ಗಾಡಿ ಸರ್ವೀಸ್‌ಗಾಗಿ ಗ್ರಾಹಕರ ಪರದಾಟ
ಹುಬ್ಬಳ್ಳಿ: ನಗರದಲ್ಲಿಯ ಹೊಸೂರು, ಕೇಶ್ವಾಪುರ, ಹಾಗೂ ಗೋಕುಲ್ ರಸ್ತೆಯಲ್ಲಿರುವ OLA (ಓಲ) ಶೋರೂಂಗಳಿಗೆ ಶುಕ್ರವಾರ ಬೆಳಿಗ್ಗೆಯಿಂದ ಬೀಗ್ ಹಾಕಿದ್ದರಿಂದ ಓಲ (OLA)ಗ್ರಾಹಕರು ತುಂಬಾ ತೊಂದರೆ ಅನುಭವಿಸಿದರು.
ನಿತ್ಯ ಈ ಶೋರೂಂಗಳಿಗೆ ನೂರಾರು ಗ್ರಾಹಕರು ತಮ್ಮ ವಾಹನದ ರಿಪೇರಿಗೆಂದು ಬರುತ್ತಾರೆ. ಆದರೆ ಏಕಾಏಕಿ ಶೋರೋಂಗೆ ಕೀಲಿ ಹಾಕಿದ್ದರಿಂದ ಗ್ರಾಹಕರು ಸರ್ವೀಸ್ ಎಲ್ಲಿ ಮಾಡಿಸುವುದು ಎಂದು ಚಿಂತೆಗಿಡಾಗಿದ್ದಾರೆ.
ಈ ಬಗ್ಗೆ ಸಂಜೆ ದರ್ಪಣ ಕಚೇರಿಗೆ ಸುಮಾರು ಓಲ (OLA) ವಾಹನ ಸವಾರರು ದೂರವಾಣಿ ಕರೆ ಮಾಡಿ ಓಲ ಶೋರೂಂ ಕೀಲಿ ಹಾಕಿದ್ದಾರೆ ಯಾವ ಕಾರಣಕ್ಕೆ ಬಂದ್ ಮಾಡಲಾಗಿದೆ ಎಂಬ ಮಾಹಿತಿ ಕೂಡ ಇಲ್ಲ. ನಮ್ಮ ಗಾಡಿ ಈಗ ಬಂದ್ ಆಗಿದೆ. ಇದಕ್ಕೆ ನಾವು ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿಯುತ್ತಿಲ್ಲ ಎಂದು ವಿನಯ ಎಂಬುವರು ತಿಳಿಸಿದರು.
ಈ ಮೊದಲು ಇಲ್ಲಿ ನಿತ್ಯ ನೂರಾರು ಗ್ರಾಹಕರು ಸರ್ವೀಸ್ ಸಂಬಂಧಿಸಿದಂತೆ ಹಲವು ದೂರುಗಳು ಇದ್ದವು. ಅದಕ್ಕೆ ಕಂಪನಿ ಸರಿಯಾಗಿ ಸ್ಪಂದಿಸದ ಕಾರಣ ಯಾರೊ ಗ್ರಾಹಕರು ಶೋರೂಂ ಬಂದ್ ಮಾಡಿಸಿದ್ದಾರೆ ಅಂತಾ ಶೋರೋಂ ಬಳಿ ಇದ್ದ ಜನ ಮಾತನಾಡುತ್ತಿದ್ದರು.
ಈ ಬಗ್ಗೆ ಶೋರೂಂ ಸಿಬ್ಬಂದಿ ಸಂಪರ್ಕಿಸಿದರೆ ಯಾರು ಪೋನಿಗೆ ಸಿಗುತ್ತಿಲ್ಲ. ಇದರ ಮಾಲೀಕರು ಯಾರು ಎಂಬುದು ಯಾರಿಗೂ ತಿಳಿಯದಾಗಿದೆ. ಏಕೆಂದರೆ ಇದು ಎಲ್ಲಾ ಆನ್ ಲೈನ್ ಮೂಲಕವೇ ಆಗಿದೆ. ಈ ಸಮಸ್ಯೆ ಯಾವಾಗ ಬಗೆ ಹರಿದು ಶೋರೋಂ ಮತ್ತೆ ಓಪನ್ ಆಗುತ್ತೇ ಎಂದು ಓಲ ಗ್ರಾಹಕರು ಕಾಯುತ್ತಿದ್ದಾರೆ. ಇದಕ್ಕೆ ಕಂಪನಿ ಶೀಘ್ರ ಸ್ಪಂದಿಸಲಿ ಎಂದು ಗ್ರಾಹಕರು ಆಗ್ರಹಿಸಿದ್ದಾರೆ.