ಹುಬ್ಬಳ್ಳಿ-ಧಾರವಾಡ ಸುದ್ದಿ

ಯುಪಿಎಸ್‌ಸಿ : ಧಾರವಾಡಕ್ಕೆ ’ಪೇಡೆ’ ತಂದ ಸೌರಭ

ರಾಜ್ಯಕ್ಕೆ ಮೂರನೆ ಸ್ಥಾನ ಪಡೆದು ಹಿರಿಮೆ

ಧಾರವಾಡ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯ ಸಾಧನೆಯ ಆಧಾರದಲ್ಲಿ 2021ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಾಗಿರುವ ನಗರದ ಉಳವಿ ಚನ್ನಬಸವೇಶ್ವರ ಬಡಾವಣೆಯ ಸೌರಭ್ ನರೇಂದ್ರ ಅವರು, 2022ರ ಪರೀಕ್ಷೆಯಲ್ಲಿ 198ನೇ ರ?ಯಾಂಕ್ ಪಡೆದಿದ್ದಾರೆ.


ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹೊಂದಿರುವ ಸೌರಭ್, ಖಾಸಗಿ ವಲಯದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಿಂದ ನಿರಂತರವಾಗಿ ಲೋಕಸೇವಾ ಆಯೋಗ ಪರೀಕ್ಷೆ ಎದುರಿಸಿರುವ ಇವರು, 2019ರಲ್ಲಿ ಮುಖ್ಯ ಪರೀಕ್ಷೆ ಪಾಸು ಮಾಡಿದ್ದರು. 2021ರಲ್ಲಿ ಏಳು ಅಂಕಗಳಲ್ಲಿ ಅವಕಾಶ ವಂಚಿತರಾದ ಇವರಿಗೆ, ಭಾರತೀಯ ಕ್ರೀಡಾ ಪ್ರಾಧಿಕಾರದ ಸಂದರ್ಶನದಲ್ಲಿ ಸಹಾಯಕ ನಿರ್ದೇಶಕ ಹುದ್ದೆ ಪಡೆದಿದ್ದರು. ಸದ್ಯ ಪುದುಚೇರಿಯಲ್ಲಿ ಕರ್ತವ್ಯದಲ್ಲಿದ್ದಾರೆ.

ಸೌರಭ ತಂದೆ ಅಮೃತ ನರೇಂದ್ರ ಅವರು ವಿಮಾ ಏಜೆಂಟ್. ತಾಯಿ ಸುನೀತಾ ಹಾಗೂ ತಮ್ಮ ಅಮೋಘ ಇದ್ದಾರೆ.


ಇಲ್ಲಿಯವರೆಗೂ ಹಾಕಿದ ಪ್ರಯತ್ನಕ್ಕೆ ತಕ್ಕ ಫಲ ದೊರೆತಿದೆ. ಪಾಲಕರು ಹಾಗೂ ಸ್ನೇಹಿತರ ಪ್ರೋತ್ಸಾಹದಿಂದಾಗಿ ಇದು ಸಾಧ್ಯವಾಗಿದೆ. ಖಾಸಗಿ ವಲಯದಲ್ಲಿ ಉತ್ತಮ ಕೆಲಸವಿದ್ದರೂ, ಇನ್ನೇನನ್ನೋ ಸಾಧಿಸುವ ಹಂಬಲವಿತ್ತು. ಮನೆಯಲ್ಲೂ ಹೆಚ್ಚಿನ ಒತ್ತಡವಿರಲಿಲ್ಲ. ಹೀಗಾಗಿ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿದೆ’ ಎಂದು ಸೌರಭ್ ತಿಳಿಸಿದರು.

ಎಂಜನಿಯರಿಂಗ್ ಪದವಿ ಹೊಂದಿರುವ ನಾನು ರಾಜ್ಯಶಾಸ್ತ್ರ ವಿಷಯವನ್ನು ಲೋಕಸೇವಾ ಆಯೋಗದ ಪರೀಕ್ಷೆಗೆ ಆಯ್ಕೆ ಮಾಡಿಕೊಂಡೆ. 2018 ರಲ್ಲಿ ದೆಹಲಿಯಲ್ಲಿ ಕೋಚಿಂಗ್ ಪಡೆದೆ. ಅಲ್ಲಿ ದೆಹಲಿ ವಿಶ್ವವಿದ್ಯಾಲಯದ ಶುಭ್ರ ರಂಜನ್ ಹಾಗೂ ಆಸೀಫ್ ಮಾರ್ಗದರ್ಶನ ಮಾಡಿದರು. ಬೆಂಗಳೂರಿನಲ್ಲಿ ಇನ್‌ಸೈಟ್‌ನ ವಿನಯ ಸರ್ ನೆರವಾದರು. ಜತೆಗೆ ನನ್ನ ಇಬ್ಬರು ಸ್ನೇಹಿತರು ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಅವರ ಮಾರ್ಗದರ್ಶನವೂ ಸಿಕ್ಕಿತು. ಸ್ನೇಹಿತರೊಂದಿಗೆ ನಡೆಸಿದ ನಿರಂತರ ಚರ್ಚೆ ಹೆಚ್ಚು ಅಂಕ ಗಳಿಕೆಗೆ ನೆರವಾಯಿತು’ ಎಂದರು.

ಪ್ರವಾಸಿ ತಾಣಗಳ ಭೇಟಿ, ಸೈಕ್ಲಿಂಗ್ ನನ್ನ ಅಚ್ಚುಮೆಚ್ಚಿನ ಹವ್ಯಾಸ. ಪರೀಕ್ಷೆ ಸಮೀಪಿಸುತ್ತಿದ್ದಂತೆ ಓದುವ ಅಭ್ಯಾಸ ನನ್ನದು. ಹೀಗಾಗಿ ನಿತ್ಯ ಓದಲಿಲ್ಲ. ಆದರೆ ದಿನನಿತ್ಯ ವಿದ್ಯಮಾನಗಳ ಅಧ್ಯಯನ, ವಿಷಯಗಳ ಮೇಲೆ ಕಣ್ಣಾಡಿಸುತ್ತಿದೆ. ಪರೀಕ್ಷೆ ಸಮಯದಲ್ಲಿ ನಿರಂತರವಾಗಿ ಓದುತ್ತಿದ್ದೆ. ಬೆಂಗಳೂರಿನಲ್ಲಿ ಸ್ನೇಹಿತರೊಂದಿಗೆ ನಡೆಸುತ್ತಿದ್ದ ಚರ್ಚೆ ಹಾಗೂ ಇನ್‌ಸೈಟ್ಸ್‌ನ ಮಾಕ್ ಟೆಸ್ಟ್ ನನಗೆ ನೆರವಾದವು ಎಂದು ಸೌರಭ್ ತಮ್ಮ ಸಾಧನೆಯ ಹಾದಿಯನ್ನು ಸ್ನರಿಸಿದರು.

 

administrator

Related Articles

Leave a Reply

Your email address will not be published. Required fields are marked *