ಹುಬ್ಬಳ್ಳಿ : ಹುಬ್ಬಳ್ಳಿಯ ಅತ್ಯಂತ ಸೂಕ್ಷ್ಮ ಗಣೇಶ ಪೇಟೆ ಸುತ್ತಮುತ್ತಲಿನ ಪ್ರದೇಶ ಒಳಗೊಂಡ 63ನೇ ವಾರ್ಡಿನಲ್ಲಿ ಎಲ್ಲರ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ ಇಲಿಯಾಸ ಮನಿಯಾರ್ ಚುನಾಯಿತರಾಗಿದ್ದಾರೆ.
ಬಿಜೆಪಿ ಮತ್ತು ಎಐಎಂಐಎA ತೀವ್ರ ಪೈಪೋಟಿಯ ಮಧ್ಯೆಯೂ 809 ಮತಗಳ ಅಂತರದ ವಿಜಯ ಸಾಧಿಸುವ ಮೂಲಕ ತಮ್ಮ ಕೆಲಸಗಳಿಂದಲೇ ಜನಾನುರಾಗಿಯಾಗಿರುವ ವಾರ್ಡಿನ ಜನತೆ ಮನಿಯಾರ್ ಟೋಪಿಗೆ ಮತ್ತೊಂದು ಗೆಲುವಿನ ಗರಿ ಸಿಕ್ಕಿಸಿದ್ದಾರೆ.
ಮಲ್ಲಪ್ಪ ಶಿರಕೋಳ( 1631),ಆಸೀಪ್ ಬಳ್ಳಾರಿ 1591 ಮತ ಪಡೆದರೂ ಇಲಿಯಾಸ್ ಸರಳತೆಯ ಮುಂದೆ ಯಾವ ಅಬ್ಬರವು ಲೆಕ್ಕಕ್ಕೆ ಬರಲೇ ಇಲ್ಲ.
ಕಳೆದ ಅವಧಿಯಲ್ಲಿ ಇವರ ಪತ್ನಿ ಪಾಲಿಕೆ ಸದಸ್ಯರಾಗಿದ್ದಾಗಲು ಇವರೇ ದಿನಂಪ್ರತಿ ಬೆಳಿಗ್ಗೆ ವಾರ್ಡಿನ ಎಲ್ಲ ವಿಭಾಗಗಳಿಗೆ ತೆರಳಿ ಜನತೆಯ ಸಂಕಷ್ಟಗಳನ್ನು ಆಲಿಸಿ ಸ್ಪಂದಿಸುವ ಗುಣ ಎಲ್ಲ ಸಮುದಾಯದವರು ಅವರನ್ನು ಬೆಂಬಲಿಸುವAತೆ ಮಾಡಿತಲ್ಲದೇ ಶಾಸಕ ಪ್ರಸಾದ ಅಬ್ಬಯ್ಯ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡರೆAಬುದು ಮತ್ತೊಮ್ಮೆ ಅವರ ವಿರೋಧಿಗಳಿಗೆ ಸಾಭೀತಾಯಿತು.