ಹುಬ್ಬಳ್ಳಿ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ವಿದ್ಯುತ್ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೂಡಲೇ ತಡೆಗಟ್ಟುವಂತೆ ಆಗ್ರಹಿಸಿ ಎಐಟಿಯುಸಿ ಧಾರವಾಡ ಜಿಲ್ಲಾ ಸಮಿತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಕೋವಿಡ್ ೨ನೇ ಅಲೆಗೆ ಸರಿಯಾಗಿ ಕ್ರಮ ಕೈಗೊಳ್ಳದ ಸರ್ಕಾರ ಇನ್ನು ೩ನೇ ಅಲೆಯ ಭೀಕರತೆಗೆ ಕ್ರಮಕೈಗೊಳ್ಳುವಲ್ಲಿ ಎಡವಿದರೆ ಅನಾಹುತ ತಪ್ಪಿದ್ದಲ್ಲ. ಕಚ್ಚಾಟ ಬಿಟ್ಟು ದರಗಳ ನಿಯಂತ್ರಣ ಮಾಡಿ ಸಾಮಾನ್ಯ ಜನರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಕೇರಳ, ತಮಿಳನಾಡು, ಆಂಧ್ರಪ್ರದೇಶ ರಾಜ್ಯಗಳಂತೆ ಪರಿಹಾರಗಳನ್ನು ನೀಡಿ ಜನರನ್ನು ರಕ್ಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಮಿತಿಯ ಬಿ.ಎ. ಮುಧೋಳ, ಎ.ಎಸ್. ಪಿರಜಾದೆ, ಬಾಬಾಜಾನ ಮುಧೋಳ, ದೇವಾನಂದ ಜಗಾಪೂರ, ರಮೇಶ ಭೋಸ್ಲೆ, ಗೀತಾ ಕಟಗಿ, ಬಸಮ್ಮಾ ಇಚ್ಚಂಗಿ, ಬಶೀರ ಮುಲ್ಲಾ, ಎಂ.ಎಚ್. ಮುಲ್ಲಾ, ಎನ್.ಐ. ನದಾಫ, ಸಾಜೀದ ಹಾಲಬಾವಿ, ಶೋಭಾ ಹಡಪದ ಸೇರಿದಂತೆ ಇತರರಿದ್ದರು.