲಿ ಅಗತ್ಯ ದಾಖಲೆಗಳಿದ್ದರೂ ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ಅಲ್ಲದೇ ವ್ಯಾಪಕ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಇದುವರೆಗೆ ಹಿರಿಯ ಉಪನೋಂದಣಾಧಿಕಾರಿಗಳಾಗಿದ್ದ ಸಹದೇವ ಬಿ.ರೆಡ್ಡಿ ಕೋಟಿ ವರ್ಗಾವಣೆಗೊಂಡಿದ್ದು ಅವರ ಸ್ಥಾನದಲ್ಲಿ ಉತ್ತರ ನೊಂದಣಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಂ.ಎಂ.ಘಂಟಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.


ದಿ. 30 ರಂದು ನೋಂದಣಿ ಮಹಾಪರೀವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಕೋಟಿಯವರಿಗೆ ಕಾರಣ ಕೇಳುವ ನೋಟಿಸ್ ನೋಡಿ ಕೂಡಲೇ 11-12-2023 ರ ಆದೇಶದಂತೆ ಕೂಡಲೇ ರಾಮದುರ್ಗಕ್ಕೆ ಹೋಗಿ ವರದಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ರಾಮದುರ್ಗಕ್ಕೆ ತೆರಳಿದ ಹಿನ್ನೆಲೆಯಲ್ಲಿ ಘಂಟಿ ಇಂದು ಕಾರ್ಯಭಾರ ವಹಿಸಿಕೊಂಡಿದ್ದಾರೆ.


ತಮ್ಮ ವಿರುದ್ಧ ಕೆಸಿಎಸ್ ಆರ್ ನಿಯಮದನ್ವಯ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಒಂದು ವಾರದಲ್ಲಿ ಸಮಜಾಯಷಿ ನೀಡುವಂತೆಯೂ ಸೂಚಿಸಲಾಗಿದೆಯಲ್ಲದೇ ಜಿಲ್ಲಾ ನೋಂದಣಾಧಿಕಾರಿಗಳು ಸಹದೇವ ಕೋಟಿ ರಾಮದುರ್ಗಕ್ಕೆ ವರದಿ ಮಾಡಿಕೊಂಡ ಬಗ್ಗೆ ವರದಿ ನೀಡಲು ಸ್ಪಷ್ಟ ಸೂಚನೆ ನೀಡಿದೆ.
ಘಂಟಿ ಅವರನ್ನು ಆಡಳಿತಾತ್ಮಕ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ. ಕೋಟಿಯ ವರ್ತನೆಯಿಂದ ಬೇಸತ್ತ ಅನೇಕ ಬಿಲ್ಡರ್‌ಗಳು ನಿಟ್ಟುಸಿರು ಬಿಟ್ಟಿದ್ದಾರೆ.

 

ದಿ. 41-05-2024 ರ ಸಂಜೆ ದರ್ಪಣ ಸಂಚಿಕೆಯಲ್ಲಿ ದಕ್ಷಿಣ ನೋಂದಣಿ ಕಚೇರಿಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮದವರಿಗೆ ಅನಗತ್ಯ ಕಿರಿಕಿರಿ,ಮದ್ಯವರ್ತಿಗಳ ಹಾವಳಿ ಬಗ್ಗೆ ಜನತೆ ಹಾಗೂ ಇತರ ಗಣ್ಯರ ಅಭಿಪ್ರಾಯಗಳನ್ನು ಪಡೆದು ಸವಿವರವಾಗಿ ’ದಕ್ಷಿಣ ನೋಂದಣಿ ಕಚೇರಿಯಲ್ಲಿ ಅಕ್ರಮಕ್ಕೆ ರಹದಾರಿ!, ಲಕ್ಷ ಕೊಟ್ಟರೆ..ಸರ್ಕಾರಕ್ಕೆ ’ಕೋಟಿ’ ವಂಚನೆ ಎಂಬ ಶೀರ್ಷಿಕೆಯಡಿಯಲ್ಲಿ ಸವಿವರವಾಗಿ ವರದಿ ಪ್ರಕಟವಾಗಿತ್ತಲ್ಲದೇ ಅವಳಿನಗರದಲ್ಲಿ ಈ ದಿಟ್ಟ ವರದಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಇತರ ಕೆಲ ಮಾಧ್ಯಮಗಳಲ್ಲಿ, ವಾಹಿನಿಗಳಲ್ಲೂ ಈ ಕಚೇರಿಯ ಭೃಷ್ಟಾಚಾರ ಪ್ರಕಟವಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

 

ದಕ್ಷಿಣ ಉಪ ನೋಂದಣಾಧಿಕಾರಿಗಳ ಅನಗತ್ಯ ಕಿರಿ ಕಿರಿ ನನ್ನಂತೆ ಹಲವು ಡೆವಲಪರ್‌ಗಳಿಗೂ ಆಗಿತ್ತಲ್ಲದೇ ವರ್ಗಾವಣೆಯಾದರೂ ಇಲ್ಲಿಯೇ ಮುಂದುವರಿದಿದ್ದರು. ಕೊನೆಗೂ ಸರ್ಕಾರ ನಿಯೋಜಿತ ಸ್ಥಳಕ್ಕೆ ಕಳುಹಿಸಿದ್ದು ಸ್ವಾಗತಾರ್ಹವಾಗಿದೆಯಲ್ಲದೆ ಮುಂದೆ ಬರುವವರಿಗೂ ಒಂದು ಪಾಠವಾಗಲಿದೆ.


ವಿರೇಶ ಉಂಡಿ, ದುರ್ಗಾ ಡೆವಲಪರ್ಸ, ವ್ಯವಸ್ಥಾಪಕ ನಿರ್ದೇಶಕರು

ಸಬ್ ರಿಜಿಸ್ಟ್ರಾರ್ ಕಚೇರಿ ಅಕ್ರಮ: ವರದಿಗೆ ಡಿಸಿ ಖಡಕ್ ಸೂಚನೆ

ಧಾರವಾಡ : ಧಾರವಾಡದ ಹಿರಿಯ ಉಪನೋಂದಣಾಧಿಕಾರಿಗಳು ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿ ಮತ್ತು ಹುಬ್ಬಳ್ಳಿ ದಕ್ಷಿಣ ಹಿರಿಯ ಉಪನೋಂದಣಾಧಿಕಾರಿ ಹಾಗೂ ವಿವಾಹಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜನರಿಂದ ಸರಕಾರಿ ಶುಲ್ಕಕ್ಕಿಂತಲೂ ಹೆಚ್ಚಿನ ಹಣ ವಸೂಲಿ ಹಾಗೂ ಉದ್ದೇಶಪೂರ್ವಕ ಕಾರ್ಯವಿಳಂಬ ಕುರಿತು ವಿಚಾರಣೆ ನಡೆಸಿ ಪೂರಕ ದಾಖಲೆಗಳೊಂದಿಗೆ 24 ಗಂಟೆಯೊಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾ ನೋಂದಣಾಧಿಕಾರಿಗೆ ಮೇ 29ರಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಸದರಿ ಕಚೇರಿಗಳಲ್ಲಿನ ಸಿಬ್ಬಂದಿಗಳು ಋಣಭಾರ ಪ್ರಮಾಣಪತ್ರ ನೀಡಲು ಸೇರಿದಂತೆ ಕಚೇರಿಗೆ ಸಂಬಂಧಿಸಿದ ಜನರ ಕೆಲಸಗಳನ್ನು ಮಾಡಿಕೊಡಲು ನಿಗದಿಗಿಂತಲೂ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಹಾಗೂ ಸಾರ್ವಜನಿಕರ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಡದೇ ಉದ್ದೇಶಪೂರ್ವಕ ವಿಳಂಬ ನೀತಿ ತೋರುತ್ತಿರುವ ಬಗ್ಗೆ ಸಂಜೆ ದರ್ಪಣ ಸೇರಿದಂತೆ ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣದ ಸುದ್ದಿವಾಹಿನಿಯಲ್ಲಿ ವರದಿ ಪ್ರಕಟಗೊಂಡಿದ್ದನ್ನು ಉಲ್ಲೇಖಿಸಿರುವ ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ.

administrator

Related Articles

Leave a Reply

Your email address will not be published. Required fields are marked *