ಹುಬ್ಬಳ್ಳಿ: ತೈಲ ದರ ಏರಿಕೆ ವಿರೋಧಿಸಿ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಹುಬ್ಬಳ್ಳಿ, ಧಾರವಾಡ, ನವಲಗುಂದ,ಕಲಘಟಗಿ ಸೇರಿದಂತೆ ಸೈಕಲ್ ಜಾಥಾ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಹುಬ್ಬಳ್ಳಿ ಸ್ಟೇಷನ್ ರಸ್ತೆಯ ಪ್ರಧಾನ ಅಂಚೆ ಕಚೇರಿ ಪಕ್ಕದ ಡಾ.ಅಂಬೇಡ್ಕರ್ ಪ್ರತಿಮೆಯಿಂದ ಕಿಮ್ಸ್ ದ್ವಾರದ ಬಳಿ ಇರುವ ಮಹಾತ್ಮಾ ಗಾಂಧೀಜಿ ಪ್ರತಿಮೆವರೆಗೆ ನಡೆದ ಜಾಥಾದಲ್ಲಿ ಕೆಪಿಸಿಸಿ ವೀಕ್ಷಕ ಅಜಯ ಕುಮಾರ ಸರನಾಯಕ, ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವೈ ಸಯೀದ ಅಹ್ಮದ, ಉಭಯ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ,ಅನಿಲಕುಮಾರ ಪಾಟೀಲ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ರಾಜ್ಯ ಎಸ್ ಸಿ ಘಟಕದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ, ಬ್ಲಾಕ್ ಅಧ್ಯಕ್ಷರಾದ ಮೆಹಮೂದ ಕೋಳೂರ, ಪ್ರಸನ್ನ ಮೀರಜಕರ,ರಜತ ಉಳ್ಳಾಗಡ್ಡಿಮಠ, ಮುಖಂಡರಾದ ಅಲ್ತಾಫ್ ನವಾಜ್ ಕಿತ್ತೂರ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ, ದಶರಥ ವಾಲಿ, ಮೋಹನ ಹಿರೇಮನಿ, ಬಶೀರ ಗುಡಮಾಲ, ಹಾಜಿ ಹಿಂಡಸಗೇರಿ, ಸಂತೋಷ ಜಕ್ಕಪ್ಪನವರ, ಮಾಜಿ ಮೇಯರ ವೆಂಕಟೇಶ ಮೇಸ್ತ್ರಿ, ಗೌತಮ ಹರಿವಾಣ, ಶ್ರೀನಿವಾಸ ಬೆಳದಡಿ, ಅನಿತಾ ಗುಂಜಾಳ,ಮಹೇಶ ದಾಬಡೆ, ಸಂತೋಷ ನಾಯಕರ, ದೀಪಾ ಗೌರಿ, ಸಾಗರ ಹಿರೇಮನಿ, ಮಾರುತಿ ಬಾರಕೇರ, ನವೀದ ಮುಲ್ಲಾ, ಬಸವರಾಜ ಬೆನಕಲ್, ಗಣೇಶ ದೊಡ್ಡಮನಿ, ಶಾರುಖ ಮುಲ್ಲಾ, ಶಫಿ ಯಾದಗಿರಿ,ಶಾಜಮಾನ ಮುಜಾಹಿದ, ಮಾಜಿ ಮೇಯರ ವೆಂಕಟೇಶ ಮೇಸ್ತ್ರಿ, ಪ್ರಕಾಶ ಜಾಧವ, ಪುರುಷೋತ್ತಮ ಕಲಕುಂಟ್ಲಾ, ಮಲ್ಲಿಕಾರ್ಜುನ ಯಾತಗೇರಿ, ಶ್ರೀಕಾಂತ ಬಾರಕೇರ, ಮಣಿಕಂಠ ಗುಡಿಹಾಳ, ಇಕ್ಬಾಲ್ ನವಲೂರ, ನಾಗರಾಜ ಗಬ್ಬೂರ, ಖಾಸಿಂ ಕೂಡಲಗಿ, ಸುನಿಲ ಮರಾಟೆ, ಲಕ್ಷ್ಮಣ ಗಡ್ಡಿ ಸೇರಿದಂತೆ ಅನೇಕರಿದ್ದರು.
ತೈಲ ಬೆಲೆ ಮತ್ತು ಅಡಿಗೆ ಅನಿಲ ದರವನ್ನು ಅಧಿಕಾರಕ್ಕೆ ಬಂದ ದಿನದಿಂದ ಹೆಚ್ಚಿಸುತ್ತಲೇ ಇದ್ದು ಸಾಮಾನ್ಯರ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ಮಾತನಾಡಿದ ಮುಖಂಡರು ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಕಲಘಟಗಿ ವರದಿ
ಕಲಘಟಗಿ ತಾಲೂಕು ಕಾಂಗ್ರೆಸ್ನಿಂದ ವತಿಯಿಂದಲೂ ವಿನೂತನವಾಗಿ ಪ್ರತಿಭಟಿಸಲಾಯಿತು.
ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಪೆಟ್ರೋಲ್ ಬಂಕ್ ಬಳಿಯಿಂದ ಮಾಜಿ ಸಚಿವ ಸಂತೋಷ ಲಾಡ್ ಅವರು ಸುಮಾರು ನಾಲ್ಕು ಕಿಲೋಮೀಟರ್ ಸೈಕಲ್ ಜಾಥಾ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ತಾಲುಕಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಪಂ ಮಾಜಿ ಅಧ್ಯಕ್ಷ ಎಸ್ .ಆರ್.ಪಾಟೀಲ, ಮಾಜಿ ಸದಸ್ಯರಾದ ವೈ ಬಿ ದಾಸನಕೊಪ್ಪ ಲಿಂಗರೆಡ್ಡಿ ನುಡಿನಮನಿ, ಸುಧೀರ್ ಬೋಳಾರ್, ವೃಷಭೇಂದ್ರ ಪಟ್ಟಣಶೆಟ್ಟಿ ಶಂಕರಗಿರಿ ಭಾವಾನವರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರಲ್ಲದೇ ಕೇಂದ್ರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ವರದಿ
ನವನಗರ ಬ್ಲಾಕ್ ಹಾಗೂ ರಾಣಿ ಚೆನ್ನಮ್ಮ ಬ್ಲಾಕ್ ವತಿಯಿಂದ ಧಾರವಾಡದಲ್ಲಿ ಸೈಕಲ್ ಜಾಥಾ ನಡೆಸಿ ಪ್ರತಿಭಟಿಸ ಲಾಯಿತು. ಬಸವರಾಜ ಕಿತ್ತೂರ, ಬಸವರಾಜ ಮಲಕಾರಿ, ನಾಗರಾಜ ಗೌರಿ, ದೀಪಕ ಚಿಂಚೋರೆ, ಐ.ಎಂ.ಜವಳಿ ಸೇರಿದಂತೆ ನೂರಾರು ಪ್ರಮುಖರು ಪಾಲ್ಗೊಂಡಿ ದ್ದರು.
ನವಲಗುಂದ ವರದಿ:
ಪಟ್ಟಣದ ಬಸ್ ಡಿಪೋದಿಂದ ನಗರ ಪ್ರಮುಖ ಬೀದಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಮುಖಂಡರಾದ ಪ್ರಕಾಶಗೌಡ ಪಾಟೀಲ, ಪಿ.ಎಚ್.ನೀಲಕೇರಿ, ಬ್ಲಾಕ್ ಅಧ್ಯಕ್ಷರಾದ ವರ್ಧಮಾನಗೌಡ ಹಿರೇಗೌಡರ, ಮಂಜು ಮಾಯಣ್ಣವರ, ಪುರಸಭಾ ಅಧ್ಯಕ್ಷ ಮಂಜು ಜಾಧವ, ಉಪಾಧ್ಯಕ್ಷೆ ಖೈರುನಬೀ ನಾಶಿಪುಡಿ, ಕೆಸಿಸಿ ಬ್ಯಾಂಕ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ವೆಂಕಮ್ಮ ಚಾಕಲಬ್ಬಿ, ಕಲ್ಲಪ್ಪ ಶಿವಾನಂದ ತಡಸಿ, ವೆಂಕಟೇಶ ಮಾಡೂಳ್ಳಿ, ಆರ್.ಎಚ್.ಕೋನರಡ್ಡಿ, ವಿ.ಡಿ.ಅಂದಾನಿಗೌಡ್ರ, ರವಿ ಬೆಂಡಿಗೇರಿ, ಉಸ್ಮಾನ ಬಬರ್ಚಿ, ಯಾಸ್ಮಾನ ಗುಡಗೇರಿ, ಪದ್ಮಾವತಿ ಪೂಜಾರ ಇದ್ದರು.