ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಅವಧಿ ಪೂರ್ಣಗೊಂಡಿರುವ ಕಲಬುರಗಿ, ಬೆಳಗಾವಿ ಸಹಿತ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಕುರಿತು ಆಗಸ್ಟ 3ರೊಳಗೆ ತಿಳಿಸಲು ಹೈಕೋರ್ಟ ಸೂಚಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಪ್ರಕ್ರಿಯೆಯ ವಿವರ ನೀಡಲಿದೆ ಎನ್ನಲಾಗಿದೆ.
ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಮತ್ತು ಆಯೋಗಕ್ಕೆ ನಿರ್ದೇಶನ ನೀಡಲು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ಸೋಮವಾರ ನಡೆಸಿ ಆಗಸ್ಟ 4ಕ್ಕೆ ಮುಂದೂಡಿದೆ.
ಆಗಸ್ಟ 3 ರೊಳಗೆ ಅಥವಾ 3ರಂದು ಆಯೋಗ ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಹೈಕೋರ್ಟಗೆ ವಿವರ ನೀಡಬೇಕಾಗಿದೆ.
ಪ್ರಕರಣದ ವಿಚಾರಣೆ ಆ.4ಕ್ಕೆ ನಡೆಯಲಿದ್ದು ತಾನು ಹೈಕೋರ್ಟಗೆ ನೀಡಿದ ವಿವರಗಳಂತೆ ಆ.೫ರಂದು ಚುನಾವಣೆ ಆಯೋಗ ಹು.ಧಾ ಪಾಲಿಕೆ ಸಹಿತ ವಿವಿಧ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣಾ ಘೋಷಿಸುವ ಮಾಡುವ ಸಾಧ್ಯತೆಗಳಿವೆ.
ಕಳೆದ 28 ತಿಂಗಳಿನಿAದ ಪಾಲಿಕೆಗೆ ಚುನಾಯಿತ ಆಡಳಿತ ಮಂಡಳಿ ಇಲ್ಲದಿರುವುದರಿಂದ ಅಲ್ಲದೇ ಮತದಾರರ ಪಟ್ಟಿ ಪ್ರಕಟಗೊಂಡ 45 ದಿನಗಳೊಳಗೆ ಚುನಾವಣೆ ನಡೆಸುವುದಾಗಿ ಈ ಹಿಂದೆಯೇ ಹೈಕೋರ್ಟಗೆ ಆಯೋಗ ಹೇಳಿರುವುದರಿಂದ ಆಯೋಗ ಮತದಾನದ ದಿನಾಂಕ ನಿಶ್ಚಯಿಸಿಯೇ ಹೈಕೋರ್ಟಗೆ ವಿವರ ನೀಡಲಿದೆ ಎನ್ನಲಾಗುತ್ತಿದೆ.
ಈಗಾಗಲೇ ಮಹಾನಗರಪಾಲಿಕೆಗೆ ಚುನಾವಣೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸೂಚಿಸಿದ್ದು,
ಅಗಸ್ಟ ಅಂತ್ಯದೊಳಗೆ ಚುನಾವಣೆ ನಿಶ್ಚಿತ ಎಂಬ ಮಾತು ಕೇಳಿ ಬರುತ್ತಿವೆ.
ಎಸ್ ಸಿ ಮೀಸಲಾತಿ ಅನ್ಯಾಯ, ವಾರ್ಡ ಮೀಸಲಾತಿ ತಾರತಮ್ಯ, ಪೂರ್ವದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟಗೆ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಕ್ರಮವಾಗಿ ದಿ.26, 27ಕ್ಕೆ ವಿಚಾರಣೆಗೆ ಬರಲಿದ್ದರೂ ಅಲ್ಲದೇ ಸ್ವತಃ ಹೈಕೋರ್ಟ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿರುವುದರಿ0ದ ತಡೆಯಾಜ್ಞೆ ನೀಡುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ.