ಅಜ್ಜನಿಗೆ ವಿಶೇಷ ಅಭಿಷೇಕ
ಧಾರವಾಡ: ಲೋಕ ಕಲ್ಯಾಣಾರ್ಥವಾಗಿ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ನಗರದ ಕಿರಣ ಗೆಳೆಯರ ಬಳಗದ ಸುಮಾರು 40ಕ್ಕೂ ಹೆಚ್ಚು ಸದಸ್ಯರು ಎಡೆಬಿಡದ ಮಳೆಯಲ್ಲೂ ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ರವಿವಾರ ಪಾದಯಾತ್ರೆ ಕೈಗೊಂಡು ಇಂದು ಬೆಳಿಗ್ಗೆ ವಿಶೇಷ ಅಭಿಷೇಕ ಮಾಡಿಸಿದರು.
ನಿನ್ನೆ ಸಂಜೆ 7.30ಕ್ಕೆ ಧಾರವಾಡದ ಎನ್‌ಟಿಟಿಎಫ್ ಹತ್ತಿರದ ಸಿದ್ಧಿವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿ ಸುರಿಯುತ್ತಿರುವ ಮಳೆಯಲ್ಲೇ ಮದ್ಯ ರಾತ್ರಿ ಸುಮಾರಿಗೆ ಸಿದ್ಧಾರೂಢ ಮಠಕ್ಕೆ ಆಗಮಿಸಿ ಇಂದು ಬೆಳಿಗ್ಗೆ ವಿಷೇಷ ಅಭಿಷೇಕ ಮಾಡಿಸಿ ಕೊರೊನಾ ಮಹಾಮಾರಿಯಿಂದ ನಲುಗಿರುವ ಭಾರತ ಕೊರೊನಾ ಮುಕ್ತವಾಗಲಿ, ಆರ್ಥಿಕವಾಗಿ ಮತ್ತೆ ಪುಟಿದೇಳಲಿ ಎಂದು ಪ್ರಾರ್ಥಿಸಿದರು.
ತಮ್ಮ ತಮ್ಮ ಉದ್ಯೋಗಗಳ ಜೊತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ, ಸಮಾಜದ ಏಳಿಗೆಗಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವ ಧಾರವಾಡದ ಕಿರಣ ಗೆಳೆಯರ ಬಳಗದ ಸದಸ್ಯರು ಪ್ರತಿವರ್ಷ ಶ್ರಾವಣದ ಒಂದು ಸೋಮವಾರ ದಿನ ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ ನಡೆಸುತ್ತಾ ಬಂದಿದ್ದಾರೆ.
ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಾದಯಾತ್ರಿ ಗಳಲ್ಲಿ ಹೊಸ ಹುರುಪು ಮೂಡಿತ್ತು. ಎಲ್ಲರೂ ಗಾಂಧಿ ಟೋಪಿ ಹಾಕಿ ಕೊಂಡು, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಧ್ಯೆ ಬರುವ ಎಲ್ಲ ದೇವಸ್ಥಾನ, ದರ್ಗಾ, ಚರ್ಚ್‌ಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಪಾದಯಾತ್ರೆಯಲ್ಲಿ ಬಳಗದ ಕಿರಣ ಹಾವಣಗಿ, ಸಂಭಾಜಿರಾವ ಘೊಡಸೆ, ವಿನಯ ಮಹೇಂದ್ರಕರ, ಪ್ರತಾಪ ಕಾಮತ, ವಿನಯ ಶಿಂಧೆ, ಕುಮಾರ ಚಿನಿವಾಲ, ಸತೀಶ ಹೆಗಡೆ, ದೀಪಕ ಪಾಟೀಲ, ಶಾಕೀರ ಬಡೆ ಬಡೆ, ತುರಾಬ ಮೈಸೂರ, ಸತೀಶ ವೀರಾಪುರ, ವೃಷಭ ಹಿರೇಮಠ, ಸಂತೋಷ ಸೂರ್ಯವಂಶಿ, ಸುನೀಲ ಸೂರ್ಯವಂಶಿ, ಪ್ರಜ್ವಲ, ಸಂದೇಶ, ಡಾ.ಕಿರಣ ಬೆಲ್ಲದ, ಕೃಷ್ಣಾ, ಬಸಾಪುರ, ಅಶೋಕ ಪಾಟೀಲ, ನವೀನ ಮಲ್ಲನಗೌಡರ, ಅಜಯ ಉಡಕೇರಿ, ಸಂಜಯ ಕಡಕೋಳ, ಕಿಶೋರ ಹಾವಣಗಿ, ಆಶೀಷ್ ಹಾವಣಗಿ, ಆನಂದ ಉತ್ತರಕರ, ಕಾಳೆ, ಚಿನ್ಮಯ ಹಾವಣಗಿ, ಪ್ರಸನ್ನಕುಮಾರ ಹಿರೇಮಠ ಸೇರಿದಂತೆ ಅನೇಕ ಸದಸ್ಯರು, ಯುವಕರು, ಮಕ್ಕಳು, ಮಹಿಳೆ ಯರು ಪಾಲ್ಗೊಂಡಿದ್ದರು.