ಹುಬ್ಬಳ್ಳಿ-ಧಾರವಾಡ ಸುದ್ದಿ

ಬಡಜನರ ಕಷ್ಟಕ್ಕೆ ಮಿಡಿವ ಜಿತೇಂದ್ರಬಾಯಿ;

ಮಜೇಥಿಯಾ ಫೌಂಡೇಶನ್‌ನಿಂದ ಅರ್ಥಪೂರ್ಣ ವಾರ್ಷಿಕೋತ್ಸವ

ಹುಬ್ಬಳ್ಳಿ: ಸಮಾಜ ಸೇವೆಯಲ್ಲಿ ಅಂಬೆಗಾಲನಿಕ್ಕುತ್ತಾ ಒಂದೂವರೆ ದಶಕದ ಸಾರ್ಥಕ ಪಯಣದತ್ತ ಮುನ್ನಡೆದಿರುವ ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್‌ನ ೧೩ನೇ ವಾರ್ಷಿಕೋತ್ಸವ ಕಾರ್ಯಕ್ರಮ ಬುಧವಾರ ಸಾಯಂಕಾಲ ಇಲ್ಲಿನ ಗುಜರಾತ ಭವನದಲ್ಲಿ ಅಕ್ಷರಶಃ ಅರ್ಥಪೂರ್ಣವಾಗಿ ನಡೆಯಿತು.
ಮಾತನಾಡಿದ ಗಣ್ಯರು, ಫೌಂಡೇಶನ್‌ನ ಸೇವಾ ಕಾರ್ಯಗಳ ಬಗೆಗೆ ಗುಣಗಾನ ಮಾಡಿದರಲ್ಲದೇ, ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.


ಫೌಂಡೇಶನ್ ಕಾರ್ಯಗಳಲ್ಲಿ ಕೈಜೋಡಿಸಿ, ಮೈಲುಗಲ್ಲಿಗೆ ಕಾರಣರಾದ ಕನ್ಹಯ್ಯಾಲಾಲ್ ಠಕ್ಕರ್, ಡಾ.ಜಿ.ಬಿ.ಸತ್ತೂರ, ಸುಭಾಸಸಿಂಗ್ ಜಮಾದಾರ, ಮುಂಜುನಾಥ ಭಟ್ಟ, ಅಮರೇಶ ಹಿಪ್ಪರಗಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜಿ.ಬಿ.ಸತ್ತೂರ, ಜಮಾದಾರ,ಹಿಪ್ಪರಗಿ ಮಾತನಾಡಿ ನೊಂದ ಕುಟುಂಬಗಳಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿದೆ ಎಂದರಲ್ಲದೇ ಅವರೊಡಗಿನ ಒಡನಾಟದ ಅನೇಕ ಘಟನೆಗಳನ್ನು ಮೆಲುಕು ಹಾಕಿದರು.
ಮುಂಬೈನಿಂದ ಮನವೊಲಿಸಿ ಕರೆದುಕೊಂಡು ಬಂದು ಹುಬ್ಬಳ್ಳಿಯಲ್ಲಿ ಉದ್ಯಮ ಆರಂಭಿಸಲು ಜಿತೇಂದ್ರ ಅವರಿಗೆ ಪ್ರೇರಣೆ ನೀಡಿದೆ. ಅವರು ಇದೀಗ ಈ ಎತ್ತರಕ್ಕೆ ಬೆಳೆದಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಕನ್ಹಯ್ಯಾಲಾಲ್ ಠಕ್ಕರ್ ಹೇಳಿದರು.
ಈ ಸಂದರ್ಭದಲ್ಲಿ ಮಜೇಥಿಯಾ ಫೌಂಡೇಶನ್ ಕಳೆದ ೧೩ವರ್ಷಗಳಿಂದ ಕೈಗೊಂಡ ಸಾಮಾಜಿಕ ಸೇವೆಗಳ ಕಿರು ಪರಿಚಯ ಇರುವ ಕೈಪಿಡಿ ಬಿಡುಗಡೆ ಮಾಡಲಾಯಿತು.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಫೌಂಡೇಶನ್ ಅಧ್ಯಕ್ಷೆ ನಂದಿಸಿ ಕಶ್ಯಪ್, ಕಶ್ಯಪ್ ಮಜೇಥೀಯಾ,ಟ್ರಸ್ಟಿ ಡಾ.ರಮೇಶ ಬಾಬು, ಡಾ.ಬಿ.ಆರ್.ಪಾಟೀಲ, ಪ್ರಹ್ಲಾದರಾವ್, ನರೇಶ ಭಾಪಟ, ದಯಾ ಭಾಯ್, ಶ್ರೀಧರ ನಾಡಗೇರ ಮೊದಲಾದವರು ಇದ್ದರು. ಅರುಣ ದೇಸಾಯಿ ಹಾಗೂ ತಂಡದವರು ಗಾಯನ ಪ್ರಸ್ತುತ ಪಡಿಸಿದರು. ತರಣ್ ಮಜೇಥಿಯಾ ಪ್ರಾರ್ಥನೆ ಹಾಡಿದರು. ಡಾ.ವಿ.ಬಿ.ನಿಟಾಲಿ ವಂದಿಸಿದರು.
ಬಾಕ್ಸ
ಪ್ರತಿಷ್ಠಾನದ ಬೆನ್ನೆಲುಬಾದ ಜಿತೇಂದ್ರ ಮಜೇಥಿಯಾ ತಮ್ಮ ಸಂಸ್ಥೆಯ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರಲ್ಲದೇ ಉ.ಕ.ದ ಹಿರಿಮೆಯ ಆಸ್ಪತ್ರೆಯ ಕಿಮ್ಸ್ ಕೇವಲ ಬಡವರ ಆಸ್ಪತ್ರೆಯಲ್ಲ.ಅದು ರೋಗಿಗಳ ಪಾಲಿನ ದೇವಾಲಯ ಎಂದು ಬಣ್ಣಿಸಿದರು

ವಾರಿಯರ್ಸಗೆ ಅಭಿಮಾನದ ಸಮ್ಮಾನ

MAJETIYA

ಕಾರ್ಯಕ್ರಮದಲ್ಲಿ ಕೊರೊನಾ ಸೇನಾನಿಗಳಾಗಿರುವ ವೈದ್ಯರಾದ ಡಾ. ಎಸ್.ವೈ. ಮುಲ್ಕಿಪಾಟೀಲ, ಡಾ. ರಾಮ ಕೌಲಗುಡ್, ಡಾ. ಧರ್ಮೆಂದ್ರ ಲದ್ದಡ, ಡಾ. ವಿಕಾಸ ಜೋಶಿ, ಡಾ. ಮುತ್ತಣ್ಣ ರಂಜಣಗಿ, ಡಾ. ಫರ್‍ಹೀನ್ ಗಾಂಜೇವಾಲೆ, ದಾದಿಯರಾದ ಸುಜಾತಾ ಜಾಪಣ್ಣವರ, ಪ್ರದೀಪ ಕಾಳೆ, ಮುಂಚೂಣಿ ಕಾರ್ಯಕರ್ತರಾದ ಪರಶುರಾಮ ಮಲ್ಯಾಳ, ಸೋಮಶೇಖರ ಕಮಡೊಳ್ಳಿ, ಜ್ಯೋತಿಶ್ರಿ ಜಮ್ಮಲದಿನ್ನಿ, ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಿದ ಅಣ್ಣಪ್ಪ ಬಾಗಲಕೋಟಿ, ಸಂತೋಷ ಪೂಜಾರ ಇವರುಗಳನ್ನು ಸನ್ಮಾನಿಸಲಾಯಿತು.

administrator

Related Articles

Leave a Reply

Your email address will not be published. Required fields are marked *