ಹುಬ್ಬಳ್ಳಿ-ಧಾರವಾಡ ಸುದ್ದಿ
ಇಂಡಿಯಾ ಬುಕ್ ರೆಕಾರ್ಡ್ಸ್ ಪುಟಕ್ಕೆ ’ಐರನ್ ಮ್ಯಾನ್’

ಇಂಡಿಯಾ ಬುಕ್ ರೆಕಾರ್ಡ್ಸ್ ಪುಟಕ್ಕೆ ’ಐರನ್ ಮ್ಯಾನ್’

‘ಅಪ್ಪು’ಗೆ ಗೌರವ ಸಮರ್ಪಿಸಿದ ಚೆನ್ನಣ್ಣವರ

ಹುಬ್ಬಳ್ಳಿ: ಹೆಸ್ಕಾಂ ಜಾಗೃತದಳದ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ “ದಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್”ಗೆ ಸೇರುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಯಾರೂ ಮಾಡದ ಸಾಧನೆ ಮಾಡಿ ಹಿರಿಮೆ ಮೆರೆದಿದ್ದಾರೆ.


2021 ರಲ್ಲಿ ಡಿಸೆಂಬರ್ ತಿಂಗಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 9 ರಾಜ್ಯಗಳ ಮುಖಾಂತರ ಸುಮಾರು 3649 ಕಿ.ಮಿ ಸೈಕಲ್ ಯಾತ್ರೆ ನಡೆಸಿದ್ದರು. 42 ರಿಂದ 49 ವಯಸ್ಸಿನೊಳಗಿನ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರಲ್ಲದೇ ಈ ಹಿಂದೆ ಲೋಹ ಪುರುಷ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ.


ತಮ್ಮ ಈ ಯಶಸ್ಸಿನ ಯಾತ್ರೆಗೆ ತಾಯಿ, ಪತ್ನಿ, ಮಕ್ಕಳು ಹಾಗೂ ಸಹಯಾತ್ರಿಗಳನ್ನು ನೆನೆದಿರುವ ಅವರು ತಮಗೆ ಸಿಕ್ಕಿರುವ ಈ ಗೌರವವನ್ನು ಕನ್ನಡಿಗರ ಪಾಲಿನ ’ಅಪ್ಪು’ ದಿ. ಪುನೀತ ರಾಜಕುಮಾರ ಅವರಿಗೆ ಅರ್ಪಣೆ ಮಾಡಿದ್ದಾರೆ. ೨೦೨೧ರ ಅಕ್ಟೋಬರ್‌ನಲ್ಲೇ ಈ ಸೈಕಲ್ ಯಾತ್ರೆ ಕೈಗೊಂಡಿದ್ದರೂ ಪುನೀತ್ ನಿಧನದ ಕಾರಣ ಮೊಟಕುಗೊಳಿಸಿದ್ದರು.

administrator

Related Articles

Leave a Reply

Your email address will not be published. Required fields are marked *