ಹುಬ್ಬಳ್ಳಿ-ಧಾರವಾಡ ಸುದ್ದಿ
ಹೈಕೋರ್ಟ ಆದೇಶ ಪಾಲಿಸದ ಕುಲಪತಿ

ಹೈಕೋರ್ಟ ಆದೇಶ ಪಾಲಿಸದ ಕುಲಪತಿ

ಸಹ ಪ್ರಾಧ್ಯಾಪಕಿ ನೇಮಕ ರದ್ದು ಪ್ರಕರಣ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ 2014 ರಂದು ಡಾ. ಶ್ರೀದೇವಿ ಅವರನ್ನು ಸಹ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಿರುವುದನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಆದರೆ, ಕುಲಪತಿಗಳು ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ ಎಂದು ಮಾಜಿ ಸಿಂಡಿಕೇಟ್ ಸದಸ್ಯ ಜಯಂತ ಕೆ.ಎಸ್. ಆರೋಪಿಸಿದರು.


ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಪಾಲಿಸದಿರುವ ಕುಲಪತಿಗಳ ನಡೆಯನ್ನು ಖಂಡಿಸಿದರು.
ಕುಲಪತಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು.

ಶ್ರೀದೇವಿ ಪರವಾಗಿ ಸಿಂಡಿಕೇಟ್ ಸದಸ್ಯರೊಬ್ಬರು ಬೆಂಗಾವಲಾಗಿ ನಿಂತಿದ್ದಾರೆ. ಇದರ ಬಗ್ಗೆ ನಾವು ಸಹ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದರು. ಪ್ರಾಧ್ಯಾಪಕರಾದ ಶ್ರೀದೇವಿಯವರ ನೇಮಕವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ರದ್ದು ಪಡಿಸಿ ಕಳೆದ ಏ.11 ರಂದು ಆದೇಶ ಹೊರಡಿಸಿದೆ. ಅದರಂತೆ ಉಚ್ಚನ್ಯಾಯಾಲಯದ ಆದೇಶವನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಪಾಲನೆ ಮಾಡಬೇಕು. ನಿನ್ನೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯ ಕೂಡ ಇತ್ತು.ಆದರೆ, ಯಾರದೋ ಒತ್ತಡಕ್ಕೆ ಮಣಿದು ಈ ವಿಷಯವನ್ನು ಬದಲಾಯಿಸಲಾಗಿದೆ. ಇದರ ಹಿಂದೆ ಸಿಂಡಿಕೇಟ್ ಸದಸ್ಯ ರೊಬ್ಬರು ಇರುವುದು ಗೊತ್ತಾಗಿದೆ.
ಅಲ್ಲದೇ ಇದೇ ರೀತಿ ಇನ್ನೂ ಅನೇಕ ಬೋಧಕ- ಬೋಧಕೇತರ ಸಿಬ್ಬಂದಿ ಯನ್ನು ನೇಮಕ ಮಾಡಲಾಗಿದೆ. ಡಾ.ಶ್ರೀದೇವಿ ಅವರನ್ನು ವಜಾ ಗೊಳಿಸಿ ದರೆ, ಇತರರನ್ನು ಕೂಡ ವಜಾಗೊಳಿಸಬೇಕಾಗುತ್ತದೆ ಎಂಬ ಆತಂಕ ಕುಲಪತಿಗಳಲ್ಲಿ ಇರಬಹುದು ಎಂದರು.

ಡಾ.ಶ್ರೀ ದೇವಿ ಪ್ರಕರಣದಲ್ಲಿ ಕುಲಪತಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸದೇ ವಿಳಂಬ ಮಾಡುತ್ತಿರುವುದರ ಹಿಂದೆ ಯಾರದ್ದೋ ಒತ್ತಡ ಇರುವುದು ಸ್ಪಷ್ಟವಾಗುತ್ತದೆ. ಕುಲಪತಿ ಡಾ.ಕೆ.ಬಿ.ಗುಡಸಿ ಅವರು ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲು ಹಿಂದೇಟು ಹಾಕುವಂತಾದರೆ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜಯಂತ ಎಚ್ಚರಿಸಿದರು.
ಈ ವಿಷಯ ಕುರಿತು ಈಗಾಗಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದರು.

 

administrator

Related Articles

Leave a Reply

Your email address will not be published. Required fields are marked *