ಹುಬ್ಬಳ್ಳಿ-ಧಾರವಾಡ ಸುದ್ದಿ

ಉಗ್ರರ ತರಬೇತಿ ವದಂತಿ : ಖಾಕಿ ಪುಲ್ ಅಲರ್ಟ್

ಹುಬ್ಬಳ್ಳಿ: ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ಬಂಧಿತರಾಗಿರೋ ಮೂವರು ಶಂಕಿತ ಉಗ್ರರ ಪೈಕಿ ಪ್ರಮುಖ ಶಹನವಾಜ್ ಎಂಬಾತನಿಗೆ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ತರಬೇತಿ ಆಗಿರೋ ಮಾಹಿತಿ ದೆಹಲಿ ಪೊಲೀಸ್ ವಿಶೇಷ ದಳದಿಂದಲೇ ಮಾಹಿತಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಅವಳಿನಗರ ಹಾಗೂ ಜಿಲ್ಲೆಯ ಪೊಲೀಸರು ಪುಲ್ ಅಲರ್ಟ ಆಗಿದ್ದಾರೆ.


ಮೂವರು ಉಗ್ರರನ್ನು ಬಂಧಿಸಿ ಅವರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ತರಬೇತಿ ಪಡೆದಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ದಿಲ್ಲಿ ಪೊಲೀಸರೇ ಪತ್ರಿಕಾಗೋಷ್ಠಿಯಲ್ಲಿ ಬಾಯಿ ಬಿಟ್ಟ ಹಿನ್ನೆಲೆಯಲ್ಲಿ ಅನೇಕ ವರ್ಷಗಳ ನಂತರ ಮತ್ತೆ ಉಗ್ರರ ಕ್ಯಾಂಪಿನ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಜನತೆಯೂ ಆತಂಕಗೊಳ್ಳುವಂತಾಗಿದೆ. ಸದ್ಯ ಈ ಸುದ್ದಿ ವ್ಯಾಪಕವಾಗಿ ವೈರಲ್ ಆಗಿದೆ.
ದೆಹಲಿ ಪೋಲೀಸರು ಹೇಳಿದ ಬೆನ್ನಲ್ಲೆ ಹುಬ್ಬಳ್ಳಿ-ಧಾರವಾಡ ಪೋಲೀಸರು ಕಮೀಷನರ್ ರೇಣುಕಾ ಸುಕುಮಾರ ಹಾಗೂ ಎಸ್ ಪಿ ಗೋಪಾಲ ಬ್ಯಾಕೋಡಿ ಆದೇಶದಂತೆ ಜಿಲ್ಲೆಯ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.

ಯಾವುದೇ ಮಾಹಿತಿಯಿಲ್ಲ

ಉಗ್ರರ ಬಂಧನ, ತರಬೇತಿ ಮುಂತಾದ ವರದಿಗಳು ಮಾಧ್ಯಮಗಳಲ್ಲಿ ಬಂದ ನಂತರ ನಾವು ದಿಲ್ಲಿ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಸಾಮಾನ್ಯವಾಗಿ ಇಂತಹ ಘಟನೆಗಳಾದಲ್ಲಿ ನಮಗೆ ಮಾಹಿತಿ ಬರುತ್ತಿತ್ತು. ಆದರೆ ಅವರಿಂದ ಇದುವರೆಗೂ ಯಾವುದೆ ಮಾಹಿತಿಯಿಲ್ಲ.


ರೇಣುಕಾ ಸುಕುಮಾರ್
ಮಹಾನಗರ ಪೊಲೀಸ್ ಆಯುಕ್ತೆ

administrator

Related Articles

Leave a Reply

Your email address will not be published. Required fields are marked *