ಹುಬ್ಬಳ್ಳಿ-ಧಾರವಾಡ ಸುದ್ದಿ

ಪ್ರತ್ಯೇಕ ಪಾಲಿಕೆ ವಿಷಯದಲ್ಲಿ ರಾಜಕೀಯವಿಲ್ಲ

ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಚಿಂಚೋರೆ

ಧಾರವಾಡ : ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಡಿಕೆ ವಿಷಯದಲ್ಲಿ ತಾವು ಯಾವುದೇ ರಾಜಕೀಯ ಮಾಡಿಲ್ಲ. ಒಂದು ವೇಳೆ ತಾವು ರಾಜಕೀಯ ಮಾಡಿದ್ದನ್ನು ಶಾಸಕ ಅರವಿಂದ ಬೆಲ್ಲದ ಅವರು ಸಾಬೀತುಪಡಿಸಿದರೆ ಪ್ರಸಕ್ತ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಸವಾಲು ಹಾಕಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಚುನಾವಣೆಯ ಸೋಲಿನ ಭೀತಿಯಿಂದ ಹತಾಶರಾಗಿ ಬೆಲ್ಲದ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕುಟುಕಿದರು.


೨೦೨೧ ರಿಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡಿಕೆ ಹೋರಾಟ ಜನರಿಂದ ಅತಿ ಬಿರುಸಿನಿಂದ ನಡೆಯುತ್ತಿದೆ. ಇದಕ್ಕಾಗಿ ಪ್ರಜ್ಞಾವಂತರ ಹೋರಾಟ ವೇದಿಕೆ ಕೂಡ ಇದೆ. ಧಾರವಾಡದ ಮಹಾನಗರ ಪಾಲಿಕೆ ಕಚೇರಿ ಎದುರು ವೇದಿಕೆ ಕೈಕೊಂಡ ಹೋರಾಟದಲ್ಲಿ ಭಾಗವಹಿಸಿದ ದಿನವೇ ಬೆಂಬಲ ಸೂಚಿಸಿದ್ದನೆ. ಹು-ಧಾ ಅವಳಿ ನಗರದ ಅಭಿವೃದ್ಧಿಗೆ ಬಿಡುಗಡೆ ಆಗುವ ಅನುದಾನ ಬಿಡುಗಡೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ತಾರತಮ್ಯ ನಡೆಯುತ್ತಿರುವ ನೋವ ಧಾರವಾಡದ ನಾಗರಿಕರನ್ನು ಈಗಲೂ ಕಾಡುತ್ತಿದೆ. ಈ ಕಾರಣದಿಂದ ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದೆನೆ. ಅಂದಿನಿಂದ ಇಂದಿನವರೆಗೂ ವೇದಿಕೆಯ ಹೋರಾಟದಲ್ಲಿ ಸಕ್ರೀಯನಾಗಿದ್ದೆನೆ.
ವಿಧಾನಸಬೆಯ ಚುನಾವಣೆ ಘೋಷಣೆ ಆಗುವ ಕೆಲವು ತಿಂಗಳುಗಳ ಮುಂಚೆಯೆ ನಾನು ಪ್ರತ್ಯೇಕ ಪಾಲಿಕೆ ಬೇಡಿಕೆ ನಮ್ಮ ಹಕ್ಕು ಎಂಬ ಹೋರ್ಡಿಂಗ್‌ಗಳನ್ನು ಮತ್ತು ಬ್ಯಾನರ್‌ಗಳನ್ನು ನಗರದಲ್ಲಿ ಪ್ರದರ್ಶಿಸಿದ್ದೆನೆ. ಅವುಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಬಳಸಿಲ್ಲ. ಈ ಹೋರಾಟ ನ್ಯಾಯಸಮ್ಮತ ಎಂದು ಭಾವಿಸಿ ಬೆಂಬಲ ನೀಡಿದ್ದೇನೆ ಹೊರತು ರಾಜಕೀಯಕ್ಕೆ ಬಳಸಿಕೊಳ್ಳುವ ಉದ್ದೇಶವಿರಲ್ಲಿ. ಈ ಕಾರಣದಿಂದ ವೇದಿಕೆಗೆ ಬೆಂಬಲ ನೀಡಿದ ಕಾರಣದಿಂದ ಈ ಚುನಾವಣೆಯಲ್ಲಿ ಸ್ವಯಂ ಪ್ರೇರಣೆಯಿಂದ ನನಗೆ ವೇದಿಕೆ ಬೆಂಬಲ ನೀಡುತ್ತಿದೆ .ಆದರೆ ಬೆಲ್ಲದ ಅವರು ಈ ವಿಷಯದಲ್ಲಿ ರಾಜಕೀಯ ಮಾಡಿದ್ದೇನೆ ಎಂದು ಹೇಳುವುದು ಸರಿಯಲ್ಲ ಎಂದರು. ಒಂದು ವೇಳೆ ರಾಜಕೀಯ ಇದರಲ್ಲಿ ರಾಜಕೀಯ ಮಾಡಿದ್ದು ಸಾಬೀತುಪಡಿಸಿದರೆ ಪ್ರಸಕ್ತ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಚಿಂಚೋರೆ ಸವಾಲು ಎಸೆದರು.


ಇದೇ ವೇಳೆ ದೀಪಕ ಚಿಂಚೋರೆ, ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಮುಖಂಡರಾದ ಶಾಂತಮ್ಮ ಗುಜ್ಜಳ, ಆನಂದ ಮುಶಣ್ಣವರ, ವೆಂಕಟೇಶ ಸಗಬಾಲ, ಮಹೇಶ ಹುಲ್ಲೆನ್ನವರ ಇತರರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಚಿಂಚೋರೆಗೆ ಬೆಂಬಲ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಡಿಕೆಯ ಹೋರಾಟಕ್ಕೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಅವರಿಗೆ ವೇದಿಕೆ ಬೆಂಬಲ ನೀಡಲಿದೆ ಎಂದು ವೇದಿಕೆಯ ಸಂಚಾಲಕ ರವಿ ಮಾಳಿಗೇರ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ವೇದಿಕೆ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದೆ. ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಎಲ್ಲ ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಆದರೆ, ದೀಪಕ ಚಿಂಚೋರೆ ಅವರು ವೇದಿಕೆಯ ಎಲ್ಲ ಹಂತದ ಹೋರಾಟಗಳಲ್ಲಿ ಭಾಗವಹಿಸಿ ನೈತಿಕ ಶಕ್ತಿ ತುಂಬಿದ್ದಾರೆ. ಆದ್ದರಿಂದ ಈ ಚುನಾವಣೆಯಲ್ಲಿ ನಗರದ ಮತದಾರರು ದೀಚೋರೆ ಅವರಿಗೆ ಮತ ನೀಡಿ ವೇದಿಕೆಯ ಬೇಡಿಕೆ ಈಡೇರಲು ಸಹಕರಿಸಬೇಕು ಎಂದು ಮನವಿ ಮಾಡಿದರು.

administrator

Related Articles

Leave a Reply

Your email address will not be published. Required fields are marked *