ಹುಬ್ಬಳ್ಳಿ: ಅನುದಾನಿತ ಶಾಲೆಯೊಂದರ ಆಡಳಿತ ಮಂಡಳಿ ಕಾರ್ಯದರ್ಶಿಯೊಬ್ಬರು ದಬ್ಬಾಳಿಕೆ ಮಾಡಿದ್ದಾರೆಂದು ಶಿಕ್ಷಕರೊಬ್ಬರು ಇಲ್ಲಿನ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೇಶಪಾಂಡೆನಗರದ ಗರ್ಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕಾಂತ ಡಿ. ದೇಸಾಯಿ ತಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದಾರೆಂದು ಅದೇ ಶಾಲೆಯಲ್ಲಿ ಗಣಿತ ಶಿಕ್ಷಕ ಅಂತ ಕರ್ತವ್ಯ ನಿರ್ವಹಿಸುತ್ತಿರುವ ಸಂಜೀವ ನಾಗೇಶ ಶಿರ್‍ನಳಿ ದೂರಿನಲ್ಲಿ ಹೇಳಿದ್ದಾರೆ.
11ರಂದು ಕರ್ತವ್ಯ ಮುಗಿಸಿ ಮನೆಗೆ ತೆರಳಿದಾಗ ಅದೇ ದಿನ ಸಂಜೆ 6.30ಕ್ಕೆ ಮನೆಯಲ್ಲಿದ್ದಾಗ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ಅವರು ಮೊಬೈಲ್ ಕರೆ ಮಾಡಿ ನೀವು ನಾಳೆಯಿಂದ ಹಳೇಹುಬ್ಬಳ್ಳಿ ನ್ಯೂ ಇಂಗ್ಲಿಷ್ ಸ್ಕೂಲ್‌ಗೆ ಕರ್ತವ್ಯಕ್ಕೆ ಹೋಗಬೇಕೆಂದು ಮೌಖಿಕವಾಗಿ ಆದೇಶಿಸಿದರು.
ಅದರಂತೆ ಜೂ. 12ರಂದು ಬೆಳಿಗ್ಗೆ ದೇಶಪಾಂಡೆನಗರದ ಶಾಲೆಗೆ ಬಂದು ಮುಖ್ಯ ಶಿಕ್ಷಕರಾದ ಕೆ.ಟಿ.ದೇಶಪಾಂಡೆ ಅವರನ್ನು ಭೇಟಿಯಾಗಿ ಕಾರ್ಯದರ್ಶಿಗಳು ಸೂಚಿಸಿದ ವಿಷಯ ಹೇಳಿ ಬಿಡುಗಡೆ ಪತ್ರ ನೀಡಲು ಕೇಳಿದಾಗ ಮುಖ್ಯಶಿಕ್ಷಕರು ಕಾರ್ಯದರ್ಶಿಗಳು ನನಗೂ ಸೂಚಿಸಿರುತ್ತಾರೆ ಎಂದು ಹೇಳಿದ್ದರಿಂದ ನಾನು ನ್ಯೂ ಇಂಗ್ಲೀಷ್ ಸ್ಕೂಲ್‌ಗೆ ಹೋಗಿ ದಿ. 12ರಿಂದ 17ರವರೆಗೆ ಕರ್ತವ್ಯ ನಿರ್ವಹಿಸಿ ದಿ. 19ರಂದು ಬೆಳಿಗ್ಗೆ ಗರ್ಲ್ಸ್ ಸ್ಕೂಲ್‌ಗೆ ಬಂದು ಮುಖ್ಯಶಿಕ್ಷಕರಿಗೆ ಭೇಟಿಯಾಗಿ ವರ್ಗಾವಣೆ ಆದೇಶ ಕೇಳಿದಾಗ ಮುಖ್ಯಶಿಕ್ಷಕರು ಕಾರ್ಯದರ್ಶಿಗಳಿಗೆ ಪೋನ್ ಮಾಡಿದ್ದು, ಆಗ ಕಾರ್ಯದರ್ಶಿಗಳು ನನಗೆ ವರ್ಗಾವಣೆ ಆದೇಶ ಕೊಡಿ ಅಂತ ಹೇಳುತ್ತಿದ್ದಾಗ ಅವರು ಏಕಾಏಕಿ ಏರು ಧ್ವನಿಯಲ್ಲಿ ಎ ನೀನಗೆ ಇಲ್ಲಿ ಬರಲು ಯಾರು ಹೇಳಿದರು. ನೀನು ಕೂಡಲೇ ಅಲ್ಲಿ ಹೋಗಬೇಕು. ಇಲ್ಲವಾದರೆ ನಿನಗೆ ಒದಿಯುತ್ತೇನೆ ಎಂದು ಗದರಿಸಿ ಪೋನ್ ಕಟ್ ಮಾಡಿದರು.
ತದನಂತರ ಕಾರ್ಯದರ್ಶಿಗಳು 11.20ರ ಸುಮಾರಿಗೆ ಗರ್ಲ್ಸ್ ಶಾಲೆಗೆ ಬಂದು ಶಿಕ್ಷಕರ ಕೊಠಡಿಯಲ್ಲಿ ಕುಳಿತಿದ್ದ ನನ್ನನ್ನು ಏರು ಧ್ವನಿಯಲ್ಲಿ ಮಾತನಾಡಿಸಿದಾಗ ಅದನ್ನು ವಿಡಿಯೋ ಮಾಡಲು ಯತ್ನಿಸಿದಾಗ ಮತ್ತೆ ಸಿಟ್ಟಿಗೆದ್ದು ನೀನು ನ್ಯೂ ಇಂಗ್ಲೀಷ್ ಸ್ಕೂಲ್‌ನಲ್ಲಿ ಕೆಲಸ ಮಾಡಬೇಕು. ಇಲ್ಲಿಗೆ ಯಾಕೆ ಬಂದಿ ಎಂದು ಗದರಿಸಿದರು. ಆಗ ನಾನು ಆದೇಶ ಪತ್ರ ಕೊಡಿ ಎಂದಾಗ ಕಾರ್ಯದರ್ಶಿ ನನ್ನ ಸಿಟ್ಟಾಗಿ ಕೊರಳು ಪಟ್ಟಿ ಹಿಡಿದು ನೀನು ಇಲ್ಲಿಂದ ಹೋಗದಿದ್ದರೆ ಬಿಡುವುದಿಲ್ಲ ಎಂದು ಧಮಕಿ ಹಾಕಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.