ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಕಮನಹಳ್ಳಿ ಗ್ರಾಮದಲ್ಲಿ ಸುಮಾರು ೧೦ ಎಕರೆ ಅನಧಿಕೃತ ಲೇಔಟ ಗಳನ್ನು ಇಂದು ತೆರವುಗೊಳಿಸಲಾಯಿತು.
ಮಹ್ಮದ ಹೊಸಮನಿ, ನಜೀರ ಅಹ್ಮದ ಹಾಗೂ ಮೇನಕಾ ಆನಂದಕುಮಾರ ಇವರಿಗೆ ಸೇರಿದ ಅನಧೀಕ್ರತ ನಿವೇಶನಗಳಲ್ಲಿ ಇಂದು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಯಿತು.
ಸ್ವತಃ ಅಧ್ಯಕ್ಷ ನಾಗೇಶ ಕಲಬುರ್ಗಿಯವರ ಉಸ್ತುವಾರಿಯಲ್ಲಿ ನಡೆದ ತೆರವು ಕಾರ್ಯಾಚರಣೆ ನಡೆದಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ವಾರದ ಹಿಂದೆ ಕಾರ್ಯಾಚರಣೆ ಸಡೆಸಿದರೂ ಸಹ ಮತ್ತೆ ಪ್ಲಾಟ ಕಲ್ಲುಗಳನ್ನು ಹಾಕಿದ್ದಾರೆ.ಯಾವುದೇ ಕಾರಣಕ್ಕೂ ಪ್ರಾಧಿಕಾರದಿಂದ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಸಾಮಾನ್ಯವಾಗಿ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರ ಅನಧಿಕೃತ ವಿನ್ಯಾಸಗಳ ವಿರುದ್ಧ ಗುಡುಗಿ ಸುಮ್ಮನಾಗುತ್ತಿದ್ದರೂ ಹಾಲಿ ಅಧ್ಯಕ್ಷರಾದ ನಾಗೇಶ ಕಲಬುರ್ಗಿ ಇವುಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ.
ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ. ಸುನೀಲ ಮೊರೆ. ಆಯುಕ್ತ ಎನ್ ಹೆಚ್ ಕುಮ್ಮಣ್ಣನವರ. ನಗರ ಯೋಜಕ ಸದಸ್ಯರಾದ ವಿವೇಕ ಕಾರೇಕರ ಕಾರ್ಯನಿರ್ವಾಹಕ ಅಧಿಕಾರಿ ಎಂ ರಾಜಶೇಖರ್ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕೊಕ್ಕಳಕಿ. ಉಮೇಶ್ ಬೇವೂರ್. ಇಂಜಿನಿಯರಾದ ಬಸವರಾಜ ದೇವಗಿರಿ. ಮುಕುಂದ ಜೋಶಿ. ಬಡಿಗೇರ ಇದ್ದರು.