ಹುಬ್ಬಳ್ಳಿ-ಧಾರವಾಡ ಸುದ್ದಿ
ತಹಸೀಲ್ದಾರ್ ಮೇಲೆ ಹಲ್ಲೆ ಮಾಡಿದವರ ಗಡಿಪಾರು ಮಾಡಿ

ತಹಸೀಲ್ದಾರ್ ಮೇಲೆ ಹಲ್ಲೆ ಮಾಡಿದವರ ಗಡಿಪಾರು ಮಾಡಿ

ಹುಬ್ಬಳ್ಳಿ: ಬೀದರ್ ಜಿಲ್ಲೆಯ ಹುಮನಾಬಾದನಲ್ಲಿ ಸರ್ಕಾರಿ ಕರ್ತವ್ಯದ ಮೇಲೆ ಇದ್ದ ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಅಮಾನುಷ ವಾದ ಹಲ್ಲೆಯನ್ನು ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾ ಸಭಾ ರಾಜ್ಯ ಯುವ ಘಟಕದ ತೀವ್ರವಾಗಿ ಖಂಡಿಸಿದೆ.
ಯುವ ಘಟಕದ ಅಧ್ಯಕ್ಷ ಬಂಗಾರೇಶ ಹಿರೇಮಠ ಪ್ರಕಟಣೆಯಲ್ಲಿ, ಸರ್ಕಾರದ ಭಾಗವಾಗಿ ಕೆಲಸ ಮಾಡುವ ಅಧಿಕಾರಗಳು ಕೆಲಸಗಾರರಿಗೆ ಸುರಕ್ಷತೆ ಇಲ್ಲ ಎಂದರೇ ಜನ ಸಾಮಾನ್ಯರ ಹೇಗಿರಬಹುದು.ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ವಿಶೇಷ ಮುತುವರ್ಜಿ ವಹಿಸಿ ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿ ಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರ ಈ ಘಟನೆಯನ್ನು ಅತೀ ಗಂಭೀರವಾಗಿ ಪರಿಗಣಿಸಿ ಆರೋಪಿ ಗಳನ್ನು ಬಂಧಿಸಿ, ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 

ತಹಶೀಲ್ದಾರ್ ಮೇಲೆ ಹಲ್ಲೆ : ಕಠಿಣ ಕಾನೂನಿಗೆ ಮನವಿ


ಹುಬ್ಬಳ್ಳಿ : ಹುಮನಾಬಾದನಲ್ಲಿ ಕರ್ತವ್ಯದ ಮೇಲೆ ಇದ್ದ ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಅಮಾನುಷ ಹಲ್ಲೆಯನ್ನು ಧಾರವಾಡ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ತೀವ್ರವಾಗಿ ಖಂಡಿಸಿದೆ.
ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಹಾಗೂ ಸರ್ಕಾರಿ ನೌಕರಿಗೆ ರಕ್ಷಣೆ ನೀಡಬೇಕೆಂಬ ಮನವಿಯನ್ನು ಜಿಲ್ಲಾಧ್ಯಕ್ಷ ಪರಮಾನಂದ ಶಿವಳ್ಳಿಮಠ ನೇತೃತ್ವದಲ್ಲಿ ತಹಶೀಲ್ದಾರರಾದ ಪ್ರಕಾಶ ನಾಶಿ ಹಾಗೂ ಶಶಿಧರ ಮಾಡ್ಯಾಳರವರಿಗೆ ಸಲ್ಲಿಸಲಾಯಿತು.
ಬಂಗಾರಪೇಟೆ, ಮಾನ್ವಿ, ಮಂಡ್ಯ ಮುಂತಾದೆಡೆ ಪದೇ ಕಂದಾಯ ಇಲಾಖೆಗಳ ಅಧಿಕಾರಿಗಳ ಮೇಲೆ ಹಲ್ಲೆಯ ಸಾಲು ಸಾಲು ಪ್ರಕರಣಗಳು ನಡೆಯುತ್ತಿದೆ.ಹುಮ್ನಾಬಾದ ಘಟನೆಗೆ ಕಾರಣರಾದವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು.ಅಲ್ಲದೇ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಮುಂತಾದವರ ಮೇಲೆ ಹಲ್ಲೆ ನಡೆದಲ್ಲಿ ದಾಖಲಿಸಲು ಕಠಿಣ ಕಾನೂನು ರೂಪಿಸಿ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಪರ್ ತಹಶೀಲ್ದಾರ ವಿಜಯಕುಮಾರ ಕಡಕೋಳ ಉಪ ತಹಶೀಲ್ದಾರ ಸಂಜು ಸಿಂಪರ, ಪಠಾಣ, ಹೊಂಗಲ, ಚಿಕ್ಕನಗೌಡ್ರ ಮತ್ತು ತಾಲೂಕ ಪಧಾಧಿಕಾರಿಗಳಾದ ಮಂಜು ಪಮ್ಮಾರ,ಗಿರೀಶ ಭರದ್ವಾಡ, ಶ್ರೀಮತಿ ಎಲ್ಲಿಜೇಬೆತ್ ನಾಯಕ ಮತ್ತು ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಯವರು ಈ ವೇಳೆ ಉಪಸ್ಥಿತರಿದ್ದರು.

 

administrator

Related Articles

Leave a Reply

Your email address will not be published. Required fields are marked *