ಹುಬ್ಬಳ್ಳಿ-ಧಾರವಾಡ ಸುದ್ದಿ
ಈ ಬಾರಿ ಉ.ಕದವರಿಗೆ ಸಿಎಂ ಪಟ್ಟ;    ನಾನು, ಬೆಲ್ಲದ, ನಿರಾಣಿ ಯಾರಾದ್ರೂ ಆಗಬಹುದು

ಈ ಬಾರಿ ಉ.ಕದವರಿಗೆ ಸಿಎಂ ಪಟ್ಟ; ನಾನು, ಬೆಲ್ಲದ, ನಿರಾಣಿ ಯಾರಾದ್ರೂ ಆಗಬಹುದು

ಧಾರವಾಡ: ನಾನೂ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗೆ ಇದೆ. ಯಾವುದೇ ಕಪುö್ಪ ಚುಕ್ಕೆ ನನಗಿಲ್ಲ. ಮುಖ್ಯಮಂತ್ರಿಯಾಗಲು ಆಸೆ ನನಗೂ ಇದ್ದೇ ಇದೆ ಎಂದು ಆಹಾರ ಖಾತೆ ಸಚಿವ ಉಮೇಶ ಕತ್ತಿ ಪುನರುಚ್ಛರಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು
ಸಿಎಂ ಬಳಿಕ ಪ್ರಧಾನಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದರೆ, ನಾನು ಉತ್ತರ ಕರ್ನಾಟಕದ ಜನರನ್ನು ಎಬ್ಬಿಸಬೇಕಾಗುತ್ತದೆ. ಈ ಭಾಗಕ್ಕೆ ಅನ್ಯಾಯ ಆದರೆ, ಉತ್ತರ ಕರ್ನಾಟಕವನ್ನು ಪ್ರತ್ಯೇಕವಾಗಿ ಕಟ್ಟಬೇಕಾಗುತ್ತದೆ. ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಸಿಎಂ ಸ್ಥಾನ ಸಿಕ್ಕೇ ಸಿಗುತ್ತದೆ ಎಂದರು.
ಸಿದ್ದರಾಮಯ್ಯನವರ ಸರ್ಕಾರ ಶೇ ೧೦ ಸರ್ಕಾರ ಎಂದು ರಾಜ್ಯದ ಜನರ ಮಾತನಾಡುತ್ತಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಹಾಗೆ ನಡೆದಿದ್ದರೆ ಕಾಂಗ್ರೆಸ್ ನವರು ಕೋರ್ಟ್ಗೆ ಹೋಗಲಿ ಎಂದ ಅವರು, ಶಾಸಕ ಅರವಿಂದ ಬೆಲ್ಲದ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಲ್ಲದ ಯಾಕೆ ಸಿಎಂ ಆಗಬಾರದು. ನಾನೂ ಸಿಎಂ ಆಗಬಹುದು, ಬೆಲ್ಲದ ಅವರೂ ಸಿಎಂ ಆಗಬಹುದು ನಿರಾಣಿ ಅವರೂ ಸಿಎಂ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದರು.

 

administrator

Related Articles

Leave a Reply

Your email address will not be published. Required fields are marked *