ಈಚೆಗಿನ ವರ್ಷಗಳಲ್ಲಿ ಅಲ್ಪವಾದರೂ ತಣ್ಣಗಿದ್ದ ಇಸ್ರೇಲ್ ಪ್ಯಾಲೇಸ್ಟೇನ್ ನಡುವಿನ ಅಗ್ನಿಪರ್ವತ ಸ್ಪೋಟಗೊಂಡಿದೆ.ನೆನ್ನೆ ತಡರಾತ್ರಿ ಪ್ಯಾಲೆಸ್ಟೇನ್ ಉಗ್ರ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ ಅವರೇ ಹೇಳಿ ಕೊಂಡಂತೆ ಸುಮಾರು 5000 ರಾಕೇಟ್‌ಗಳನ್ನು ಹಾರಿಸಿದ್ದಾರೆ. ಗಾಝಾದಿಂದ ಇಸ್ರೇಲಿ ಭೂಪ್ರದೇಶಕ್ಕೆ ಅನೇಕ ಉಗ್ರರು ನುಸುಳಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ವರದಿ ಮಾಡಿವೆ,.
ಗಾಜಾದಲ್ಲಿ ನಡೆಯುತ್ತಿರುವ ಈ ಘಟನೆಯಿಂದ ಸುಧಾರಿಸುತ್ತಿದ್ದ ಇಸ್ರೇಲ್-ಪ್ಯಾಲೆಸ್ಟೈನ್ ಸಂಬಂಧ ಮತ್ತೆ ಹಳಸಿದೆ. ಈ ಸಂಘರ್ಷ ಇಂದು ನೆನ್ನೆಯದಲ್ಲಈ ಸಂಘರ್ಷದ ಬೇರುಗಳು ಹಲವಾರು ವಿವಿಧ ಐತಿಹಾಸಿಕ ಘಟನೆಗಳೊಂದಿಗೆ ಗುರುತಿಸಲ್ಪಡುತ್ತವೆ:
– ಕ್ರಿ.ಪೂ 70: ರೋಮನ್‌ರು ಜೆರುಸ್ಲೇಮ್ ಆಳುತ್ತಿದ್ದರು.ಯಹೂದಿಗಳು ತಮ್ಮ ಪವಿತ್ರ ಸ್ಥಳ ಜೆರುಸ್ಲೇಮ್ ಅಲ್ಲಿ ದಂಗೆ ಎದ್ದು ಜೆರುಸ್ಲೇಮ್ ಅನ್ನು ಆಕ್ರಮಿಸಿಕೊಂಡರು ಇಲ್ಲಿಂದ ಜೆರುಸ್ಲೇಂ ಅಲ್ಲಿ ಸಂಘರ್ಷದ ಬೀಜದ ಬಿತ್ತಲಾಯಿತು, ಇದು ಮೊದಲ ರೋಮನ್-ಯಹೂದಿ ಯುದ್ಧಕ್ಕೆ ನಾಂದಿ ಹಾಡಿತು. ರೋಮನ್ನರು ಜೆರುಸ್ಲೇಮ್ ಅನ್ನು ಪುನಃ ವಶಪಡಿಸಿಕೊಂಡರು, ಯಹೂದಿಗಳ ಎರಡನೇ ಪವಿತ್ರ ದೇವಾಲಯವನ್ನು ನಾಶಪಡಿಸಿದರು, ಇಲ್ಲಿ ಇದರ ಕುರುಹಾಗಿ ಈಗಲೂ ಪಶ್ಚಿಮ ಗೋಡೆಯ ಒಂದು ತುಣುಕು ಮಾತ್ರ ಉಳಿದಿದೆ.
- – 7 ನೇ ಶತಮಾನ: ಈ ಶತಮಾನ ಇಸ್ಲಾಂನ ಪ್ರಚಾರವು ವ್ಯಾಪಕವಾಗಿತ್ತು ಆಗ ಜೆರುಸ್ಲೇಮ್‌ನಿಂದ ಯಹೂದಿಗಳಿಗೆ ಕಿರುಕುಳ ನೀಡಿ ಯುರೋಪಿಗೆ ಓಡಿಸಲಾಯಿತು,ಅದರಲ್ಲೂ ಯಹೂದಿಗಳು ವಿಶೇಷವಾಗಿ ಜರ್ಮನಿಗೆ ವಲಸೆ ಹೋದರು.
- – 19 ನೇ ಶತಮಾನದ ಉತ್ತರಾರ್ಧ ಮತ್ತು 20 ನೇ ಶತಮಾನದ ಆರಂಭದಲ್ಲಿ:ಈ ಕಾಲಗಟ್ಟದಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಭಾಗವಾಗಿದ್ದ ಪ್ಯಾಲೇಸ್ಟೇನ್‌ಗೆ ಯಹೂದಿಗಳ ಪುನರ್‌ವಲಸೆ ಹೆಚ್ಚಾಯಿತು ಇದು ಯಹೂದಿಗಳು ಹಾಗೂ ಅರಬ್ ನಿವಾಸಿಗಳ ನಡುವಿನ ಉದ್ವಿಗ್ಣತೆಗೆ ಕಾರಣವಾಯಿತು.
- – 1917: ಮೊದಲನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಹೊರಡಿಸಿದ ಬಾಲ್ಫೋರ್ ಘೋಷಣೆಯು ಪ್ಯಾಲೇಸ್ಟೇನ್‌ನಲ್ಲಿ “ಯಹೂದಿ ಜನರಿಗೆ ರಾಷ್ಟ್ರೀಯ ಮನೆ” ಸ್ಥಾಪನೆಗೆ ಬೆಂಬಲ ವ್ಯಕ್ತಪಡಿಸಿತು.
– ಮೊದಲನೆಯ ಮಹಾಯುದ್ಧದ ನಂತರ: ಮೊದಲನೆಯ ಮಹಾಯುದ್ಧದ ನಂತರ ಹಿಟ್ಲರ್ ಜರ್ಮನಿಯ ಸೋಲಿಗೆ ಯಹೂದಿಗಳನ್ನು ದೂಷಿಸಿದನು, ಇದರ ಪರಿಣಾಮ ಯಹೂದಿಗಳು ಅನುಭವಿಸಬೇಕಾಯಿತು. ಜರ್ಮನಿಯಿಂದ ಯಹೂದಿಗಳನ್ನು ಕ್ರೂರ ಹಿಟ್ಲರ್ ಪಡೆ ಹೊರದಬ್ಬಿತ್ತು. ಈಗಿನ ಇಸೇಲ್ ಪ್ರದೇಶಕ್ಕೆ ಯಹೂದಿಗಳ ವಲಸೆ ಹೆಚ್ಚಾಯಿತು.ಅದು ಆಗ ಪ್ಯಾಲೆಸ್ಟೈನ್ ಮತ್ತು ಟ್ರಾನ್ಸ್-ಜೋರ್ಡಾನ್ ಪ್ರದೇಶವಾಗಿತ್ತು.
– ಎರಡನೇ ಮಹಾಯುದ್ಧದ ನಂತರ (1939-45): ಅಮೇರಿಕಾ ಹಾಗೂ ಬ್ರಿಟನ್‌ಗಳು ಯಹುದಿಗಳು ಪ್ರತ್ಯೇಕ ದೇಶಕ್ಕಾಗಿ ಪ್ರಯತ್ನಿಸಿದರು ಆದರೆ ಅರಬ್ ದೇಶಗಳು ತಮ್ಮ ನಡುವೆ ಯಹೂದಿ ದೇಶವನ್ನಾಗಿಸಲು ನಿರಾಕರಿಸಿದರು.ಆದರೂ ಯಹೂದಿಗಳು 1948 ರಲ್ಲಿ ಇಸ್ರೇಲ್ ರಾಜ್ಯವನ್ನು ಸ್ಥಾಪಿಸಿದರು.
- – 1947-1948: ಪ್ಯಾಲೆಸ್ಟೈನ್ ಅನ್ನು ಪ್ರತ್ಯೇಕ ಯಹೂದಿ ಮತ್ತು ಅರಬ್ ರಾಷ್ಟ್ರಗಳಾಗಿ ವಿಭಜಿಸುವ ಯೋಜನೆಗೆ ವಿಶ್ವಸಂಸ್ಥೆ ಅನುಮೋದನೆ ನೀಡಿತು, ಇದು ಹಿಂಸಾಚಾರಕ್ಕೆ ಕಾರಣವಾಯಿತು. ಇಸ್ರೇಲ್ 1948 ರಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿದ್ದು ಅರಬ್ ರಾಷ್ಟ್ರಗಳು -ಇಸ್ರೇಲಿ ಯುದ್ಧಕ್ಕೆ ಪ್ರಚೋದನೆಯಾಯಿತು.
- – 1949: ಕದನ ವಿರಾಮ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಜೋರ್ಡಾನ್ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಂ ಅನ್ನು ಇಸ್ರೇಲ್ ಸ್ವಾಧೀನಪಡಿಸಿಕೊಂಡರೆ, ಈಜಿಪ್ಟ್ ಗಾಜಾವನ್ನು ಆಳಿತು.
- – 1956: ಸೂಯೆಜ್ ಕಾಲುವೆಯನ್ನು ಈಜಿಪ್ಟ್ ರಾಷ್ಟ್ರೀಕರಣಗೊಳಿಸಿದ ನಂತರ ಎರಡನೇ ಇಸ್ರೇಲ್-ಅರಬ್ ಯುದ್ಧ ನಡೆಯಿತು, ಇಸ್ರೇಲ್ ಈಜಿಪ್ಟ್ ಅನ್ನು ಆಕ್ರಮಿಸಿತು ಮತ್ತುಇದಕ್ಕೆ ಬ್ರಿಟನ್ ಮತ್ತು ಫ್ರಾನ್ಸ್ ಬೆಂಬಲ ನೀಡಿದವು.ಅಮೇರಿಕಾ ಸೋವಿಯತ್ ರಷ್ಯಾ ಹಸ್ತಕ್ಷೇಪದಿಂದ ಕದನ ಕೊನೆಗೊಂಡಿತು.
- 1964: ಇಸ್ರೇಲ್ ವಿರುದ್ಧ ಪ್ಯಾಲೆಸ್ಟೇನಿಯನ್ನರು ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್ಒ) ರಚಿಸಿದರು.
- – 1967: ಆರು ದಿನಗಳ ಯುದ್ಧವು ಭುಗಿಲೆದ್ದಿತು, ಇಸ್ರೇಲ್ ಪಶ್ಚಿಮ ದಂಡೆ, ಪೂರ್ವ ಜೆರುಸಲೇಮ್, ಗಾಜಾ ಪಟ್ಟಿ, ಗೋಲನ್ ಹೈಟ್ಸ್ ಮತ್ತು ಸಿನಾಯ್ ಪರ್ಯಾಯ ದ್ವೀಪವನ್ನು ವಶಪಡಿಸಿಕೊಂಡಿತು.
- – 1973: ಈಜಿಪ್ಟ್ ಮತ್ತು ಸಿರಿಯಾಗಳು ಇಸ್ರೇಲ್ ವಿರುದ್ಧ ಅನಿರೀಕ್ಷಿತ ದಾಳಿಯನ್ನು ಪ್ರಾರಂಭಿಸಿದವು ಯೋಮ್ ಕಿಪ್ಪೂರ್ ಯುದ್ಧವು ಪ್ರಾರಂಭವಾಯಿತು, ಇದು ಕದನ ವಿರಾಮ ಮತ್ತು ಶಾಂತಿ ಒಪ್ಪಂದಗಳಿಗೆ ಕಾರಣವಾಯಿತು.
- – 1978: ಕ್ಯಾಂಪ್ ಡೇವಿಡ್ ಒಪ್ಪಂದಗಳು ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಶಾಂತಿ ಒಪ್ಪಂದಕ್ಕೆ ಕಾರಣವಾಯಿತು.
- – 1987: ಗಾಜಾ, ಪಶ್ಚಿಮ ದಂಡೆ ಮತ್ತು ಇಸ್ರೇಲ್‌ನಲ್ಲಿ ಪ್ರತಿಭಟನೆ ಮತ್ತು ಘರ್ಷಣೆಗಳು ಪ್ರಾರಂಭವಾದವು. ಇದು ಮೊದಲ ಪ್ಯಾಲೆಸ್ಟೇನಿಯನ್ ದಂಗೆ ಎಂದು ಗುರುತಿಸಲಾಯಿತು.
- – 1993: ಇಸ್ರೇಲ್ ಪ್ಯಾಲೆಸ್ಟೇನ್ ನಡುವೆ ಓಸ್ಲೋ ಒಪ್ಪಂದ ನಡೆಯಿತು ,ಇದು ಇಸ್ರೇಲ್ ಮತ್ತು ಪಿಎಲ್ಒ ನಡುವಿನ ಮಾತುಕತೆಗಳಿಗೆ ಚೌಕಟ್ಟನ್ನು ವಿಧಿಸಿತು.
- 1994: ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯ ಕೆಲವು ಭಾಗಗಳನ್ನು ಆಳಲು ಇಸ್ರೇಲ್ ಪ್ಯಾಲೆಸ್ಟೇನಿಗೆ ಬಿಟ್ಟುಕೊಟ್ಟಿತು.
- – 2000-2005: ಪ್ಯಾಲೆಸ್ಟೇನಿ ಆಡಳಿತದಲ್ಲಿದ್ದ ಯಹೂದಿಗಳ ಪವಿತ್ರ ಸ್ಥಳ ಎರಡನೇ ಇಂಟಿಫಾಡಾ ಸ್ಫೋಟ ಮಾಡಲಾಯಿತು, ಇದರ ಪರಿಣಾಮ ವ್ಯಾಪಕ ಹಿಂಸಾಚಾರ ನಡೆಯಿತು.
- 2005: ಇಸ್ರೇಲ್ ಏಕಪಕ್ಷೀಯವಾಗಿ ಗಾಝಾ ಪಟ್ಟಿಯಿಂದ ಹಿಂದೆ ಸರಿದಿತು.
- 2006: ಇಸ್ರೇಲ್ ಮತ್ತು ಪಾಶ್ಚಿಮಾತ್ಯ ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದ್ದ ಹಮಾಸ್ ಪ್ಯಾಲೆಸ್ಟೇನ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು.
- 2008-2009: ಗಾಝಾದಿಂದ ರಾಕೆಟ್ ದಾಳಿಗಳು ನಿರಂತರವಾದವು ಪ್ರತಿಕ್ರಿಯೆಯಾಗಿ ಇಸ್ರೇಲ್ ಆಪರೇಷನ್ ಕ್ಯಾಸ್ಟ್ ಲೀಡ್ ಅನ್ನು ಪ್ರಾರಂಭಿಸಿತು.
- – 2014: ಗಾಝಾದಲ್ಲಿ ಆಪರೇಷನ್ ಪ್ರೊಟೆಕ್ಟಿವ್ ಎಡ್ಜ್ ಎಂದು ಕರೆಯಲ್ಪಡುವ ಮತ್ತೊಂದು ಸಂಘರ್ಷ ಭುಗಿಲೆದ್ದಿತು.
- – 2021: ಪೂರ್ವ ಜೆರುಸಲೇಂನ ಡಮಾಸ್ಕಸ್ ಗೇಟ್ ಪ್ಲಾಜಾಗೆ ಪ್ರವೇಶವನ್ನು ಇಸ್ರೇಲ್ ನಿರ್ಬಂಧಿಸಿತು. ಇದು ರಂಜಾನ್ ಋತುವಿನಲ್ಲಿ ಪ್ಯಾಲೆಸ್ಟೀನಿಯರಿಗೆ ಪ್ರಸಿದ್ಧ ಸಭೆ ಸ್ಥಳವಾಗಿತ್ತು, ಇದು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ನಾಲ್ಕು ದಿನಗಳ ನಂತರ, ಅಲ್ ಅಕ್ಸಾ ಮಸೀದಿಯಲ್ಲಿ ನಿಗದಿತ ಸಂಖ್ಯೆಯಲ್ಲಿ ಗುಂಪು ಸೇರಲು ಅನುಮತಿಸಿ ಇಸ್ರೇಲ್ ನಿರ್ಬಂಧ ಸಡಿಲಿಸಿತು.
ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷವು ನಿರಂತರ ಹೋರಾಟವಾಗಿ ಉಳಿದಿದೆ, ಇದು ಹಿಂಸಾಚಾರ, ಘರ್ಷಣೆಗಳು, ವಸಾಹತು ವಿಸ್ತರಣೆ ಮತ್ತು ಗಡಿಗಳು, ನಿರಾಶ್ರಿತರು ಮತ್ತು ಜೆರುಸಲೇಂನ ಸ್ಥಾನಮಾನದ ವಿವಾದಗಳಿಂದ ನಿಗುರುತಿಸಲ್ಪಟ್ಟಿದೆ. ಈ ಪ್ರಕ್ಷುಬ್ಧ ಇತಿಹಾಸದ ನಡುವೆ, ಸಂಘರ್ಷವು ವಿಕಸನಗೊಳ್ಳುತ್ತಲೇ ಇದೆ, ಇದು ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ನಿರಂತರ ಸವಾಲುಗಳನ್ನು ಒಡ್ಡುತ್ತಲೇ ಇದೆ.
ವಿನಯ್ ಹೆಬ್ಬೂರು