ಹುಬ್ಬಳ್ಳಿ: ನಗರದ ವಾರ್ಡ್ ನಂ. ೪೦ ರ ಜಗದೀಶ್ ನಗರದಲ್ಲಿನ ನಾಲಾ ಬಳಿ ಕಸ ವಿಲೇವಾರಿ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು, ಮೃತಪಟ್ಟ ಇಲ್ಲಿನ ಹೆಗ್ಗೇರಿಯ ನಿವಾಸಿ ಗೂಳಪ್ಪ ಕಟ್ಟಿಮನಿ ಅವರ ಮನೆಗೆ ಸಮಾಜ ಸೇವಕ ಸಂತೋಷ ಆರ್. ಶೆಟ್ಟಿ ಅವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೃತ ಗೂಳಪ್ಪ ಪತ್ನಿ ರೇಣುಕಾ ಹಾಗೂ ಪುತ್ರ ರವಿಯವರಿಗೆ ಒಂದು ತಿಂಗಳಿಗಾಗುವಷ್ಟು ಪಡಿತರ ದಿನಸಿ ಕಿಟ್ ಹಾಗೂ ಆರ್ಥಿಕ ಧನ ಸಹಾಯ ನೀಡಿ ಧೈರ್ಯ ತುಂಬಿದರಲ್ಲದೇ ಮುಂದೆಯೂ ಸಹಾಯ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಂಜುನಾಥ ಬ್ಯಾಡಗಿ, ಮಂಜಣ್ಣ ಬಗಾಡೆ ,ಬಸವಾ ಕಟ್ಟೀಮನಿ, ಮೃತ ಗೂಳಪ್ಪ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.