ಹುಬ್ಬಳ್ಳಿ-ಧಾರವಾಡ ಸುದ್ದಿ
ಪಾಲಿಕೆ ಆಯುಕ್ತರ ’ಟಗರು’ ಸ್ಟೆಪ್ ವೈರಲ್!

ಪಾಲಿಕೆ ಆಯುಕ್ತರ ’ಟಗರು’ ಸ್ಟೆಪ್ ವೈರಲ್!

ಟಗರು” ಸಿನೆಮಾ ಹಾಡಿಗೆ ಸ್ಟೆಪ್ ಹಾಕಿದ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲ

ಧಾರವಾಡ: ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದ ಅಂಗವಾಗಿ ಪೇಡೆ ನಗರಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಕೆ.ಗೋಪಾಲಕೃಷ್ಣ ಅವರು ’ಟಗರು’ ಚಿತ್ರದ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಕೆ.ಎ.ಎಸ್ ಹಾಗೂ ಐ.ಎ.ಎಸ್ ಅಧಿಕಾರಿಗಳು ಗಂಭೀರವಾಗಿದ್ದು ಉಳಿದವರಿಂದ ಅಂತರ ಕಾಯ್ದುಕೊಳ್ಳುತ್ತಾರೆ ಎಂಬ ಮಾತಿಗೆ ವ್ಯತಿರಿಕ್ತವಾಗ ಜನರೊಂದಿಗೆ ಬೆರೆಯುತ್ತ ಕಾರ್ಯ ನಿರ್ವಹಿಸುತ್ತಿರುವ ಆಯುಕ್ತರು,
ಯಾವ ನಟರಿಗಿಂತಲೂ ಕಡಿಮೆ ಇಲ್ಲ ಎನ್ನುವಂತೆ ನೃತ್ಯ ಮಾಡಿದ್ದು ಇವರ ಸಖತ್ ಸ್ಟೆಪ್ ಹಾಕಿದ್ದನ್ನು ಕಂಡು ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ.
ಅಧಿಕಾರಿ ತಾನು ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದಕೊಂಡು ಹೋಗುವುದರ ಜೊತೆಗೆ ನಾನೂ ನಿಮ್ಮೊಳಗೊಬ್ಬ ಎಂಬುದನ್ನ ಬಿಂಬಿಸುತ್ತ ಹೋದರೇ, ಸಾಕಷ್ಟು ಬದಲಾವಣೆ ತರಬಹುದಾಗಿದ್ದು, ಆಯುಕ್ತರ ನೃತ್ಯ ಅದಕ್ಕೊಂದು ತಾಜಾ ಉದಾಹರಣೆಯಾಗಿದೆ.

 

 

administrator

Related Articles

Leave a Reply

Your email address will not be published. Required fields are marked *