ಹುಬ್ಬಳ್ಳಿ-ಧಾರವಾಡ ಸುದ್ದಿ
ಪಾಲಿಕೆ ಕೈವಶಕ್ಕೆ ಸ್ಕೆಚ್;   ದೇಶಪಾಂಡೆ ನೇತೃತ್ವ ನಾಡಿದ್ದು ಹುಬ್ಬಳ್ಳಿಯಲ್ಲಿ ಪ್ರಥಮ ಸಭೆ;   ಟಿಕೆಟ್‌ಗಾಗಿ ಪ್ಯಾಪಕ ಪೈಪೋಟಿ

ಪಾಲಿಕೆ ಕೈವಶಕ್ಕೆ ಸ್ಕೆಚ್; ದೇಶಪಾಂಡೆ ನೇತೃತ್ವ ನಾಡಿದ್ದು ಹುಬ್ಬಳ್ಳಿಯಲ್ಲಿ ಪ್ರಥಮ ಸಭೆ; ಟಿಕೆಟ್‌ಗಾಗಿ ಪ್ಯಾಪಕ ಪೈಪೋಟಿ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಕಳೆದೆರಡು ಅವಧಿ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಪಡೆಯಲೇ ಬೇಕೇಂಬ ತೀರ್ಮಾನಕ್ಕೆ ಬಂದಿದ್ದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಪ್ರತ್ಯೇಕ ಚುನಾವಣಾ ಸಮಿತಿ ರಚಿಸಿದೆ. ಮಾಜಿ ಸಚಿವರಾದ ತನ್ವೀರ ಸೇಠ, ಶಿವಾನಂದ ಪಾಟೀಲ ಈ ಸಮಿತಿಯಲ್ಲಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಆರ್.ಧ್ರುವನಾರಾಯಣ ಸಂಚಾಲಕರಾಗಿದ್ದಾರೆ.
ಈಗಾಗಲೇ ಕಾಂಗ್ರೆಸ್ ಆಕಾಂಕ್ಷಿಗಳಿ0ದ ಅರ್ಜಿ ಆಹ್ವಾನಿಸಿದ್ದು ಮೊದಲ ದಿನವೇ ೨೦೦ಕ್ಕೂ ಹೆಚ್ಚು ಜನ ಆಕಾಂಕ್ಷಿಗಳು ಅರ್ಜಿ ಪಡೆದಿದ್ದು ದಿ. 16ರಂದು ಮೊದಲ ಚುನಾವಣಾ ಸಮಿತಿ ಸಭೆ ಹುಬ್ಬಳ್ಳಿಯಲ್ಲೇ ನಡೆಯಲಿದೆ.ಅಂದಿನ ಸಭೆಯಲ್ಲಿ 2008ರಲ್ಲಿ ಆಯ್ಕೆಯಾದ,ಪರಾಭವಗೊಂಡ ಪಾಲಿಕೆ ಹುರಿಯಾಳುಗಳು, ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಇನ್ನೂ ಸ್ಥಳ ಅಂತಿಮಗೊಳ್ಳಬೇಕಿದೆ ಎಂದು ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದ್ದಾರೆ.
ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ದಿ.23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ದಿ.೨೨ರೊಳಗೆ ಎಲ್ಲ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಅನಿವಾರ್ಯತೆಯಿದೆ.
ಪಶ್ಚಿಮ, ಪೂರ್ವ, ಸೆಂಟ್ರಲ್ ಹಾಗೂ ಧಾರವಾಡ ವ್ಯಾಪ್ತಿಯ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲ ವಾರ್ಡಗಳಲ್ಲಂತೂ ಅರ್ಧ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.ಅಲ್ಲದೇ ಟಿಕೆಟ್ ನಿರಾಕರಿಸಿದರೆ ಬೇರೆ ಪಕ್ಷದ ಅಲ್ಲದೇ ಸ್ವತಂತ್ರ ಅಭ್ಯರ್ಥಿಯಾಗುವ ಬೆದರಿಕೆ ತಂತ್ರಕ್ಕೆ ಕೆಲವರು ಮೊರೆ ಹೋಗಬಹುದಾದರೂ ಈ ಬಾರಿ ಮತದಾನದ ದಿನಾಂಕ ಸಮೀಪದಲ್ಲೇ ಇರುವುದರಿಂದ ಆ ಸಾಧ್ಯತೆ ಸ್ವಲ್ಪ ಕಡಿಮೆಯಾಗಬಹುದಾಗಿದೆ.
ಬಣ ರಾಜಕೀಯವಾದಲ್ಲಿ ಅದರ ಲಾಭ ಬಿಜೆಪಿ ಪಡೆಯುವುದು ಎಂಬ ಮುಂದಾಲೋಚನೆಯಿAದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿಪಕ್ಷನಾಯಕ ಸಿದ್ದರಾಮಯ್ಯ ಅವರು ಜತೆಯಾಗಿ ಚುನಾವಣಾ ಸಮಿತಿ ನೇಮಿಸಿದ್ದು ಯಾವುದೇ ಗೊಂದಲವಾಗದೇ ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಲು ತೀರ್ಮಾನಿಸಿದ್ದು, ಅವಳಿ ನಗರದ ಇಂಚಿ0ಚೂ ಮಾಹಿತಿಯಿರುವ ಅಲ್ಲದೇ ಎಲ್ಲರನ್ನೂ ಒಟ್ಟಿಗೆ ಒಯ್ಯಬಲ್ಲ ಸಾಮರ್ಥ್ಯವಿರುವ ಹಿರಿಯ ಮುಖಂಡ ನೆರೆಯ ಜಿಲ್ಲೆಯವರಾದ ದೇಶಪಾಂಡೆಯವರಿಗೆ ಹಿರಿತನ ನೀಡಲಾಗಿದೆ.
ಸೆಂಟ್ರಲ್,ಪಶ್ಚಿಮ ಹಾಗೂ ಪೂರ್ವ ಕ್ಷೇತ್ರಗಳಲ್ಲಿ ಈಗಾಗಲೇ ಒಂದು ಸುತ್ತಿನ ಆರಂಭಿಕ ಹಂತದ ಪೂರ್ವಭಾವಿ ಸಭೆಗಳಾಗಿದ್ದು, ಸೋಮವಾರದ ನಂತರ ಅಖಾಡಾ ರಂಗೇರಲಿದೆ. ಪೂರ್ವ ಕ್ಷೇತ್ರದಲ್ಲಿ 18 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುವದು ಸ್ವತಃ ಶಾಸಕರಿಗೂ ಟಿಕೆಟ್ ಹಂಚಿಕೆ ಸವಾಲಾಗಿ ಪರಿಣಮಿಸಿದೆ ಅಲ್ಲದೇ ೭೧ನೇ ವಾರ್ಡನಲ್ಲಿ ಅನೇಕ ಘಟಾನುಘಟಿಗಳ ಜತೆ ಸುಮಾರು 71ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ನಾಡಿದ್ದು ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆರ್.ವಿ.ದೇಶಪಾಂಡೆ ನೇತೃತ್ವದ ಚುನಾವಣಾ ಸಮಿತಿಯ ಮೊದಲ ಸಭೆ ನಡೆಯಲಿದ್ದು ಇನ್ನೂ ಸ್ಥಳ ಅಂತಿಮಗೊ0ಡಿಲ್ಲ.

ಅಲ್ತಾಫ್ ಹಳ್ಳೂರ
ಮಹಾನಗರ ಅಧ್ಯಕ್ಷ
administrator

Related Articles

Leave a Reply

Your email address will not be published. Required fields are marked *