ಹುಬ್ಬಳ್ಳಿ-ಧಾರವಾಡ ಸುದ್ದಿ

ಹು-ಧಾ ಪಾಲಿಕೆ ಚುನಾವಣೆ: ಹಕ್ಕು ಚಲಾಯಿಸಿದವರು

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಿಮಿತ್ತ ಹುಬ್ಬಳ್ಳಿ ವಾರ್ಡ್ 43 ವಿನಾಯಕ ಕಾಲೋನಿಯ ದೇವಕಿ ಇಂಗ್ಲೀಷ್ ಮಾಧ್ಯಮ ಶಾಲೆಯ ಬೂತ್ ನಂಬರ್ 13 ರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್ ಹಾಗೂ ಅವರ ಪತ್ನಿ ಶಿಲ್ಪಾ ಶೆಟ್ಟರ್ ಮತದಾನ ಮಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹುಬ್ಬಳ್ಳಿ ನಾಗಶೆಟ್ಟಿಕೊಪ್ಪ ವಿವೇಕಾನಂದ ಕಾಲೋನಿಯ ರೋಟರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಉತ್ತರ ಭಾಗ ಕೋಣೆ ನಂ. 111, ಬೂತ್ -3 ರಲ್ಲಿ ಮತ ಚಲಾಯಿಸಿದರು.

 

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿ ಲ್ಯಾಮಿಂಗ್ಟನ್ ಬಾಲಕರ ಪ್ರೌಢಶಾಲೆಯಲ್ಲಿ ಮತ ಚಲಾಯಿಸಿದರು

 

ವಾರ್ಡ್ 40ರ ಸಂತೋಷ ನಗರದ ಸ.ಹಿ.ಪ್ರಾ. ಶಾಲೆಯ ಬೂತ್ ನಂಬರ್ 1ರಲ್ಲಿ ಶಾಸಕ ಅಬ್ಬಯ್ಯ ಪ್ರಸಾದ, ತಾಯಿ ಧನಲಕ್ಷ್ಮೀ ಹಾಗೂ ಪತ್ನಿ ವೃಂದಾ ಅವರೊಂದಿಗೆ ಮತದಾನ ಮಾಡಿದರು.

 

ಧಾರವಾಡದ ಮರಾಠಾ ಕಾಲನಿ ರಸ್ತೆಯಲ್ಲಿರುವ ಬುದ್ಧ ರಕ್ಕಿಥ ಶಾಲೆಯಲ್ಲಿ ಶಾಸಕ ಅರವಿಂದ ಬೆಲ್ಲದ ತಮ್ಮ ತಂದೆ ಚಂದ್ರಕಾಂತ ಬೆಲ್ಲದ ಮತ್ತು ತಾಯಿ ಲೀಲಾವತಿಯವರೊಂದಿಗೆ ಮತದಾನ ಮಾಡಿದರು.

 

ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅವರು ಕುಟುಂಬದೊ0ದಿಗೆ ಬಂದು ಮತ ಚಲಾಯಿಸಿದರು

 

ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಮತ್ತು ಕಾಂಗ್ರೆಸ್ ಮುಖಂಡ ಶಾಕೀರ್ ಸನದಿ ಅವರು ಇತರ ಸದಸ್ಯರೊಂದಿಗೆ ವಾರ್ಡ್ ಸಂಖ್ಯೆ. 41ರ ಹುಬ್ಬಳ್ಳಿ ವಿಜಯನಗರದ ಸಿಟಿ ಪ್ರೌಢಶಾಲೆಯ ಬೂತ್ ಸಂಖ್ಯೆ 1 ರಲ್ಲಿ ಮತ ಚಲಾಯಿಸಿದರು.

 

ಧಾರವಾಡದ 6ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ದಿಲ್‌ಶಾದ್‌ಬೇಗಂ ಅ. ನದಾಫ ಕುಟುಂಬದವರೊಂದಿಗೆ ಮತ ಚಲಾಯಿಸಿದರು.

 

ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮತ ಚಲಾಯಿಸಿದರು

 

ವಾರ್ಡ ನಂ 70ರ ಗಾರ್ಡನ್ ಪೇಟೆಯಲ್ಲಿರುವ ಬೂತ್ ನಂ 5 ಎಚ್ ಡಿ ಎಂಸಿ ಸಮುದಾಯ ಭವನದಲ್ಲಿ ಮಾಜಿ ಸಚಿವ ಎ.ಎಂ.ಹಿAಡಸಗೇರಿ ಮತದಾನ ಮಾಡಿದರು.

 

ಧಾರವಾಡದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದರು.

 

ಧಾರವಾಡದ ಮರಾಠಾ ಕಾಲನಿ ರಸ್ತೆಯಲ್ಲಿರುವ ಬುದ್ಧ ರಕ್ಕಿಥ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿಯವರು ಪತ್ನಿ ರಾಜೇಶ್ವರಿ ಜೊತೆ ಮತಚಲಾಯಿಸಿದರು.

 

ಧಾರವಾಡದ ವಾರ್ಡ್ ನಂಬರ್ 3 ರ ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ ಅವರು ಕುಟುಂಬ ಸಮೇತ ಮತದಾನ ಮಾಡಿದರು.

 

ಧಾರವಾಡದ 3ನೇ ವಾರ್ಡ್ನಲ್ಲಿ ಮೊದಲು ಮತ ಚಲಾಯಿಸಿದ ಕಿರಣ ಹಾವಣಗಿ ದಂಪತಿ.

 

ಹುಬ್ಬಳ್ಳಿಯ ವಾರ್ಡ್ 52ರಲ್ಲಿ ಪಕ್ಷೇತರ ಅಭ್ಯರ್ಥಿ ಸಂತೋಷ ಆರ್. ಶೆಟ್ಟಿ ಅವರು ಪತ್ನಿ ಪ್ರಿಯಾ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು

 

ವಾರ್ಡ-32 ರ ಗಾಂಧಿನಗರ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂ. 7 ರಲ್ಲಿ ಆಪ್ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಪತ್ನಿ ರೂಪಾಲಿಯವರೊಡನೆ ತಮ್ಮ ಹಕ್ಕು ಚಲಾಯಿಸಿದರು.

 

ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ 24 ನೇ ವಾರ್ಡಿನ ನವಲೂರಿನ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಮಯೂರ ಮೋರೆ ಮತ ಚಲಾಯಿಸಿದರು.

 

ಕಾರ್ಪೋರೇಶನ್ ಚುನಾವಣೆ ಪವನ್ ಶಾಲೆಯಲಿ ಇಂದು ಮತದಾನ ಮಾಡಿದ ಜೋಶಿ ಕುಟುಂಬ

 

ವಾರ್ಡ ನಂ 36ರ ಬಿಜೆಪಿ ಅಭ್ಯರ್ಥಿ ರಾಜಣ್ಣ ಕೊರವಿ ಕುಟುಂಬದ ಸದಸ್ಯರೊಂದಿಗೆ ತಮ್ಮ ಹಕ್ಕು ಚಲಾಯಿಸಿದರು.

 

ಪಶ್ಚಿಮ ಕ್ಷೇತ್ರದ ವಾರ್ಡ ನಂ 30 ರಲ್ಲಿ ಬೆನಕ ವಿದ್ಯಾ ಮಂದಿರದ ಬೂತ್ ನಲ್ಲಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನವೀದ್ ಮುಲ್ಲಾ ಮತ ಚಲಾಯಿಸಿದರು.

 

ಪಾಲಿಕೆ ಚುನಾವಣೆ ಅಂಗವಾಗಿ 34ರ ಭಾಜಪ ಅಭ್ಯರ್ಥಿಯಾದ ಅಕ್ಷತಾ ರವಿಕುಮಾರ್ ರೂಗಿ ಹಾಗೂ ಹುಚ್ಚಪ್ಪ ರೂಗಿ ಕುಟುಂಬದ ಸದಸ್ಯರು ಹಕ್ಕು ಚಲಾಯಿಸಿದರು.

 

50ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಮಂಜುಳಾ ಯಾತಗಿರಿ ಪತಿ ಗುರುನಾಥ ಯಾತಗೇರಿಯವರೊಂದಿಗೆ ಮತ ಚಲಾಯಿಸಿದರು.

 

ಹುಬ್ಬಳ್ಳಿ ವಾರ್ಡ ನಂ 82ರ ಹೊಸ ಗಬ್ಬೂರಿನ ಬೂತ್ ನಂ 209 ನಂ 5ನೇ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾ ಕೋಗೋಡ ಪತಿ ಹೊನ್ನಪ್ಪ ಕೋಗೋಡ ಅವರೊಂದಿಗೆ ಮತದಾನ ಮಾಡಿದರು. ಬಸವರಾಜ ಅಳಗ ವಾಡಿ, ಚನ್ನಪ್ಫ ಬಡ್ನಿ, ರವಿ ಸತ್ತೂರ, ಚನ್ನಪ್ಪ ಮಾಯಣ್ಣವರ, ಶಾಂತವ್ವ ಹರಿಜನ, ಮುಂತಾದವರು ಇದ್ದರು

 

72ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಖುರ್ಷಿದಾಬಾನು ಯಾದಗಿರಿ ಪತಿ ಶಫಿ ಯಾದಗಿರಿ ಹಾಗೂ ಕುಟುಂಬದ ಸದಸ್ಯರೊಂದಿಗೆ ತಮ್ಮ ಹಕ್ಕು ಚಲಾಯಿಸಿದರು.

 

ಧಾರವಾಡದಲ್ಲಿ ಉದ್ಯಮಿ ವಿಶ್ವನಾಥ ನಡಕಟ್ಟಿ ಅವರು ಪತ್ನಿ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು

 

 

 

 

administrator

Related Articles

Leave a Reply

Your email address will not be published. Required fields are marked *