ಹುಬ್ಬಳ್ಳಿ-ಧಾರವಾಡ ಸುದ್ದಿ
ನಾಳೆಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ; ವಿವಿಧ ಪರವಾನಿಗೆ ನೀಡಲು ಏಕಗವಾಕ್ಷಿ ಕೇಂದ್ರಗಳ ಆರಂಭ*:  *ಜಿಲ್ಲಾಧಿಕಾರಿ ನಿತೇಶ ಪಾಟೀಲ

ನಾಳೆಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ; ವಿವಿಧ ಪರವಾನಿಗೆ ನೀಡಲು ಏಕಗವಾಕ್ಷಿ ಕೇಂದ್ರಗಳ ಆರಂಭ*: *ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಸಿದಂತೆ ಚುನಾವಣಾ ಅಧಿಸೂಚನೆಯನ್ನು ನಾಳೆ (ಆ.16) ಬೆಳಿಗ್ಗೆ ಹೊರಡಿಸಲಾಗುವುದು. ಮತ್ತು ಆಕಾಂಕ್ಷಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯು ನಾಳೆಯಿಂದ ಆರಂಭವಾಗಲಿದ್ದು, ಅಭ್ಯರ್ಥಿಗಳಿಗೆ ಅಗತ್ಯವಿರುವ ವಿವಿಧ ಪರವಾನಿಗೆಗಳನ್ನು ನೀಡಲು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಎರಡು ಪ್ರತ್ಯೇಕ ಏಕಗವಾಕ್ಷಿ ಕೇಂದ್ರಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡಗಳಿಗೆ ಚುನಾವಣೆ ಜರುಗಲಿದ್ದು, ಅವಳಿ ನಗರದ ಒಟ್ಟು 8,11,537 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ ಎಂದು ಅವರು ಹೇಳಿದರು.

*ಚುನಾವಣಾ ವೇಳಾಪಟ್ಟಿ:* ಹುಬ್ಬಳ್ಳಿ ಧಾರವಾಡ ಮಹಾನಗ ಪಾಲಿಕೆ ಚುನಾವಾಣೆ 2021 ಸಂಬಂಧಿಸಿದ್ದತೆ, ಆಗಸ್ಟ್ 16 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಮತ್ತು ನಾಮಪತ್ರ ಸಲ್ಲಿಕೆ ಆರಂಭ ವಾಗುತ್ತದೆ. ಆಗಸ್ಟ್ 23 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 24 ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ. ಆಗಸ್ಟ್ 26 ರಂದು ಉಮೇದವಾರಿಕೆಗಳನ್ನು ಹಿಂಪಡೆಯಬಹುದು. ಸೆಪ್ಟಂಬರ್ 3 ರಂದು ಮತದಾನ ಅವಶ್ಯವಿದ್ದರೆ ಮತದಾನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಜರುಗಿಸಲಾಗುವುದು. ಮರು ಮತದಾನ ಅವಶ್ಯವಿದ್ದಲ್ಲಿ ಸೆಪ್ಟಂಬರ್ 5 ರಂದು ಮತದಾನ ನಡೆಸಲಾಗುದು. ಸೆಪ್ಟಂಬರ್ 6 ರಂದು ಮತಗಳ ಎಣಿಕೆ ಮುಂಜಾನೆ 8 ಗಂಟೆಯಿಂದ ಪ್ರಾರಂಭಿಸಲಾಗುವುದು ಎಂದು ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಹೋರಡಿಸಲಾಗಿದೆ. ಮತ್ತು 16 ಚುನಾವಣಾಧಿಕಾರಿ ಹಾಗೂ 16 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.

*ನಾಮಪತ್ರದೊಂದಿಗೆ ಸಲ್ಲಿಸಬೇಕಾದ ದಾಖಲೆಗಳು* :
• ನಾಮಪತ್ರ,
• ಠೇವಣಿ ಸಂದಾಯದ ರಶೀದಿ,
• ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರ,
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ.
• ಎರಡು ಭಾವಚಿತ್ರ – (ಗುರುತಿನ ಚೀಟಿ ನೀಡಲು ಹಾಗೂ ಮತಪತ್ರದಲ್ಲಿ ಮುದ್ರಿಸಲು ಮೂರು ತಿಂಗಳೊಳಗಿನ ಭಾವಚಿತ್ರವನ್ನು ನಿಗಧಿತ ಘೋಷಣಾ ಪತ್ರದೊಂದಿಗೆ ಸಲ್ಲಿಸಬೇಕು.)
• ಅಭ್ಯರ್ಥಿಯ ಹೆಸರು ಮತಪತ್ರದಲ್ಲಿ ಮುದ್ರಿಸಲು,
• ನಮೂನೆ ಎ ಮತ್ತು ಬಿ ಅಥವಾ ಸಿ ಮತ್ತು ಡಿ (ರಾಜಕೀಯ ಪಕ್ಷಗಳ ಅಭ್ಯರ್ಥಿ ಆದಲ್ಲಿ),
• ಮತದಾರರ ಪಟ್ಟಿಯ ದೃಢೀಕೃತ ಪ್ರತಿ,
• ನಾಮಪತ್ರದೊಂದಿಗೆ ಅಭ್ಯರ್ಥಿಯ ಮಾದರಿ ಸಹಿಯ ಪ್ರತಿ
• ಬೇಬಾಕಿ ಪ್ರಮಾಣ ಪತ್ರ

*ವಾರ್ಡಗಳಿಗೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕರಿಸುವ ಸ್ಥಳ* :
ವಾರ್ಡ್ 01 ರಿಂದ 05 ರ ವರೆಗೆ ಮಹಾನಗರ ಪಾಲಿಕೆ ಕಚೇರಿ ಧಾರವಾಡ ಸಾಮಾನ್ಯ ಆಡಳಿತ ವಿಭಾಗ ಹೊಸ ಕಟ್ಟಡದ ಪಕ್ಕದ ಕೋಣೆ, ವಾರ್ಡ್ 6 ರಿಂದ 10 ರ ವರೆಗೆ ಮಹಾನಗರ ಪಾಲಿಕೆ ಕಚೇರಿ ಧಾರವಾಡ ಸಾಮಾನ್ಯ ಆಡಳಿತ ವಿಭಾಗ ಹಳೇ ಕಟ್ಟಡದಲ್ಲಿರುವ ಕೋಣೆ, ವಾರ್ಡ್ 11 ರಿಂದ 15 ರ ವರೆಗೆ ಧಾರವಾಡ ಮಹಾನಗರ ಪಾಲಿಕೆಯಲ್ಲಿರುವ 74 ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ, ವಾರ್ಡ್ 16 ರಿಂದ 20 ರ ವರೆಗೆ ಧಾರವಾಡ ಮಹಾನಗರ ಪಾಲಿಕೆಯಲ್ಲಿರುವ ಮಹಾಪೌರರ ಕಚೇರಿ, ವಾರ್ಡ್ 21 ರಿಂದ 25 ರ ವರೆಗೆ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಜಲಮಂಡಳಿ ಕಚೇರಿ ಹಳೇ ಕಟ್ಟಡ ವ.ಕ.ನಂ.3, ಮೇಲಿನ ಅಂತಸ್ತು, ವಾರ್ಡ್ 26 ರಿಂದ 30 ರ ವರೆಗೆ ನವನಗರ ಅಂಬೇಡ್ಕರ ಭವನ, ವಾರ್ಡ್ 31 ರಿಂದ 35 ರ ವರೆಗೆ ಹುಬ್ಬಳ್ಳಿ ಈಜುಗೋಳ ಕಟ್ಟಡ ವಲಯ ಕಚೇರಿ ನಂ.5 ಮೇಲ್ಮಹಡಿ, ವಾರ್ಡ್ 36 ರಿಂದ 40 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ನಗರ ಯೋಜನೆ ಸ್ಥಾಯಿ ಸಮಿತಿ ಕಾರ್ಯಾಲಯ.

ವಾರ್ಡ್ 41 ರಿಂದ 46 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 47 ರಿಂದ 51 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ತೇರಿಗೆ ನಿರ್ಧರಣೆ ಹಣಕಾಸು ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 52 ರಿಂದ 56 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಲೆಕ್ಕ ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 57 ರಿಂದ 61 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಉಪಮಹಾಪರರ ಕಾರ್ಯಾಲಯ, ವಾರ್ಡ್ 62 ರಿಂದ 66 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ವಿರೋಧ ಪಕ್ಷದ ನಾಯಕರ ಕಾರ್ಯಾಲಯ, ವಾರ್ಡ್ 67 ರಿಂದ 71 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿಯ ಹಿಂಭಾಗದ ಪಿ.ಆರ್.ಓ. ಕಚೇರಿ, ವಾರ್ಡ್ 72 ರಿಂದ 77 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ನೌಕರರ ಪತ್ತಿನ ಸಂಘದ ಕಚೇರಿ, ವಾರ್ಡ್ 78 ರಿಂದ 82 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿರುವ ಸಹಾಯಕ ನಿರ್ದೇಶಕರು, ನಗರ ಯೋಜನೆ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು.

*ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ:* ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆಯು ಆಗಸ್ಟ್ 16 ರಿಂದ ಪ್ರಾರಂಭಗೊಂಡು ಸೆಪ್ಟಂಬರ್ 6 ರ ವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ನೀಡಿದ ನಿರ್ದೇಶನಗಳಂತೆ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆದ್ದರಿಂದ ಎಲ್ಲ ಪಕ್ಷದವರು ಸಹಕರಿಸಲು ಹಾಗೂ ತಮ್ಮ ಪಕ್ಷದ ವತಿಯಿಂದ ಚುನಾವಣೆಗೆ ಸ್ಪರ್ಧಿಸಲಿರುವ ಎಲ್ಲ ಅಭ್ಯರ್ಥಿಗಳಿಗೆ ಸೂಚಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

*ಮತದಾರರ ಪಟ್ಟಿ:* ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಜುಲೈ 09 ರಂದು ಅಂತಿಮ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 403497 ಪುರುಷ ಹಾಗೂ 407954 ಮಹಿಳಾ ಹಾಗೂ 86 ಇತರೆ ಸೇರಿ ಒಟ್ಟು 811537 ಮತದಾರರು ಇದ್ದಾರೆ. ಮತ್ತು ಆಗಸ್ಟ್ 13ರವರೆಗೆ ನಮೂನೆ 6ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿರುವ ಮತದಾರರ ಹೆಸರು ಸೇರಿಸಿ ಪೂರಕ ಮತದಾರರ ಪಟ್ಟಿಯನ್ನು ತಯಾರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

*ವಾರ್ಡ ಮತ್ತು ಮತದಾನ ಕೇಂದ್ರ*: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 82 ವಾರ್ಡಗಳಿಗೆ ಒಟ್ಟು 837 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

*ಮತಯಂತ್ರಗಳ ಬಳಕೆ* : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2021ರ ಚುನಾವಣೆಗೆ ಇ.ವಿ.ಎಂ ಯಂತ್ರಗಳನ್ನು ಬಳಸಲಾಗುವುದು. ಈ ಚುನಾವಣೆಯಲ್ಲಿ ವಿವಿಪ್ಯಾಟ್ ಇರುವುದಿಲ್ಲ. ಚುನಾವಣೆಗಾಗಿ ನೇಮಕಗೊಂಡ ಸೆಕ್ಟ್‍ರ್ ಅಧಿಕಾರಿ, ಮೈಕ್ರೋ ಅಬ್ಸರವರ್, ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲು ನುರಿತ ಮಾಸ್ಟರ್ ಟ್ರೇನರ್ಸ್‍ರವರನ್ನು ಗುರುತಿಸಲಾಗಿದೆ.

*ಅಭ್ಯರ್ಥಿಗಳ ವೆಚ್ಚ ಪರಿಶೀಲನೆಗಾಗಿ ನೋಡಲ್ ಅಧಿಕಾರಿಗಳ ನೇಮಕ* :
ಈ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲಿಸಲು ಅಗತ್ಯವಿರುವ ಅಧಿಕಾರಿಗಳನ್ನು ನೇಮಿಸಲಾಗಿದೆ. ನೇಮಕಗೊಂಡ ಅಧಿಕಾರಿಗಳು ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರಗಳನ್ನು ರಾಜ್ಯ ಚುನಾವಣಾ ಆಯೋಗ ನೀಡುವ ನಿರ್ದೇಶನಗಳಂತೆ ಅಗತ್ಯ ಕ್ರಮ ಜರುಗಿಸುವರು.

*ಮತದಾನ ಸಿಬ್ಬಂದಿಗಳ ನೇಮಕ:*
ಪ್ರತಿ ಮತಗಟ್ಟೆಗೆ ಒಬ್ಬರು ಪಿಆರ್‍ಓ, ಒಬ್ಬರು ಏಪಿಆರ್‍ಓ, ಒಬ್ಬರು ಮೊದಲನೇ ಪೋಲಿಂಗ್ ಅಧಿಕಾರಿ, ಒಬ್ಬರು ಎರಡನೇ ಪೋಲಿಂಗ್ ಅಧಿಕಾರಿ ಹೀಗೆ ಒಟ್ಟು 4 ಜನ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗುವುದು. ಇದರೊಂದಿಗೆ ಶೇ. 10 ರಷ್ಟು ಕಾಯ್ದಿರಿಸಿದ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಿ ಆದೇಶ ನೀಡಲಾಗುವುದು.

*ಮಸ್ಟರಿಂಗ್, ಡಿ-ಮಸ್ಟರಿಂಗ್ ಕೇಂದ್ರ:* ವಾರ್ಡ್ 1 ರಿಂದ 34 ರ ವರೆಗೆ ಧಾರವಾಡ ಆರ್.ಎಲ್.ಎಸ್.ಪದವಿ ಪೂರ್ವ ಮಹಾವಿದ್ಯಾಲಯ, ವಾರ್ಡ್ 35 ರಿಂದ 82 ರ ವರೆಗೆ ಹುಬ್ಬಳ್ಳಿ ಲ್ಯಾಮಿಂಗ್ಟನ್ ಬಾಲಕ ಬಾಲಕಿಯರ ಪ್ರೌಢ ಶಾಲೆಯಲ್ಲಿ ಮಸ್ಟರಿಂಗ್ ಹಾಗೂ ಡೀ ಮಸ್ಟರಿಂಗ್ ಕೇಂದ್ರ ಗುರುತಿಸಲಾಗಿದೆ.

*ಮತ ಏಣಿಕೆ*:
ಸೆಪ್ಟೆಂಬರ್ 3 ರಂದು ಜರುಗುವ ಮಹಾನಗರ ಪಾಲಿಕೆಯ 82 ವಾರ್ಡಗಳ ಚುನಾವಣೆಯ ಮತ ಏಣಿಕೆಯನ್ನು ಸೆಪ್ಟೆಂಬರ್ 6ರಂದು ಬೆಳಿಗ್ಗೆ 8 ಗಂಟೆಯಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ನಡೆಸಲಾಗುವುದು.

*ಸದಾಚಾರ ಸಂಹಿತೆ ತಂಡಗಳ ನೇಮಕಾತಿ*: ಮಹಾನಗರ ಪಾಲಿಕೆಯ ವ್ಯಾಪ್ತಿಯ ಒಟ್ಟು 82 ವಾರ್ಡಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿಡಿಯೋಗ್ರಾಫರ್‍ನ್ನು ಒಳಗೊಂಡಿರುವ ಒಟ್ಟು 8 ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದೆ.
ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. (ಮೊ9731008189, 7018897824) ಅವರನ್ನು ಮತ್ತು ಪ್ರತಿ 10 ವಾರ್ಡಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಿ ಆದೇಶಿಸಲಾಗಿದೆ. ವಾರ್ಡ್ 1 ರಿಂದ 10 ರವರೆಗೆ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ರಾಘವೇಂದ್ರ ಬಮ್ಮಿಗಟ್ಟಿ (ಮೊ. 8277931274), ವಾರ್ಡ್ 11 ರಿಂದ 20 ರ ವರೆಗೆ ಧಾರವಾಡ ಎಪಿಎಂಸಿ ಕಾರ್ಯದರ್ಶಿ ವಿ.ಜಿ ಹಿರೇಮಠ (ಮೊ. 9901421363), ವಾರ್ಡ್ 21 ರಿಂದ 30 ರ ವರೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣ ಜಾನುವಾರು ಸಂವರ್ದನ ಮತ್ತು ತರಬೇತಿ ಉಪನಿರ್ದೇಶಕ ರಮೇಶ ದೊಡಮನಿ (ಮೊ. 9916190345), ವಾರ್ಡ್ 31 ರಿಂದ 40 ರ ವರೆಗೆ ಎಮ್‍ಐ ಉಪವಿಭಾಗ ಸಹಾಯಕ ಕಾರ್ಯನಿರ್ವಾಹ ಅಭಿಯಂತರ ನಟೇಶ ಹೆಚ್.ಟಿ. (ಮೊ. 9902821359), ವಾರ್ಡ್ 41 ರಿಂದ 51 ರ ವರೆಗೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಮಡಿವಾಳಪ್ಪ (ಮೊ. 8867495018), ವಾರ್ಡ್ 52 ರಿಂದ 61 ರ ವರೆಗೆ ಹುಬ್ಬಳ್ಳಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿ.ವಾಯ್.ರ್ಯಾಗಿ, ವಾರ್ಡ್ 62 ರಿಂದ 71 ರ ವರೆಗೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕ್ವಾಲಿಟಿ ಕಂಟ್ರೋಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಹುರಕಡ್ಲಿ (ಮೊ. 9980516931), ವಾರ್ಡ್ 72 ರಿಂದ 82 ರವರೆಗೆ ಹುಬ್ಬಳ್ಳಿ ಪಂಚಾಯತ ರಾಜ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆರ್.ವೀರಕರ (ಮೊ. 8277071511) ರವರನ್ನು ನೇಮಿಸಲಾಗಿದೆ.

*ವಿವಿಧ ಪರವಾನಿಗೆ ನೀಡಲು ಏಕಗವಾಕ್ಷಿ ಕೇಂದ್ರ (Single Window System)*: ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಅಗತ್ಯವಿರುವ ವಿವಿಧ ಪರವಾನಿಗೆಗಳನ್ನು ನೀಡಲು 1 ರಿಂದ 30 ರ ವರೆಗಿನ ವಾರ್ಡ್‍ಗಳಿಗೆ ವಲಯ ಕಚೇರಿ ನಂ.1 ಸಹಾಯಕ ಆಯುಕ್ತ ಆರ್ ದಶವಂತ (ಮೊ. 9741089724) ಹಾಗೂ 31 ರಿಂದ 82 ರ ವರೆಗಿನ ವಾರ್ಡ್‍ಗಳಿಗೆ ವಲಯ ಕಚೇರಿ ನಂ.11 ಅಭಿವೃದ್ಧಿ ಅಧಿಕಾರಿ ಎ.ವಾಯ್.ಕಾಂಬಳೆ (ಮೊ. 9880422978) ಅವರನ್ನು ಏಕಗವಾಕ್ಷಿ ಕೇಂದ್ರಗಳಿಗೆ ನೇಮಿಸಲಾಗಿದೆ.

*ದೂರುಗಳ ನಿರ್ವಹಣೆಗೆ ಸಹಾಯವಾಣಿ:* ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ವಿವಿಧ ದೂರುಗಳ ನಿರ್ವಹಣೆಗಾಗಿ ಸಹಾಯವಾನಿಯನ್ನು ತೆರಯಲಾಗಿದ್ದು, ಮಹಾನಗರ ಪಾಲಿಕೆಯ ಹೊರ್ತಿ ರಾಜೇಂದ್ರ ಸಿ. ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಪಾಲಿಕೆಯ ಸಾರ್ವತ್ರಿಕ ಚುಣಾವಣೆಗೆ ಸಂಬಂಧಿಸಿದ ದೂರುಗಳನ್ನು 0836-2213888, 2213869, 2213886 ಮತ್ತು 2213889 ಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಉಪವಿಭಾಗಾಧಿಕಾರಿ ಹಾಗೂ ಪಾಲಿಕೆಯ ಚುನಾವಣಾ ಸದಾಚಾರ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಡಾ. ಗೋಪಾಲಕೃಷ್ಣ.ಬಿ, ಐಎಎಸ್ ಪ್ರೋಬೆಷನರಿ ಅಧಿಕಾರಿ ಮಾಧವ ಗಿತ್ತೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *