ಹುಬ್ಬಳ್ಳಿ-ಧಾರವಾಡ ಸುದ್ದಿ
ಅಮ್ಮಿನಬಾವಿ ಸಾರಥ್ಯದಲ್ಲಿ ನಾಳೆ ಸಾಮೂಹಿಕ ವಿವಾಹ

ಅಮ್ಮಿನಬಾವಿ ಸಾರಥ್ಯದಲ್ಲಿ ನಾಳೆ ಸಾಮೂಹಿಕ ವಿವಾಹ

ಬಡವರಿಗಾಗಿ ಮಿಡಿಯುವ ನಿಸ್ವಾರ್ಥ ಮನಸ್ಸಿನ ಸಮಾಜ ಸೇವಕ ಬಸವ ’ರಾಜ’

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸದ್ದಿಲ್ಲದೇ ಸಮಾಜ ಸೇವೆಗೈಯ್ಯುತ್ತಿರುವ ಜನರಲ್ಲಿ ಬಸವರಾಜ ಅಮ್ಮಿನಬಾವಿ ಕೂಡ ಒಬ್ಬರು. ಉತ್ಸಾಹಿ ಮತ್ತು ನಿಸ್ವಾರ್ಥ ಮನಸ್ಸಿನ ಬಸವರಾಜರು ಕಡುಬಡತನದಲ್ಲಿಯೇ ಬೆಳೆದವರು.


ಗಂಗಾಧರ ನಗರದವರಾದ ಕೃಷಿ ಮನೆತನದ ಅವರು, ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಸರಕಾರಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸಂಪೂರ್ಣ ಸಮಾಜ ಸೇವೆಗೆ ಬಲಗಾಲಿಟ್ಟವರು.
ಸಮಾಜದಲ್ಲಿನ ಕೃಷಿಕರು, ಬಡವರು, ಶೋಷಿತರು, ಕಾರ್ಮಿಕರು, ದಮನಿತರ ಬಗ್ಗೆ ಅಪಾರ ಕಳಕಳಿ ಹೊಂದಿರುವ ಅವರಿಗೆ ಸದೃಢ ಮತ್ತು ಸಮ ಸಮಾಜ ನಿರ್ಮಾಣದ ಮಹಾದಾಸೆ. ಇದಕ್ಕಾಗಿ ಸದಾ ಒಂದಿಲ್ಲೊಂದು ರೂಪದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಆಸರೆಯಾಗುತ್ತ ಬಂದಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಎಲ್ಲ ವಲಯದ ಜನರನ್ನು ಹೈರಾಣಾಗಿಸಿತು. ಒಂದು ಕಡೆ ಉದ್ಯೋಗ ಇಲ್ಲದಂತಾಗಿ ಜೀವನ ನಡೆಸುವುದು ದುಸ್ತರವಾಯಿತು. ಮತ್ತೊಂದು ಕಡೆ ತಮ್ಮ ಮಕ್ಕಳಿಗೆ ಮದುವೆ ಮಾಡುವ ಆಸೆಗೆ ಕೊರೊನಾ ಅಡ್ಡಿಯಾಯಿತು. ಅನೇಕ ಬಡ-ಮಧ್ಯಮ ವರ್ಗದವರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಾಗಲಿಲ್ಲ.

ಈ ಕಾರಣದಿಂದ ಸಾಮೂಹಿಕ ಮದುವೆಗಳನ್ನು ಆಯೋಜನೆ ಮಾಡಿದರೆ ಬಡವರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿದಂತಾಗುತ್ತದೆ ಎಂಬ ಸದುದ್ದೇಶದಿಂದ ಬಸವರಾಜ ಅಮ್ಮಿನಭಾವಿ ತಮ್ಮ ಗೆಳೆಯರ ಬಳಗದೊಂದಿಗೆ ತೀರ್ಮಾನಿಸಿ, ಇದೀಗ ಆ ಉದ್ದೇಶದ ಅನುಷ್ಠಾನಕ್ಕೂ ಮುಂದಾಗಿದ್ದಾರೆ.

ನಾಳೆ ನಗರದ ಸೆಟ್ಲಮೆಂಟ್ ಮೈದಾನದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದ್ದು, 17 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧುವಿಗೆ ವಧುವಿಗೆ 1ಗ್ರಾಂ ಬಂಗಾರದ ತಾಳಿ, ಬೆಳ್ಳಿ ಕಾಲುಂಗುರ, ರೇಷ್ಮೆ ಸೀರೆ ಮತ್ತು ವರನಿಗೆ ಧೋತಿ, ಶರ್ಟ್, ಶಲ್ಯವನ್ನು ಕೊಡಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು ಇನ್ನಿತರ ಕಡೆಗಳಲ್ಲಿ ಬಟ್ಟೆ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲಾಗಿದೆ.

ವಿವಾಹದ ತಾಳಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ವಿರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು, ಮಂಜುನಾಥೇಶ್ವರನ ಸನ್ನಿಧಿಯಲ್ಲಿ ವಿವಾಹ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕರಿಮಣಿ ಪೋಣಿಸುವ ಕಾರ್ಯ, ಬಟ್ಟೆ ವಿತರಣೆಯಿಂದ ಹಿಡಿದು ಎಲ್ಲ ಕಾರ್ಯಗಳನ್ನು ಅತ್ಯಂತ ಸಂಪ್ರದಾಯ ಬದ್ಧವಾಗಿ ಮಾಡಲಾಗುತ್ತಿದೆ.

ಅಲ್ಲದೇ ವಿವಾಹಕ್ಕೆ ಆಗಮಿಸುವವರಿಗೆ ಊಟಕ್ಕಾಗಿ ರೊಟ್ಟಿ ತಯಾರಿಸಲು ಬಡಾವಣೆಯ ಮನೆ ಮನೆಗಳಿಗೆ ಹಿಟ್ಟು ಕೊಡಲಾಗಿತ್ತು. ಈ ಮೂಲಕ ಇಡೀ ಬಡಾವಣೆಯ ಎಲ್ಲರನ್ನೂ ಈ ಶುಭ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಬಸವರಾಜರ ಬಳಗ ಶ್ರಮವಹಿಸಿದೆ.

ಎಲ್ಲರ ಮನೆಗಳಲ್ಲಿ ನಡೆಯುವಂತೆ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ಒಂದೆಡೆಯಾದರೆ, ಸುಂದರ ಪೆಂಡಾಲ್ ವ್ಯವಸ್ಥೆಯು ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಜೊತೆಗೆ ಶುಚಿ-ರುಚಿಯಾದ ಊಟ ಬಡಿಸಲು ಅಚ್ಚುಕಟ್ಟಾದ ತಂಡ ಸಿದ್ಧವಾಗಿದೆ.
ಸಾಮೂಹಿಕ ವಿವಾಹ ಸಂದರ್ಭದಲ್ಲಿ ಯಾವುದೇ ಕೊರತೆ ಎದುರಾಗದಂತೆ ಬಳಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಾಲ್ಯ ವಿವಾಹ ಇನ್ನಿತರ ಲೋಪಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಿದೆ.

ಸೆಟ್ಲಮೆಂಟ್ ಮೈದಾನದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಎರಡೆತ್ತಿನಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಮಣಕವಾಡದ ಶ್ರೀ ಗುರು ಅನ್ನದಾನೀಶ್ವರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಸದ್ಗುರು ಸಮರ್ಥ ಡಾ.ವಾಲಿ ಮಹಾರಾಜರು ಸಾನಿಧ್ಯದಲ್ಲಿ ಜರುಗಲಿರುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸಂಘದ ಹಿರಿಯ ಪ್ರಚಾರಕರು, ಕುಟುಂಬ ಪ್ರಮೋದಿನಿ ಮುಖ್ಯಸ್ಥ ಶ್ರೀ ಸು.ರಾಮಣ್ಣ, ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ, ಸಚಿವ ಶ್ರೀ ಶಂಕರಪಾಟೀಲ ಮುನೇನಕೊಪ್ಪ, ಪರಿಷತ್ ಸದಸ್ಯ ಶ್ರೀ ಪ್ರದೀಪ ಶೆಟ್ಟರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ ಟೆಂಗಿನಕಾಯಿ ಮುಂತಾದ ಗಣ್ಯರು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಬಸವರಾಜ ಅಮ್ಮಿನಬಾವಿ ಅವರ ಈ ಪ್ರಯತ್ನಕ್ಕೆ ಎಲ್ಲ ಸಮುದಾಯಗಳ ಹಿರಿಯರು ಪ್ರೀತಿಯಿಂದ ಸಹಕಾರ ನೀಡುತ್ತಿದ್ದಾರೆ. ಜೊತಗೆ ಬಿಜೆಪಿಯ ಎಲ್ಲ ಹಂತದ ನಾಯಕರು ಹಾಗೂ ಕಾರ್ಯಕರ್ತರು ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರಭು ನವಲಗುಂದಮಠ, ವಿನಯ ಸಜ್ಜನರ, ಜಗದೀಶ ಬುಳ್ಳಾನವರ, ಗಂಗಾಧರ ಗುಜಮಾಗಡಿ, ಪರಶುರಾಮ ಪೂಜಾರ, ಗುರುನಾಥ ಕೊರವರ ಗಂಗಾಧರ ನಗರದ ಅವರ ಅಭಿಮಾನಿಗಳು, ಗೆಳೆಯರ ಬಳಗ ಇಡೀ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಕೇಸರಿ ನಿಷ್ಠ

ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿರುವ ಬಸವರಾಜ ಅಮ್ಮಿನಬಾವಿ ಸಧ್ಯ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಮುಂಚೂಣಿಯಲ್ಲಿದ್ದರು. ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕರ್ತರೆಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿರುವ ಬಸವರಾಜ ಅವರನ್ನೇ ಹು-ಧಾ ಪೂರ್ವ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದರೂ ಆಶ್ಚರ್ಯವಿಲ್ಲ ಎನ್ನುವಂತ ಮಾತು ಕೇಳಿ ಬರುತ್ತಿದೆ. ಆದರೆ, ರಾಜಕಾರಣಕ್ಕಿಂತ ಸಮಾಜ ಸೇವೆಗೆ ಆದ್ಯತೆ ಕೊಟ್ಟಿರುವ ಬಸವರಾಜ ತಮಗೆ ಸಾಧ್ಯವಿದ್ದ ಮಟ್ಟಿಗೆ ಸದ್ದಿಲ್ಲದೇ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬಡವರಿಗೆ,ನೊಂದವರಿಗೆ ಸಹಾಯಹಸ್ತ ನೀಡಬೇಕೆಂಬುದು ನನ್ನ ಆಶಯ. ಆ ನಿಟ್ಟಿನಲ್ಲಿ ಯಾವುದೇ ಅಪೇಕ್ಷೆಯಿಲ್ಲದೇ ಸಾಮಾಜಿಕ ಕಾರ್ಯ ಮಾಡುತ್ತಿದ್ದು, ಮುಂದೆಯೂ ಇದು ಮುಂದುವರಿಯುತ್ತದೆ.

ಬಸವರಾಜ ಅಮ್ಮಿನಬಾವಿ

 

mass marriage in hubballi tomorrow

administrator

Related Articles

Leave a Reply

Your email address will not be published. Required fields are marked *