ಹುಬ್ಬಳ್ಳಿ-ಧಾರವಾಡ ಸುದ್ದಿ
ಪಾಲಿಕೆಗೆ ಬಲಗಾಲಿಟ್ಟ ದಾನಪ್ಪ ಕಬ್ಬೇರ ಪುತ್ರಿ

ಪಾಲಿಕೆಗೆ ಬಲಗಾಲಿಟ್ಟ ದಾನಪ್ಪ ಕಬ್ಬೇರ ಪುತ್ರಿ

ಧಾರವಾಡ: ಹು-ಧಾ ಮಹಾನಗರ ಪಾಲಿಕೆಯ ಸಭ್ಯ ಮೇಯರ್ ಹಾಗೂ ಜನಾನುರಾಗಿ ಹುಡಾ ಅಧ್ಯಕ್ಷ ಎಂಬ ಹಿರಿಮೆ ಹೊಂದಿರುವ ದಾನಪ್ಪ ಕಬ್ಬೇರ್ ಪುತ್ರಿ ಪ್ರಸಕ್ತ ಚುನಾವಣೆಯಲ್ಲಿ 20 ನೇ ವಾರ್ಡಿನಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಕವಿತಾ ಕಬ್ಬೇರ ಜನಾಶೀರ್ವಾದ ಪಡೆದು ಪಾಲಿಕೆ ಬಲಗಾಲಿಟ್ಟಿದ್ದಾರೆ.


ಪ.ಜಾ. ಮಹಿಳೆಗೆ ಮೀಸಲಿದ್ದ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕವಿತಾ ದಾನಪ್ಪ ಕಬ್ಬೇರ 3183 ಮತಗಳನ್ನು ಪಡೆದು, ಸಮೀಪದ ಬಿಜೆಪಿ ಅಭ್ಯರ್ಥಿ ಗೀತಾ ಪಾಟೀಲರಗಿಂತ 679 ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಶ್ರೀರಾಮನಗರ, ತೇಜಸ್ವಿನಗರ, ದಾನು ನಗರ, ಸಂಗೊಳ್ಳಿ ರಾಯಣ್ಣ ನಗರ, ನುಗ್ಗಿಕೇರಿ, ಪುರೋಹಿತನಗರ ಇನ್ನಿತರ ಪ್ರಮುಖ ಬಡಾವಣೆಗಳಲ್ಲಿಯೂ ಮತ ಗಿಟ್ಟಿಸಿಕೊಂಡ ಕವಿತಾ ಅವರು, ಅಂತಿಮವಾಗಿ ವಿಜಯ ಮಾಲೆ ಧರಿಸಿದ್ದಾರೆ.
ಮಾಜಿ ಮೇಯರ ದಾನಪ್ಪ ಕಬ್ಬೇರ ಅವರ ಪುತ್ರಿಯದ ಕವಿತಾ ಅವರು, ತಂದೆಯAತೆ ವಾರ್ಡಿನಾದ್ಯಂತ ಜನರ ಸಂಪರ್ಕ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್‌ನ ಭದ್ರ ಕೋಟೆಯಂತಿರುವ ಈ ವಾರ್ಡ್ ಪುನರ್ವಿಂಗಡನೆ ಬಳಿಕವೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದೆ.
ಸಮರ್ಪಕ ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಈ ಪ್ರದೇಶದಲ್ಲಿ ಕವಿತಾ ಕಾಂಗ್ರೆಸ್ ಪಕ್ಷದ ಮುಖಂಡರ ಪ್ರಯತ್ನ ಮತ್ತು ತಂದೆಯ ನಾಮಬಲದಿಂದ ಜಯ ಸಾಧಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *