ಹುಬ್ಬಳ್ಳಿ-ಧಾರವಾಡ ಸುದ್ದಿ

ಡಬ್ಬ… ಡಬ್… ಡಬ್… ಸೌಂಡ್ ಮಾಡಿದ ರೋಡ್ ರೋಮಿಯೋಗಳ ಬೈಕ್ ವಶಕ್ಕೆ

ವಿಡಿಯೋ ಕೂಡಾ ಇದೆ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ


ಧಾರವಾಡ: ಊರ್ ತುಂಬಾ ಡಬ್ಬ ಡಬ್ ಡಬ್ ಸೌಂಡ್ ಮಾಡುತ್ತಾ ಊರ್ ತುಂಬಾ ತಿರುಗಾಡುತ್ತಿದ್ದ ರೋಡ್ ರೋಮಿಯೋಗಳ ಗಾಡಿಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡು ಬಿಸಿಮುಟ್ಟಿಸಿದ್ದಾರೆ.


ಸ್ವಾತಂತ್ರ್ಯ ದಿನಾಚರಣೆ ಎಂದು ನಗರದ ಕೆಸಿಡಿ ರಸ್ತೆ, ಹಿಂದಿ ಪ್ರಚಾರ ಸಭಾ ರಸ್ತೆ, ಸಪ್ತಾಪುರ, ಜಯನಗರ, ಶ್ರೀನಗರ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಬೇಕಾಬಿಟ್ಟಿ ಸೈಲೆನ್ಸರ್ ಹಾಕಿಕೊಂಡು ತಿರುಗಾಡುತ್ತಿದ್ದ ಹುಡುಗರ ವಾಹನಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.


ಇಂದು ಬೆಳಿಗ್ಗೆ ಆರ್.ಎನ್.ಶೆಟ್ಟಿ ಮೈದಾನದ ಬಳಿ ಮಕ್ಕಳು ಧ್ವಜಾರೋಹಣಕ್ಕೆ ಹೋಗುತ್ತಿರುವಾಗ ಈ ಗಾಡಿಗಳನ್ನು ಹೊಡೆಯುತ್ತಿರುವ ಸವಾರರನ್ನು ನೋಡಿ ಸುಮಾರು ಜನ ಈ ಸವಾರರರಿಗೆ ಹಿಡಿ ಶಾಪ ಹಾಕುತ್ತಿರುವುದು ಸಾಮನ್ಯವಾಗಿತ್ತು.


ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ನೋಡಿ ಸುಮಾರು 10ಕ್ಕೂ ಹೆಚ್ಚು ಬೈಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಎಂ.ಎಸ್.ನಾಯ್ಕರ ಅವರು ಸಂಜೆ ದರ್ಪಣಕ್ಕೆ ತಿಳಿಸಿದರು.
ಈ ಮುಂದೆಯೂ ಈ ರೀತಿ ಯಾರಾದರೂ ಬೈಕ್ ಓಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡಿದರೆ ಸೂಕ್ತ ಕಾನೂನು ಕ್ರಮ ಫಿಕ್ಸ್ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಿಪಿಐ ಮಲ್ಲನಗೌಡ ನಾಯ್ಕರ್ ನೇತೃತ್ವದಲ್ಲಿ ವಿ.ಐ. ಬಳ್ಳಾರಿ. ಎಎಸ್‌ಐ ಸೀತಾ ಕಟಗಿ. ಅಶ್ಪಾಕ್ ಬಡಕಶಪ್ಪನವರ್. ವಿದ್ಯಾ ಭಜಂತ್ರಿ. ದ್ಯಾಮಣ್ಣ ಬಸ್ಸು ಹಿರೇರಿ. ಶಿವಾನಂದ್ ಸುತಗಟ್ಟಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

administrator

Related Articles

Leave a Reply

Your email address will not be published. Required fields are marked *