ಹುಬ್ಬಳ್ಳಿ-ಧಾರವಾಡ ಸುದ್ದಿ

ಘಟಾನುಘಟಿ ಪಕ್ಷೇತರರ ಫೇವರೇಟ್ ‘ಅಟೋ, ವಜ್ರ’!

ಕಮಲ-ಕೈ ಎರಡೂ ಪಕ್ಷಗಳಲ್ಲಿ ಬಂಡಾಯದ ಮುಳ್ಳು

ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಪ್ರಸಕ್ತ ಚುನಾವಣೆಯಲ್ಲಿ ನಾಲ್ಕೈದು ವಾರ್ಡಗಳಲ್ಲಿ ಬಂಡಾಯದ ಬಿಸಿ ಜೋರಾಗಿ ತಟ್ಟಿದ್ದು ಘಟಾನುಘಟಿಗಳಾರು ಹಿಂದಕ್ಕೆ ಸರಿದಿಲ್ಲವಾಗಿದೆ.


ಪಕ್ಷದ ಅಭ್ಯರ್ಥಿಗಳ ತೊಡರುಗಾಲಾಗಲಿರುವ ಪಕ್ಷೇತರರಾಗಿ ಕಣಕ್ಕಿಳಿದಿರುವ ಎಲ್ಲ ವಾರ್ಡಗಳಲ್ಲೂ ತಮ್ಮದೇ ಹಿಡಿದ ಹೊಂದಿದ್ದು ಜನತೆಗೆ ಸುಲಭವಾಗಿ ತಿಳಿಯಲು ಬಹುತೇಕರು ಅಟೋ ರಿಕ್ಷಾ ಮೊರೆ ಹೋಗಿದ್ದರೆ ಇನ್ನು ಕೆಲವರು ವಜ್ರದ ಬೆನ್ನು ಬಿದ್ದಿದ್ದಾರೆ.
ಪಕ್ಷ ಬದಿಗಿಡಿ ಎನ್ನುವ ಮೂಲಕ ಅನೇಕ ಮಾಜಿ ಕಾರ್ಪೋರೇಟರುಗಳು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.


ಕಳೆದ ಬಾರಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಕ್ತುಂ ಯರಗಟ್ಟಿ, ಮಲ್ಲಿಕಾರ್ಜುನ ಹೊರಕೇರಿ ಇಬ್ಬರೂ ಅಟೋ ರಿಕ್ಷಾ ಚಿಹ್ನೆಯಡಿ ಗೆದ್ದಿದ್ದರಿಂದ ಈ ಬಾರಿಯೂ ಅಟೋ ರಿಕ್ಷಾ ಪಕ್ಷೇತರರ ಫೇವರಿಟ್ ಚಿಹ್ನೆಯಾಗಿದೆ.

ಲಕ್ಷ್ಮಣ ಗಂಡಗಾಳೇಕರ ಪತ್ನಿ ಯಶೋಧಾ ಗಂಡಗಾಳೇಕರ(54), ಚಂದ್ರಿಕಾ ಮೇಸ್ತಿç (57), ಮಂಜುಳಾ ಅಕ್ಕೂರ (26) ಬೀಬಿ ಆಯಿಷಾ ಯರಗಟ್ಟಿ(75),ಸಮೀರ ಖಾನ(43) ಆರತಿ ಬೆಳಗಾಂವಕರ(09), ಮಜೀದಖಾನ ಕಿತ್ತೂರ (13) , ಚೇತನ್ ಹಿರೆಕೆರೂರ( 52), ದೀಪಾ ನಾಯಕ (02)ಮುಂತಾದವರು ಅಟೋ ರಿಕ್ಷಾ ಚಿಹ್ನೆ ಪಡೆದಿದ್ದಾರೆ.
ಮಾಜಿ ಉಪಮೇಯರ್ ಲಕ್ಷಿö್ಮ ಉಪ್ಪಾರ (47) ಹಾಗೂ ಮಂಜುನಾಥ ಕದಂ (08) ಸಿಲಿಂಡರ್, ಮಾಜಿ ಉಪಮೇಯರ್ ಮೋಹನ್ ಅಸುಂಡಿ ಪತ್ನಿ ಅಕ್ಷತಾ ಅಸುಂಡಿ (82) ಟ್ರಾಕ್ಟರ್, 71ರಲ್ಲಿ ಸೆಡ್ಡು ಹೊಡೆದಿರುವ ಮಾಜಿ ವಿಪಕ್ಷನಾಯಕ ಗಣೇಶ ಟಗರಗುಂಟಿ ಹೊಲಿಗೆ ಯಂತ್ರ ಚಿಹ್ನೆ ಪಡೆದಿದ್ದಾರೆ. ಈರೇಶ ಅಂಚಟಗೇರಿ ವಿರುದ್ದ ಸ್ಪರ್ಧಿಸಿರುವ ಮಂಜು ನಡಟ್ಟಿ ಟಿ.ವಿ. ಚಿಹ್ನೆ ಪಡೆದಿದ್ದಾರೆ. 48ರ ಪಕ್ಷೇತರ ಜಿ.ಜಿ.ಹಿರೇಮಠ ತೆಂಗಿನ ತೋಟ ಪಡೆದಿದ್ದಾರೆ.

ವಿಜಯಕುಮಾರ ಅಪ್ಪಾಜಿ (28), ಹೂವಪ್ಪ ದಾಯಗೋಡಿ (43) ಸಂತೋಷ ಶೆಟ್ಟಿ (52) ಮುಂತಾದವರು ವಜ್ರದ ಚಿಹ್ನೆಯ ಮೊರೆ ಹೋಗಿದ್ದಾರೆ.
ಬಿಜೆಪಿಯಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಪ್ರಮುಖರಾದ ಮಾಧವಿ ಡಂಬಳ, ಸ್ವಾಮಿ ಮಹಾಜನಶೆಟ್ಟಿ, ರಂಗನಾಯಕ ತಪೇಲಾ, ಮಹಾಂತೇಶ ಗಿರಿಮಠ, ಸಂಗೀತಾ ಇಜಾರದ ಮಾತ್ರ ಹಿಂದಕ್ಕೆ ಪಡೆದಿದ್ದು, ಉಳಿದ ಪ್ರಮುಖರು ಮಗ್ಗುಲ ಮುಳ್ಳಾಗಿಯೇ ಮುಂದುವರಿದ್ದಾರೆ.

ಕಳೆದಬಾರಿ ಅಟೋ ಪಡೆದಿದ್ದ ಯರಗಟ್ಟಿ ಈ ಬಾರಿ ಪತ್ನಿ ಕಣಕ್ಕಿಳಿಸಿದ್ದು, ನಾಲ್ಕು ಜನ ಅದೇ ಚಿಹ್ನೆ ಬಯಸಿದ್ದರಿಂದ ಲಾಟರಿ ಎತ್ತಿದಾಗ ಅದೃಷ್ಟ ಬೀಬಿ ಆಯಿಷಾ ಯರಗಟ್ಟಿ ಪಾಲಾಯಿತು.

ಅನೇಕರಿಗೆ ಚಿಹ್ನೆ ದೊರೆತರೂ ಅಧಿಕೃತವಾಗಿ ಚುನಾವಣಾಧಿಕಾರಿಗಳು ಪತ್ರ ಇಂದು ಮಧ್ಯಾಹ್ನದವರೆಗೂ ನೀಡಿಲ್ಲ ಎನ್ನಲಾಗಿದೆ.
ಕೈ.ಕಮಲ ಎರಡೂ ಪಕ್ಷಗಳಿಗೂ 4-5 ವಾರ್ಡಗಳಲ್ಲಿ ಪಕ್ಷೇತರರು ತೀವ್ರ ಸ್ಪರ್ಧೆ ನೀಡುವುದು ಖಚಿತವಾಗಿದ್ದು ಸ್ವತಃ 71 ನೇ ವಾರ್ಡಲ್ಲಿ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಪುತ್ರ ಕಣಕ್ಕಿಳಿದಿದ್ದು ಇಲ್ಲಿಯೂ ಟಗರಗುಂಟಿ ಅಡ್ಡಗಾಲಾಗಿದ್ದು ಮುಂದಿನ ದಿನಗಳಲ್ಲಿ ಯಾವ ತಿರುವ ಪಡೆವುದೋ ಕಾದು ನೋಡಬೇಕಿದೆ.

ಗಣೇಶ ಟಗರಗುಂಟಿ ಎರಡು ವರ್ಷಗಳ ಹಿಂದೆ ತಮ್ಮ ವಾರ್ಡಲ್ಲಿ ಹೊಲಿಗೆ ಯಂತ್ರ ಹಂಚಿದ್ದು ಇಂದು ಅದೇ ಚಿಹ್ನೆಯೊಂದಿಗೆ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್‌ನವರೂ ಉಣಕಲ್ ಪ್ರದೇಶದಲ್ಲಿ ಅಭ್ಯರ್ಥಿಗಳನ್ನು ಉಳಿಸಿದ್ದು ಮುಷ್ತಾಕ್ ಜವಳಿ, ಲಕ್ಷ್ಮಿ ಜಾಧವ, ಶ್ರೀಮತಿ ಉಪ್ಪಾರ, ಷಣ್ಮುಖ ಬೆಟಗೇರಿ ಇವರನ್ನು ಹಿಂದಕ್ಕೆ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.

administrator

Related Articles

Leave a Reply

Your email address will not be published. Required fields are marked *