ಹುಬ್ಬಳ್ಳಿ : ಮಹಾನಗರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳೆಯದಲ್ಲೂ ಚುರುಕುಗೊಂಡಿದ್ದು ಚುನಾವಣಾ ಉಸ್ತುವಾರಿ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹಾಗೂ ಧ್ರುವನಾರಾಯಣ ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಗೋಕುಲ ರಸ್ತೆಯ ಖಾಸಗಿ ಹೊಟೆಲ್‌ನಲ್ಲಿ ಮೊದಲ ಸುತ್ತಿನ ಸಭೆ ಇಂದು ನಡೆಸಿದ್ದು
೮೨ ವಾರ್ಡಗಳ ಸ್ಪರ್ಧೆಗೆ ಈಗಾಗಲೇ ೩೦೦ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಈಗಾಗಲೇ ೨-೩ ಅಭ್ಯರ್ಥಿಗಳ ಶಾರ್ಟ ಲೀಸ್ಟ ಸಿದ್ದಪಡಿಸಲಾಗಿದೆ ಎನ್ನಲಾಗುತ್ತಿದೆ. ಅನೇಕ ವಾರ್ಡಗಳಲ್ಲಿ ತೀವ್ರ ಜಿದ್ದಾ ಜಿದ್ದಿಯ ಪೈಪೋಟಿ ಏರ್ಪಟ್ಟಿದೆ.
ಸಂಜೆ ವೇಳೆಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಯ ಮತ್ತೊಂದು ಸಭೆ ನಡೆಯಲಿದ್ದು, ಎಲ್ಲ ಮುಂಚೂಣಿ ಘಟಕಗಳ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಕಳೆದ ಬಾರಿಯ ವಿಜೇತರು, ಅಲ್ಲದೇ ಪರಾಭವಗೊಂಡ ಅಭ್ಯರ್ಥಿಗಳ ಸಭೆ ನಡೆಯಲಿದ್ದು ಅಲ್ಲಿ ಒಂದು ಅಂತಿಮ ರೂಪು ರೇಷೆ ಸಿದ್ದಪಡಿಸಲಿದ್ದು, ಆದಷ್ಟು ಬೇಗ ಮೊದಲ ಪಟ್ಟಿ ಬಿಡುಗಡೆ ಮಾಡುವ ಇರಾದೆಯಲ್ಲಿದ್ದಾರೆನ್ನಲಾಗಿದೆ.
ಚುನಾವಣಾ ಸಮಿತಿ ಸಂಚಾಲಕರಾಗಿರುವ ಧ್ರುವನಾರಾಯಣ ದಿ. ೨೩ರವರೆಗೂ ನಗರದಲ್ಲೇ ಠಿಕಾಣಿ ಹೂಡಲಿದ್ದಾರೆನ್ನಲಾಗಿದೆ.
ಸ್ಥಳೀಯ ಧುರೀಣರ ನಡುವೆ ಸಾಮರಸ್ಯವಿರುವುದು ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದ್ದು ಎಲ್ಲರ ಅಭಿಪ್ರಾಯ ಕ್ರೋಡಿಕರಿಸಿ ಬೆಂಗಳೂರಲ್ಲೇ ಪಟ್ಟಿ ಅಂತಿಮಗೊAಡರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ
ಶೇ.೨೫ಕ್ಕಿಂತ ಹೆಚ್ಚಿದ್ದಲ್ಲಿ
ಮುಸ್ಲಿಂರಿಗೆ ಟಿಕೇಟ್ ನೀಡಿ
ಶೇ. ೨೫ರಿಂದ ೩೦ಕ್ಕಿಂತ ಹೆಚ್ಚು ಮುಸ್ಲಿಂ ಸಮುದಾಯದ ಜನತೆ ಇರುವ ಓಬಿಸಿ ಎ, ಹಾಗೂ ಓಬಿಸಿ ಬಿ ಎಂದು ಮೀಸಲಾದ ವಾರ್ಡಗಳಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂದು ಇಂದು ಕಾಂಗ್ರೆಸ್ ಚುನಾವಣಾ ಸಮಿತಿಯ ಮುಖಂಡರಿಗೆ ಹುಬ್ಬಳ್ಳಿ ಮತ್ತು ಧಾರವಾಡದ ಅಂಜುಮನ್ ಸಂಸ್ಥೆಯ ಕೆಲ ಪ್ರಮುಖರು ಮನವಿ ಮಾಡಿದ್ದಾರೆನ್ನಲಾಗಿದೆ.
ಕೆಲ ವಾರ್ಡಗಳಲ್ಲಿ ತಮ್ಮ ಬಾಹುಳ್ಯವಿದ್ದರೂ ಇತರರೂ ಆಕಾಂಕ್ಷಿಗಳಾಗಿರುವ ಹಿನ್ನೆಲೆಯಲ್ಲಿ ಈ ಮನವಿ ನೀಡಿದ್ದು,ಇದಕ್ಕೆ ಕಾಂಗ್ರೆಸ್ ಸಮಿತಿಯವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆನ್ನಲಾಗಿದೆ.
ಈಗಾಗಲೇ ಎಸ್ ಎಸ್ ಕೆ.ಸಮುದಾಯದವರು ಅವಳಿನಗರದಲ್ಲಿ ತಮ್ಮ ಸಮುದಾಯಕ್ಕೆ ಪಾಲಿಕೆಯಲ್ಲಿ ಸ್ಪರ್ಧೆಗೆ ಕನಿಷ್ಠ ೧೦ ಸ್ಥಾನಗಳನ್ನು ನೀಡಬೇಕೆಂದು ಮನವಿ ಮಾಡಿದ್ದನ್ನು ಸ್ಮರಿಸಬಹುದಾಗಿದೆ.