ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿಪಕ್ಷ ನಾಯಕಿಯಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯೆ ಸುವರ್ಣ ಕಲಕುಂಟ್ಲ ನೇಮಕಗೊಂಡಿದ್ದಾರೆ.
ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಅವರು ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಸುವರ್ಣ ಅವರ ಹೆಸರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿಪಕ್ಷ ನಾಯಕಿಯಾಗಿರುವ ಸುವರ್ಣ ಅವರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಗೆ ಬರುವ ೫೯ನೇ ವಾರ್ಡಿನ ಸದಸ್ಯೆಯಾಗಿದ್ದಾರೆ. ಮೇಯರ್ ಮಹಿಳೆಯಾಗಿದ್ದು ಕಾಂಗ್ರೆಸ್ ಸಹ ಮಹಿಳೆಯರನ್ನೇ ವಿರೋಧ ಪಕ್ಷಕ್ಕೆ ನಿಯುಕ್ತಿಗೊಳಿಸಿದೆ. ಕಳೆದ ಬಾರಿ ಪೂರ್ವ ಕ್ಷೇತ್ರದ ಪಾಲಾಗಿದ್ದ ಸ್ಥಾನ ಈ ಬಾರಿ ಸೆಂಟ್ರಲ್ ಕ್ಷೇತ್ರಕ್ಕೆ ಬಂದಂತಾಗಿದೆ.
ನನ್ನನ್ನು ಆಯ್ಕೆ ಮಾಡಿದ ಕೆಪಿಸಿಸಿ ಅಧ್ಯಕ್ಷರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹುಬ್ಬಳ್ಳಿ ಧಾರವಾಡ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಮತ್ತು ಜಿಲ್ಲೆಯ ಸಚಿವರು , ಶಾಸಕರು ಪರಿಷತ್ ಸದಸ್ಯರು ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸುವರ್ಣ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಾ, ಹುಬ್ಬಳ್ಳಿ ಧಾರವಾಡ ಮಹಾನಗರ ಜನತೆಯ ಸ್ಪಂದಿಸುತ್ತಾ ಜನರ ಧ್ವನಿಯಾಗಿ ಹಾಲಿ ಪಾಲಿಕೆ ಅಧಿಕಾರದಲ್ಲಿರುವ ಬಿಜೆಪಿ ಎಚ್ಚರಿಸುತ್ತಾ ಸಂಘಟಿತರಾಗಿ ಎಲ್ಲಾ ಕಾಂಗ್ರೆಸ್ ಪಾಲಿಕೆ ಸದಸ್ಯರು ಕಾರ್ಯ ನಿರ್ವಹಿಸುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.