ಹೊರಟ್ಟಿ ಪಕ್ಷ ಸೇರ್ಪಡೆಯಿಂದ ಪ್ರಯೋಜನವಿಲ್ಲ
ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್‌ನ್ನು ವರಿಷ್ಠರು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಕೊಡುವುದಿಲ್ಲ .ತಮಗೆ ನೀಡುತ್ತಾರೆಂಬ ವಿಶ್ವಾಸ ತಮಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.
ನಿನ್ನೆ ಬೆಂಗಳೂರಿನಲ್ಲಿ ಹೊರಟ್ಟಿಯವರು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಅವರ ಸೇರ್ಪಡೆಗೆ ಗ್ರೀನ್ ಸಿಗ್ನಲ್ ದೊರೆತಿದೆ ಎಂಬ ಹಿನ್ನೆಲೆಯಲ್ಲಿ ’ಸಂಜೆ ದರ್ಪಣ’ ಮಾತನಾಡಿಸಿದಾಗ ಹೀಗೆ ಹೇಳಿದರು.
ಪಕ್ಷದ ವೇದಿಕೆಯಲ್ಲಿ ನನ್ನನ್ನೇ ಅಭ್ಯರ್ಥಿಯೆಂದು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಂದು ಸ್ವತಃ ಮಾಜಿ ಸಿಎಂ ಜಗದೀಶ ಶೆಟ್ಟರ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಹೊರಟ್ಟಿ ಸೇರ್ಪಡೆಯಾದರೂ ಯಾವುದೇ ಬದಲಾವಣೆಯಾಗದು. ತಾವೇ ಅಭ್ಯರ್ಥಿಯಾಗುವ ವಿಶ್ವಾಸವಿದೆ ಎಂದರು.
ವಯಸ್ಸಿನ ವಿಚಾರವೂ ಪರಿಗಣನೆಗೆ ಬರುವ ಸಾಧ್ಯತೆಗಳಿವೆ. ಅಲ್ಲದೇ ಕ್ಷೇತ್ರದಲ್ಲಿ ಬಿಜೆಪಿ ಸಶಕ್ತವಾಗಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಿಂಬಿಕಾಯಿ, ಹೊರಟ್ಟಿಯವರು ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡಿರಬಹುದು ಹೀಗಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಜೆಡಿಎಸ್ ಸಂಘಟನೆ ಮಾಡಲಾಗದವರಿಂದ ಬಿಜೆಪಿಗೆ ಯಾವುದೇ ಪ್ರಯೋಜನವಿಲ್ಲ ಎಂಬ ಅಭಿಪ್ರಾಯ ಪಟ್ಟರು.