ಹುಬ್ಬಳ್ಳಿ-ಧಾರವಾಡ ಸುದ್ದಿ
ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

ಹುಬ್ಬಳ್ಳಿ: ಬೆಲೆ ಏರಿಕೆ ಖಂಡಿಸಿ ನಗರದಲ್ಲಿಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.


ನಗರದ ಸ್ಟೇಷನ್ ರಸ್ತೆಯ ಅಂಬೇಡ್ಕರ್ ಪ್ರತಿಮೆ ಬಳಿ ಖಾಲಿ ಸಿಲಿಂಡರ್, ಎಣ್ಣೆ ಡಬ್ಬಾ, ಬೈಕ್ ಇಟ್ಟು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ನಂತರ ಚನ್ನಮ್ಮ ವರ್ತುಳದವರೆಗೆ ಮೆರವಣಿಗೆ ನಡೆಸಿದರು.


ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹ್ಮದ ಹ್ಯಾರಿಸ್ ನಾಲಪಾಡ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ ಡಬಲ್ ಇಂಜಿನ್ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಿಜಾಬ್,ಹಲಾಲ್ ಮುಂತಾದ ವಿಷಯ ಮುಂದೆ ಮಾಡುತ್ತಿವೆ ಎಂದರು.
ಗೃಹ ಸಚಿವ ಹೇಳಿಕೆಗೆ ಲೇವಡಿ ಮಾಡಿದರಲ್ಲದೇ ಅರಗ ಜ್ಞಾನೇಂದ್ರ ಅಲ್ಲ ಅವರು ಅರ್ಧ ಜ್ಞಾನೇಂದ್ರ. ಪೂರ್ತಿ ಜ್ಞಾನ ಇರಬೇಕು ಅಥವಾ ಕಮ್ಮಿ ಜ್ಞಾನ ಇರಬೇಕು ಅರ್ಧ ಜ್ಞಾನ ಇದ್ರೆ ಹೀಗೆ ಆಗೋದು ಎಂದರು.


ಸರ್ಕಾರ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ನಿತ್ಯ ಬೆಲೆ ಏರಿಕೆ ಎದುರಿಸುವಂತಾಗಿದ್ದು ಜನರೇ ತಿರುಗಿ ಬೀಳುವ ದಿನ ದೂರವಿಲ್ಲ ಎಂದರು.
ಪ್ರತಿಭಟನೆಯ ಸ್ಥಳದಲ್ಲೇ ರಾಮನವಮಿ ಆಚರಿಸಿದ ಯುವ ಕಾಂಗ್ರೆಸ್ಸಿಗರು ಶ್ರೀರಾಮನೆ ಸರ್ಕಾರಕ್ಕೆ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸಿದರು.

ಮಹಾನಗರ ಅಧ್ಯಕ್ಷ ಇಮ್ರಾನ್ ಯಲಿಗಾರ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ವಿನೋದ ಅಸೂಟಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸ್ವಾತಿ ಮಳಗಿ, ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ಉಭಯ ಜಿಲ್ಲಾ ಅಧ್ಯಕ್ಷರಾದ ಅನೀಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಆರೀಫ್ ಭದ್ರಾಪುರ, ಆಕಾಶ ಕೋನೇರಿ, ಅಬ್ದುಲ್ ದೇಸಾಯಿ, ಚೇತನ ಬಿಜವಾಡ, ಪ್ರವೀಣ ಶೆಲವಡಿ ಬಾಬು ಗವಳಿ ಸೇರಿದಂತೆ ಅನೇಕರಿದ್ದರು.

administrator

Related Articles

Leave a Reply

Your email address will not be published. Required fields are marked *