ಹುಬ್ಬಳ್ಳಿ-ಧಾರವಾಡ ಸುದ್ದಿ
ಗಾಂಧೀಜಿ ನಮಗೆ ಮಾದರಿ: ಘೋಡ್ಸೆ

ಗಾಂಧೀಜಿ ನಮಗೆ ಮಾದರಿ: ಘೋಡ್ಸೆ

ಧಾರವಾಡ: ಯಾರೆಂದುಕೊಂಡರೆ ನನಗೇನು? ನನಗೆ ಸರಿ ಕಂಡಂತೆ ನಾನು ಬಾಳುವೆ. ನನ್ನ ನಿಶ್ಚಯಗಳಿಗೆಲ್ಲವೂ ಸತ್ಯದ ಬುನಾದಿಯೇ ಆಗಿದೆ. ಇದೇ ನನ್ನ ಪ್ರತಿಬದ್ಧತೆಯ ಬಲ ಎಂದು ಘೋಷಿಸಿದ ಗಾಂಧೀಜಿ, ಅದರಂತೆಯೇ ಬದುಕಿದ್ದು ನಮಗೆಲ್ಲಾ ಅನುಕರಣೀಯ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಬೆಂಗಳೂರ ರಾಜ್ಯ ಸಂಚಾಲಕ ಸಂಭಾಜಿ ಘೋಡಸೆ ಹೇಳಿದರು.


ಇಲ್ಲಿಯ ಸಿಬಿಟಿ ಬಳಿ ಇರುವ ಹೆಗಡೆ ಮೆಡಿಕಲ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಿ ಲಾಲ ಬಹದ್ದೂರ ಶಾಸ್ತ್ರೀ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಗಾಂಧೀಜಿಯವರು ಮಹಾತ್ಮರೇ ಸರಿ ಅವರ ಜಯಂತಿಯಂದು ಅವರ ಗುಣಗಾನಕ್ಕಿಂತಲೂ ಗುಣಾನುಕರಣೆಯೇ ನಮ್ಮ ಜೀವನ ಮಾರ್ಗವಾಗಬೇಕು. ಆಗ ಮಾತ್ರ, ಹಾಗಾದಾಗ ಮಾತ್ರ ಗಾಂಧೀಜಿ ಕಂಡ ಕನಸು ನನಸಾದೀತು. ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೆಂಬ ಗಾಂಧೀಜಿ ಆಶಯ ಸಾಕಾರವಾದೀತು ಎಂದರು. ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸೇವೆ ಸಾಧನೆಯನ್ನು ಸ್ಮರಿಸಿಕೊಂಡರು.


ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕಿರಣ ಹಿರೇಮಠ, ಪರಿಸರ ಪ್ರೇಮಿ ಪ್ರಕಾಶ ಗೌಡರ ಅವರನ್ನು ಚಿಣ್ಣರು ಸನ್ಮಾನಿಸಿದರು.
ಬಿ.ಎಸ್.ಪಾಟೀಲ, ಆರ್.ಬಿ.ಪಾಟೀಲ, ಅಶೋಕ ಶೆಟ್ಟರ, ಶಶಿ ಹಳೆಮನಿ, ಡಾ.ಕಿರಣ ಬೆಲ್ಲದ, ಆನಂದ ಅಮರಶೆಟ್ಟಿ, ಕುಮಾರ ಚಿನಿವಾಲ, ಪ್ರಫುಲ್ ಟೆಂಗಿನಕಾಯಿ, ಈರಣ್ಣ ಮುಗಳಿ, ಸಾಧನಾ ಶಿಟೊಲೆ, ರೂಪಾ ಹೆಬ್ಬಾಳ, ಉಳವಪ್ಪ ದೇವಗಿರಿ, ಶಾಮ ಘಟಕಾಂಬಳೆ, ವಿನಾಯಕ ಕಿತ್ತೂರ, ದೀಪಕ ಕುಳೆನವರ, ಅಜೇಯ ಉಡಕೇರಿ, ಜ್ಞಾನಸಿಂಚನಾ ಹಿರೇಮಠ, ಅದೀತಿ ಉಡಕೇರಿ, ಅನಗಾ ಉಡಕೇರಿ, ಗೌರಿ, ಪ್ರಶಾಂತ, ಸುರಂಜನ, ಆರ್ಯನ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *