ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಮೇಯರ್ ಸ್ಥಾನ ಅಲಂಕರಿಸುವ ಹುದ್ದೆ ಹಾದಿಯಲ್ಲಿ ಮುಂಚೂಣಿಯಲ್ಲಿದ್ದು ಈಗಾಗಲೇ ಇದಕ್ಕೆ ಕಸರತ್ತು ಆರಂಭಗೊ0ಡಿದೆ.
ಮೇಯರ್ ಮೀಸಲಾತಿ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದು ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು ಆ ಹಿನ್ನೆಲೆಯಲ್ಲಿ ಭಾರಿ ಚರ್ಚೆ ಆರಂಭಗೊAಡಿದೆ.
ಮೇಯರ್ ರೇಸ್‌ನಲ್ಲಿ ಹಿರಿತನಕ್ಕೆ ಮಣೆ ಹಾಕುವುದು ಖಚಿತವಾಗಿದ್ದು ಧಾರವಾಡದ ಈರೇಶ ಅಂಚಟಗೇರಿ, ರಾಮಣ್ಣ ಬಡಿಗೇರ, ಸತೀಶ ಹಾನಗಲ್, ಹುಬ್ಬಳ್ಳಿಯ ತಿಪ್ಪಣ್ಣ ಮಜ್ಜಗಿ ಇವರಲ್ಲೊಬ್ಬರು ಅಲಂಕರಿಸುವುದು ಎಂಬ ಮಾತುಗಳು ಕಮಲ ಪಾಳೆಯದಲ್ಲಿ ಕೇಳಿ ಬರಲಾರಂಬಿಸಿದೆ.
ಅAಚಟಗೇರಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿಕಟವರ್ತಿಯಾಗಿದ್ದು,ಎರಡನೇ ಬಾರಿಗೆ ಉತ್ತಮ ಅಂತರದಿAದ ಆಯ್ಕೆಯಾಗಿದ್ದು,ಎಲ್ಲ ಮುಖಂಡರ ಜತೆಯೂ ನಿಕಟ ಸಂಬAಧ ಹೊಂದಿದ್ದು ಅವರು ರೇಸ್‌ನಲ್ಲಿ ಮುಂದಿದ್ದಾರೆAಬ ಮಾತುಗಳು ಕೇಳಿ ಬರುತ್ತಿವೆ.
ಜಗದೀಶ ಶೆಟ್ಟರ್ ಆಪ್ತರಾಗಿರುವ ತಿಪ್ಪಣ್ಣ ಮಜ್ಜಗಿ ಸಹ ಮೇಯರ್ ರೇಸ್‌ನಲ್ಲಿದ್ದು ಇವರ ಪತ್ನಿ ಅಶ್ವಿನಿ ಮಜ್ಜಗಿ ಸಹ ಒಮ್ಮೆ ಮೇಯರ್ ಆದವರಾಗಿದ್ದಾರೆ.
ರಾಮಣ್ಣ ಬಡಿಗೇರ ಮತ್ತು ಸತೀಶ ಹಾನಗಲ್ ಇಬ್ಬರೂ ಮೂರನೇ ಬಾರಿ ಆಯ್ಕೆಯಾದವರಾಗಿದ್ದು ಅರವಿಂದ ಬೆಲ್ಲದ ಕೃಪಾಕಟಾಕ್ಷವಿದೆ.
2013 -2018ರ ಅವಧಿಯ ಅಂತಿಮ ಮೇಯರ್ ಸುಧೀರ ಸರಾಫ್ ಆಗಿದ್ದು ಹುಬ್ಬಳ್ಳಿಗೆ ಮೇಯರ್ ಸ್ಥಾನ ದಕ್ಕಿತ್ತು.ಈ ಬಾರಿ ಧಾರವಾಡಕ್ಕೆ ದಕ್ಕುವುದೆಂಬ ಲೆಕ್ಕಾಚಾರವಿದ್ದು ಇದೂ ಸಹ ಅಂಚಟಗೇರಿಯವರಿಗೆ ವರವಾಗುವ ಸಾಧ್ಯತೆ ಇದೆ. ಸುರೇಶ ಬೇದರೆ, ಸಂತೋಷ ಚವ್ಹಾಣ ಸಹಿತ ಅನೇಕರು ಒಬಿಸಿ ಎದಿಂದ ಆಯ್ಕೆಯಾಗಿದ್ದರೂ ಮೊದಲ ಬಾರಿ ಎಂಬುದು ಅವರಿಗೆ ಕಷ್ಟವಾಗಲಿದೆ.
ಕಮಲ ಪಾಳೆಯದಲ್ಲಿ ಅನೇಕರು ಮೇಯರ್ ರೇಸ್‌ನಲ್ಲಿದ್ದರೂ ಉಪಮೇಯರ್ ಸ್ಥಾನಕ್ಕೆ ಬಂಡಾಯಗಾರರ ಮನವೊಲಿಸುವ ಪ್ರಮೇಯ ಬಂದಿದೆ.
ಎಸ್ ಸಿ ಮಹಿಳಾ ಕ್ಷೇತ್ರದಿಂದ ಆಯ್ಕೆಯಾದ ಯಾರೊಬ್ಬರೂ ಇಲ್ಲವಾಗಿದ್ದು ಹಾಗಾಗಿ ಪಕ್ಷೇತರರೊಬ್ಬರಿಗೆ ಜಾಕ್ ಪಾಟ್ ನಿಶ್ಚಿತ ಎನ್ನಲಾಗಿದೆ.
56ನೇ ವಾರ್ಡಿನಿಂದ ಗೆಲುವು ಸಾಧಿಸಿರುವ ಮಾಜಿ ಮೇಯರ್ ವೆಂಕಟೇಶ ಮೇಸ್ತಿç ಚಂದ್ರಿಕಾ ಮೇಸ್ತಿç ಹಾಗೂ 69ರ ಪಕ್ಷೇತರ ಅಭ್ಯರ್ಥಿ ಶಶಿಕಾಂತ ಬಿಜವಾಡ ಪತ್ನಿ ದುರ್ಗಮ್ಮ ಬಿಜವಾಡ ಇವರಲ್ಲೊಬ್ಬರಿಗೆ ಅದೃಷ್ಟ ಖುಲಾಯಿಸುವ ಲಕ್ಷಣಗಳಿವೆ.
ಮೇಸ್ತಿç ಈ ಹಿಂದೆ ಬಿಜೆಪಿಯಲ್ಲಿ ಮೇಯರ್ ಸ್ಥಾನ ಅಲಂಕರಿಸಿದವರಾಗಿದ್ದು, ತದನಂತರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದರು. ಈ ಬಾರಿ ಕೈ ಪಡೆ ಅವರಿಗೆ ಬಿ ಫಾರ್ಮ ನೀಡಿತ್ತಾದರೂ ಅಂತಿಮವಾಗಿ ಕೆಲ ಮುಖಂಡರು ಬೆಂಗಳೂರಲ್ಲಿ ಗೋಗರೆದ ಪರಿಣಾಮ ಅವರ ಬದಲು ಡಾ.ಆಮ್ರಪಾಲಿ ಜಕ್ಕಪ್ಪನವರ ಟಿಕೆಟ್ ದೊರಕಿತ್ತು. ತೀವ್ರ ಮುಜುಗರಗೊಂಡ ಮೇಸ್ತಿç ಪತ್ನಿ ಕಣಕ್ಕಿಳಿಸಿ ಅಭೂತ ಪೂರ್ವ ಜಯ ದಾಖಲಿಸಿದ್ದು ಕಾಂಗ್ರೆಸ್ ಈಗ ಪರಿಸ್ಥಿತಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅಲ್ಲದೇ ಮೇಸ್ತಿç ಪತ್ನಿ ಸ್ನಾತಕೋತ್ತರ ಪದವೀಧರೆಯೂ ಆಗಿದ್ದಾರೆ.
ಶಶಿ ಬಿಜವಾಡ ಸಹ 69ರಲ್ಲಿ ಪತ್ನಿ ಕಣಕ್ಕಿಳಿಸಲು ಉದ್ದೇಶಿಸಿದ್ದರೂ ಬಿಜೆಪಿ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಬಂಡಾಯದ ಸೆಡ್ಡು ಹೊಡೆದಿದ್ದರು.ಅಲ್ಲದೇ ಎಲ್ಲ ಸಮುದಾಯ ಸಂಘಟಿಸಿ ಗೆಲುವು ಸಾಧಿಸಿದ್ದಾರೆ.
ಹಾಗಾಗಿ ಈ ಇಬ್ಬರಲ್ಲಿ ಒಬ್ಬರಿಗೆ ಉಪಮೇಯರ್ ಗ್ಯಾರಂಟಿ ಎನ್ನಲಾಗುತ್ತಿದೆ.ಈಗಾಗಲೇ ಬಿಜೆಪಿ ಇವರನ್ನು ಸೆಳೆದುಕೊಳ್ಳಲು ಯತ್ನ ನಡೆಸಿದೆ ಎನ್ನಲಾಗುತ್ತಿದೆ.
ಕಳೆದ ಬಾರಿಯೂ ಕೆಜೆಪಿಯಿಂದ ಗೆದ್ದಿದ್ದ ಲಕ್ಷಿö್ಮಬಾಯಿ ಬಿಜವಾಡ ಸಹ ಬಿಜೆಪಿ ಸೇರ್ಪಡೆಯಾಗಿ ಉಪ ಮೇಯರ್ ಆಗಿದ್ದರು ಎಂಬುದನ್ನು ಸ್ಮರಿಸಬಹುದು.
ಬಿಜೆಪಿಯೇ ಪಾಲಿಕೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಗದ್ದುಗೆ ಹಿಡಿಯಲಿದೆ. ಈಗಾಗಲೇ ಕೆಲವರನ್ನು ಸಂಪರ್ಕಿಸಲಾಗಿದ್ದು ಸಕಾರಾತ್ಮಕ ಸ್ಪಂದನೆ ದೊರಕಿದೆ.
ಈ ಇಬ್ಬರೂ ಸದಸ್ಯರೂ ಕಾಂಗ್ರೆಸ್ ಜತೆ ಕೈ ಜೋಡಿಸಿದರೂ ಅವಿರೋಧವಾಗಿ ಇಬ್ಬರಲ್ಲೊಬ್ಬರು ಬಿಜೆಪಿಯಲ್ಲಿ ಸದಸ್ಯರಿಲ್ಲದಿರುವುದರಿಂದ ಉಪ ಮೇಯರ್ ಅಲಂಕರಿಸಬಹುದು.