ಹುಬ್ಬಳ್ಳಿ-ಧಾರವಾಡ ಸುದ್ದಿ
ಕೆಎ 25 ‘ಗುಳುಂ’ ಪ್ರಕರಣ;    ಜಂಟಿ ಆಯುಕ್ತರಿಂದ ಐವರಿಗೆ ನೋಟಿಸ್ – ವಿಚಾರಣೆ!

ಕೆಎ 25 ‘ಗುಳುಂ’ ಪ್ರಕರಣ; ಜಂಟಿ ಆಯುಕ್ತರಿಂದ ಐವರಿಗೆ ನೋಟಿಸ್ – ವಿಚಾರಣೆ!

ಹುಬ್ಬಳ್ಳಿ: ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರ್ಕಾರಕ್ಕೆ ಕಟ್ಟಬೇಕಾದ ಲಕ್ಷಾಂತರ ರೂ ದಂಡದ ಹಣವನ್ನು ‘ಗುಳುಂ’ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಐವರನ್ನು ವಿಚಾರಣೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆನ್ನಲಾಗಿದೆ.
ಹುಬ್ಬಳ್ಳಿ ಪಶ್ಚಿಮ ಪ್ರಾದೇಶಿಕ ಕಚೇರಿಯಲ್ಲಿ ತೆರಿಗೆ ಮತ್ತು ದಂಡದ ಮೊತ್ತವು ಮಿಸಲೋನಿಯಸ್ ಹೆಡ್‌ನಲ್ಲಿ ಪಾವತಿಯಾಗಿರುವಂತದ್ದು ಮತ್ತು ಅಂತಹ ಚಲನ್‌ಗಳು ರದ್ದಾಗಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕಚೇರಿಯ ಸ್ಥಾನಿಕ ಸಹಾಯಕ, ಅಧೀಕ್ಷಕರು,ಲೆಕ್ಕಾಧೀಕ್ಷಕರು ಅಲ್ಲದೇ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಂಟಿ ಆಯುಕ್ತರು ವಿಚಾರಣೆ ನಡೆಸಿದ್ದು ಅದರನ್ವಯ ವರದಿ ಸಲ್ಲಿಸಿದ್ದಾರೆನ್ನಲಾಗಿದೆ.
ಸಂಜೆ ದರ್ಪಣದೊಂದಿಗೆ ಮಾತನಾಡಿದ ಜಂಟಿ ಆಯುಕ್ತೆ ಶ್ರೀಮತಿ ಶೋಭಾ ಅವರು ವ್ಯತ್ಯಾಸದ ವರದಿ ಬಂದಿದ್ದು, ಈ ತಿಂಗಳ ಅಂತ್ಯಕ್ಕೆ ಲೆಕ್ಕಪತ್ರ ಪರಿಶೋಧಕರ ತಂಡ ಬಂದು ಲೆಕ್ಕಪತ್ರ ತಪಾಸಣೆ ನಡೆಸಿ ವರಿದ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಏಪ್ರಿಲ್‌ನಿಂದ ಈಚೆಗೆ ಸ್ಮಾರ್ಟ್ ಕಾರ್ಡ್ ಶುಲ್ಕ ದಾಖಲೆಗಳನ್ನು ಹೊಂದದಿರುವ ಹಾಗೂ ಸೀಜ್ ಮಾಡಿದ ವಾಹನಗಳ ಬಿಡುಗಡೆಗೆ ವಾಹನಗಳ ಮಾಲಿಕರಿಂದ ಕಟ್ಟಿಸಿಕೊಂಡ ದಂಡದ ಹಣವನ್ನು ಖಜಾನೆಗೆ ಕಟ್ಟದೇ ವಂಚಿಸಲಾಗಿರುವ ಕುರಿತು ದಿ. 17ರ ಸಂಜೆ ದರ್ಪಣದಲ್ಲಿ ವಿವರವಾಗಿ ವರದಿ ಪ್ರಕಟಿಸಲಾಗಿತ್ತು.
15ರಿಂದ 20 ಲಕ್ಷ ಗುಳುಂ ಮಾಡಲಾಗಿದ್ದರೂ ಒಟ್ಟು ಮೊತ್ತ ಪಾವತಿಸದೇ ಕೇವಲ ರೂ. 3.5 ಲಕ್ಷ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದಾಗ ಕೆಲವರ ವಿರೋಧದಿಂದ ಈ ಪ್ರಕರಣ ಬೆಳಕಿಗೆ ಬಂದಿತ್ತು.
ವಾಹನ ದಾಖಲೆ ಇಲ್ಲದಿರುವುದು, ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕು ಹಾಕಿರುವುದಕ್ಕೆ ಇಲಾಖೆಯಿಂದ ದಂಡ ಹಾಕಲಾಗುತ್ತದೆ. ತದನಂತರ ಈ ಜಾಲ ವಾಹನಗಳ ಸಂಖ್ಯೆ ಬದಲಾಗಿದೆ ಎಂದು ಖಜಾನೆಗೆ ಪಾವತಿಸದೇ ವಾಹನಗಳ ಮಾಲಿಕರಿಗೆ ನೀಡಲಾಗಿದೆ ಎಂದು ತೋರಿಸಿ ಹಣ ಮಂಗಮಾಯ ಮಾಡಲಾಗಿದೆ.

administrator

Related Articles

Leave a Reply

Your email address will not be published. Required fields are marked *