ಹುಬ್ಬಳ್ಳಿ-ಧಾರವಾಡ ಸುದ್ದಿ

ಏನೇ ಷಡ್ಯಂತ್ರ ಮಾಡಿದರೂ ವಿನಯ ಕುಲಕರ್ಣಿ ಗೆಲುವು ನಿಕ್ಕಿ

ಧಾರವಾಡ: ಬಿಜೆಪಿ ಶಾಸಕರ ಕಳೆದ ಐದು ವರ್ಷಗಳ ದುರಾಡಳಿತಕ್ಕೆ ಜನ ಅಕ್ಷರಶಃ ಬೇಸತ್ತಿದ್ದಾರೆ. ವಿನಯ್ ಕುಲಕರ್ಣಿ ಅವರನ್ನು ಯಾಕಾದರೂ ಆರಿಸಿ ತರಲಿಲ್ಲವೋ ಎಂದು ಪಶ್ಚಾತಾಪ ಪಡುತ್ತಿದ್ದಾರೆ. ಈಗ ವಿನಯ್ ಅವರನ್ನು ಆರಿಸಿ ತರುವ ಕಾಲ ಮತ್ತೆ ಬಂದಿದ್ದು ನಾವು ಮತ್ತೆ ವಿನಯ್ ಕುಲಕರ್ಣಿ ಅವರನ್ನೇ ಈ ಭಾಗದ ಶಾಸಕರನ್ನಾಗಿ ಆಯ್ಕೆ ಮಾಡಲು ಜನ ಉತ್ಸುಕರಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದರು.


ಧಾರವಾಡದ ಮದಿಹಾಳ, ಕೊಟ್ಟಣದ ಓಣಿ, ಮೂರುಸಾವಿರ ಮಠ ರಸ್ತೆ. ಆದಿಶಕ್ತಿ ಕಾಲೊನಿ ಸೇರಿದಂತೆ ಅನೇಕ ಕಡೆಗಳಲ್ಲಿ ರೋಡ್ ಶೋ ಮುಖಾಂತರ ಅವರು ಮತಯಾಚನೆ ಮಾಡಿ ಮಾತನಾಡಿದರು.
ಚುನಾವಣಾ ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ಅಭೂತಪೂರ್ವ ಬೆಂಬಲ ವ್ಯಕ್ತವಾಗು ತ್ತಿದೆ. ಜನ ಸ್ವಯಂ ಪ್ರೇರಣೆಯಿಂದ ನಮ್ಮ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ಜನರ ಈ ತುಡಿತ ನೋಡಿದರೆ ಈ ಬಾರಿ ವಿನಯ್ ಕುಲಕರ್ಣಿ ಅವರು 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ಧಾರವಾಡದ ಮದರಮಡ್ಡಿಯ ಎಚ್‌ಡಿಎಂಸಿ ಕ್ವಾಟರ್ಸ್‌ನಲ್ಲಿ ವಿನಯ ಕುಲಕರ್ಣಿ ಪರ ಪತ್ನಿ ಶೀವಲಿಲಾ ಕುಲಕರ್ಣಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಪದ್ಮಾ ಸಾಂಬ್ರಾಣಿ, ಅಕ್ಕಮ್ಮ ಅರ್ವೇಡ್, ಲಲಿತಾ ಸಾಂಬ್ರಾಣಿ, ರೇಣುಕಾ ಮಾದರ, ಲಕ್ಷ್ಮಿ ಮಾದರ, ವರುಣ ಸಾಂಬ್ರಾಣಿ, ಸಂದೀಪ ಸಾಂಬ್ರಾಣಿ, ಕೃಷ್ಣಾ ಅರ್ವೇಡ್, ನವೀನ ಕದಂ, ಸಾಗರ, ಅರ್ಜುನ, ಸುದೀಪ ಸೇರಿದಂತೆ ನೂರಾರು ಜನ ಇದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ವಿನಯ್ ಕುಲಕರ್ಣಿ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನ ಇವತ್ತು ಸ್ವಯಂ ಪ್ರೇರಣೆಯಿಂದ ವಿನಯ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಯಾವುದೇ ರಾಜಕೀಯ ಷಡ್ಯಂತ್ರ ಮಾಡಿದರೂ ವಿನಯ್ ಕುಲಕರ್ಣಿ ಅವರ ಗೆಲುವು ಈ ಬಾರಿ ಕಟ್ಟಿಟ್ಟ ಬುತ್ತಿ ಎಂದರು.


ಧಾರವಾಡದ ಅನೇಕ ವಾರ್ಡ್‌ಗಳಲ್ಲಿ ರೋಡ್ ಶೋ ಮಾಡಿದ ಶಿವಲೀಲಾ ಕುಲಕರ್ಣಿ ಅವರಿಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಯಿತು. ನೂರಾರು ಜನ ರೋಡ್ ಶೋದಲ್ಲಿ ಪಾಲ್ಗೊಂಡು ವಿನಯ್ ಕುಲಕರ್ಣಿ ಪರ ಘೋಷಣೆಗಳನ್ನು ಕೂಗಿದರು.
ಬ್ಲಾಕ್ ಅಧ್ಯಕ್ಷ ಈಶ್ವರ ಶಿವಳ್ಳಿ ಮುಖಂಡರುಗಳಾದ ಮಹೇಶ ಶಿಂಧೆ, ವಿಶಾಲ ನರಗುಂದ, ಕಿಶೋರ ಬಡಿಗೇರ, ನಿಜಾಮ ರಾಹಿ, ರವಿ ಹೊರಗಿನಮಠ, ಗೀತಾ ನಾಗನ್ನವರ, ಗಂಗಮ್ಮ ಕಾಶಿಗಾರ, ಶಿವಯೋಗಿ ಹೊಸೂರ ಸೇರಿದಂತೆ ನೂರಾರು ಯುವಕರು, ಹಿರಿಯರು, ಮಹಿಳೆಯರು ಸೇರಿದ್ದರು.

 

administrator

Related Articles

Leave a Reply

Your email address will not be published. Required fields are marked *