ಹುಬ್ಬಳ್ಳಿ: ಸ್ವಚ್ಛ, ಸುಂದರ, ಆರೋಗ್ಯ ಪೂರ್ಣ ನಗರಕ್ಕೆ ದೃಢಸಂಕಲ್ಪ ಎಂಬ ಹುಬ್ಬಳ್ಳಿ-ಧಾರವಾಡ ಕನಸಿನ ಮಹಾನಗರದ 25 ಅಂಶಗಳ ನನಸಿನ ಪ್ರಣಾಳಿಕೆಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ.
ಡೆನಿಸನ್ಸ ಹೊಟೆಲ್ನಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ,ಅಮೃತ ದೇಸಾಯಿ, ಪ್ರದೀಪ ಶೆಟ್ಟರ್,ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ನಿರಂತರ ಕುಡಿವ ನೀರು ಯೋಜನೆ(24*7) ಎಲ್ಲ ವಾರ್ಡ್ಗಳಿಗೆ ವಿಸ್ತರಣೆ,
ನೀರಿನ ಕರದ ಮೇಲಿನ ದಂಡ ರೂಪದ ಹಣ ಸಂಪೂರ್ಣ ಮನ್ನಾ,
ಕಸಮುಕ್ತ ನಗರ ನಿರ್ಮಾಣಕ್ಕೆ ಸಂಕಲ್ಪ,
ಸುಗಮ ಪ್ರಯಾಣಕ್ಕಾಗಿ ಸಂಕಲ್ಪ,
ಜನಸ್ನೇಹಿ ಮಹಾನಗರ ಪಾಲಿಕೆಗೆ ಆದ್ಯತೆ,
ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಹೊಸ ಆರ್ಟಿಒ ಕಚೇರಿ,
ಸ್ಮಾರ್ಟ್ ಸಿಟಿಯ ಕಾರ್ಯಪ್ರಗತಿ,
ಕೆಲಗೇರಿ ಕೆರೆ ಅಭಿವೃದ್ಧಿ,
ಕನ್ನಡ ಭವನ ನಿರ್ಮಾಣ,
ನೃಪತುಂಗ ಬೆಟ್ಟ ಪ್ರವಾಸಿ ತಾಣವಾಗಿ ಪರಿವರ್ತನೆ
ಇಂದಿರಾ ಗ್ಲಾಸ್ಘೌಸ್ನಲ್ಲಿ ಮಕ್ಕಳ ರೈಲು ಕಾರ್ಯ ಪ್ರಗತಿ ಮುಂತಾದವುಗಳು ಪ್ರಣಾಳಿಕೆಯಲ್ಲಿವೆ.