ಹುಬ್ಬಳ್ಳಿ-ಧಾರವಾಡ ಸುದ್ದಿ
ಗೆಲುವಿನ ಕ್ರೆಡಿಟ್‌ಗೆ ದಿಕ್ಕು ತಪ್ಪಿಸುವ ಯತ್ನ ಬೇಡ;  ಗೌರಿ ಯಾರು?

ಗೆಲುವಿನ ಕ್ರೆಡಿಟ್‌ಗೆ ದಿಕ್ಕು ತಪ್ಪಿಸುವ ಯತ್ನ ಬೇಡ; ಗೌರಿ ಯಾರು?

ಗೌರಿ ವರ್ತನೆಗೆ ಪಶ್ಚಿಮ ಕೈ ಪಾಲಿಕೆ ಸದಸ್ಯರ ಅಸಮಾಧಾನ

ಧಾರವಾಡ: ಇತ್ತೀಚೆಗೆ ಜರುಗಿದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ತಾವು ಕಾರಣ ಎಂದು ಬಿಂಬಿಸಿಕೊಳ್ಳಲು ಮುಂದಾಗಿರುವ ಮುಖಂಡ ನಾಗರಾಜ ಗೌರಿ ವರ್ತನೆಗೆ ಪಕ್ಷದ ನೂತನ ಪಾಲಿಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

SANJEDARPANA–CONGRES—CORPORATERS-1

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಮ್ರಾನ ಯಲಿಗಾರ, ಶಂಭುಗೌಡ ಸಾಲಮನಿ, ಗೌರಿ ಅವರ ಈ ಧೋರಣೆ ಕುರಿತು ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲ ಹಂತದ ಮುಖಂಡರ ಗಮನಕ್ಕೂ ತರುವುದಾಗಿ ಹೇಳಿದರು.
ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೧೦ ಜನ ಕಾಂಗ್ರೆಸ್ ಪಾಲಿಕೆ ಸದಸ್ಯರ ಆಯ್ಕೆಯ ಹಿಂದೆ ಮಾಜಿ ಮಂತ್ರಿ ಸಂತೋಷ್ ಲಾಡ, ವಿನಯ ಕುಲಕರ್ಣಿ, ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ಇಸ್ಮಾಯಿಲ್ ತಮಾಟಗಾರ ಹಾಗೂ ದೀಪಕ ಚಿಂಚೋರೆ ಅವರ ಸಹಿತ ಪಕ್ಷದ ಪ್ರಮುಖರ ಸಂಘಟಿತ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಕೆಯ ನೂತನ ಸದಸ್ಯರನ್ನು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀಲಕೇರಿ ಸನ್ಮಾನಿಸಿದರು. ಮಾಜಿ ಮೇಯರ ದಾನಪ್ಪ ಕಬ್ಬೇರ, ಅಬ್ದುಲ ದೇಸಾಯಿ, ಅಜಗರ ಮುಲ್ಲಾ, ಪಾಲಿಕೆ ಸದಸ್ಯರಾದ ಶಂಭುಗೌಡ ಸಾಲಮನಿ, ಇಮ್ರಾನ ಎಲಿಗಾರ, ಗಣೇಶ ಮುಧೋಳ, ಮಂಜುನಾಥ ಬಡಕುರಿ, ಡಾ. ಮಯೂರ ಮೋರೆ, ಶಂಕರ ಹರಿಜನ ಮತ್ತಿತರರಿದ್ದರು.

ತಮಟಗಾರ ಅವರು ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ನಂತರ ಕ್ಷೇತ್ರದ ಎಲ್ಲಾ ವಾರ್ಡ್‌ಗಳಲ್ಲಿ ಸಂಚರಿಸಿ, ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.
ಕೆಳ ಹಂತದಲ್ಲಿ ಪಕ್ಷವನ್ನು ಸಂಘಟಿಸಿದ ಪಲವಾಗಿ ಕ್ಷೇತ್ರದ ೧೦ ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಆಯ್ಕೆಯಾಗಿದ್ದಾರೆ. ಜೊತೆಗೆ ಚುನಾಯಿತರಾಗಿರುವ ನಾವು ಕೂಡ ಕಳೆದ ಅನೇಕ ವರ್ಷಗಳಿಂದ ವಾರ್ಡಿನ ಜನರ ಸತತ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದೇವೆ ಎಂದರು.
ಲಾಕ್‌ಡೌನ್ ಸಂದರ್ಭದಲ್ಲಿ ವಿನಯ ಕುಲಕರ್ಣಿ, ಇಸ್ಮಾಯಿಲ್ ತಮಟಗಾರ ಹಾಗೂ ಹಿರಿಯರಾದ ದೀಪಕ್ ಚಿಂಚೋರೆ ಅವರ ಮಾರ್ಗದರ್ಶನದಲ್ಲಿ ಜನರಿಗೆ ಸೇವೆ ಒದಗಿಸಿದ್ದು ನಮ್ಮ ಗೆಲುವಿಗೆ ಸಹಕಾರಿಯಾಗಿದೆ.

CONGRES CORPORATERS

ತಮಗೆ ಟಿಕೆಟ್ ಕೊಡಿಸುವ ಹಂತದಿಂದ ತಾವು ಆಯ್ಕೆಯಾಗುವ ವರೆಗೆ ಇಸ್ಮಾಯಿಲ್ ತಮಟಗಾರ ಬಹಳಷ್ಟು ಜವಾಬ್ದಾರಿ ಹೊತ್ತು ಗೆಲ್ಲಿಸಿದ್ದಾರೆ.ಜೊತೆಗೆ ಹಲವಾರು ಮುಖಂಡರು ಪ್ರಚಾರದಲ್ಲಿ ಭಾಗವಹಿಸಿ, ಆಡಳಿತ ಪಕ್ಷದ ವೈಫಲ್ಯವನ್ನು ಜನರಿಗೆ ತಿಳಿಸುವ ಮುಖಾಂತರ
ನಮ್ಮ ಗೆಲುವಿಗೆ ಶ್ರಮಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ತಾವು ಚುನಾಯಿಸಲು ಸಾಧ್ಯವಾಗಿದೆ ಹೊರತು ಬೇರೆ ಯಾರ ಬೆಂಬಲದಿಂದಲ್ಲ.
ವಾಸ್ತವ ಪರಿಸ್ಥಿತಿ ಹೀಗಿದ್ದರೂ ಗೌರಿ ಅವರು, ನಮ್ಮ ಗೆಲುವಿಗೆ ತಾವೊಬ್ಬರೇ ಕಾರಣ ಎಂದರ್ಥದಲ್ಲಿ ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ. ನಮ್ಮ ವಾರ್ಡ್‌ಗಳಲ್ಲಿ ನಮ್ಮ ಪರ ಪ್ರಚಾರ ಕೂಡ ನಡೆಸದ ಇವರು ನಮ್ಮ ಗೆಲುವಿಗೆ ಹೇಗೆ ಕಾರಣರು ಎಂದು ಪ್ರಶ್ನಿಸಿದರು. ಇಂತಹ ಕೀಳು ಪ್ರಚಾರ ಪಡೆಯುವ ಭರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ಸಾರ್ವಜನಿಕರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಆದ್ದರಿಂದ ಗೌರಿ ಅವರು ಇಂತಹ ನೀತಿಯನ್ನು ಬಿಡಬೇಕು ಎಂದು ಸಲಹೆ ನೀಡಿದರು.ಅಲ್ಲದೇ ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ತರುವುದಾಗಿ ಸ್ಪಷ್ಟಪಡಿಸಿದರು.
ಮಾಜಿ ಮೇಯರ ದಾನಪ್ಪ ಕಬ್ಬೇರ, ಅಬ್ದುಲ ದೇಸಾಯಿ, ಪಾಲಿಕೆ ಸದಸ್ಯರಾದ ಗಣೇಶ ಮುಧೋಳ, ಮಂಜುನಾಥ ಬಡಕುರಿ, ಡಾ.ಮಯೂರ ಮೋರೆ, ಶಂಕರ ಹರಿಜನ ಮತ್ತಿತರರಿದ್ದರು.

ಗೌರಿ ಯಾರು?

ನಾಗರಾಜ ಗೌರಿ ಯಾರು?. ನಾವು ಅವರನ್ನು ಎಲ್ಲಿಯೂ ನೋಡಿಲ್ಲ. ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದು ಎಲ್ಲಿ ಎಂದು ಪ್ರಶ್ನಿಸಿದರು ಪಾಲಿಕೆ ಸದಸ್ಯೆ ಬಿಲ್ಕಿಶ್‌ಬಾನು ಅವರ ಪತಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಜಗರ ಮುಲ್ಲಾ.

administrator

Related Articles

Leave a Reply

Your email address will not be published. Required fields are marked *