ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಇಂದು ಪರಿಶೀಲನೆ ನಡೆಯುತ್ತಿದ್ದು ನಾಡಿದ್ದು ನಾಮಪತ್ರ ವಾಪಸ್‌ಗೆ ಕೊನೆಯ ದಿನವಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬಂಡಾಯ ಬಿಸಿತುಪ್ಪವಾಗಿ ಪರಿಣಮಿಸಿದೆ.
ಬಿಜೆಪಿಯಲ್ಲಿ ಅನೇಕ ಪ್ರಮುಖರಿಗೆ ಟಿಕೆಟ್ ನಿರಾಕರಿಸಿರುವುದು ಆಯಾ ವಾರ್ಡಗಳಲ್ಲಿ ಪಕ್ಷಕ್ಕಿಂತ ತಮ್ಮ ಬಲವಾದ ವಯಕ್ತಿಕ ವರ್ಚಸ್ಸು ಹೊಂದಿರುವ ಅನೇಕರು ಪಕ್ಷೇತರರಾಗಿ ಕಣಕ್ಕಿಳಿದಿರುವುದು ದೊಡ್ಡ ತಲೆನೋವಾಗಿದೆ.
ಮಾಜಿ ಉಪ ಮೇಯರ್ ಲಕ್ಷಿö್ಮ ಉಪ್ಪಾರ(47), ಯಶೋಧಾ ಲಕ್ಷö್ಮಣ ಗಂಡಗಾಳೇಕರ( 54), ರವಿ ನಾಯಕ ಪತ್ನಿ ಕಲ್ಪನಾ ನಾಯಕ್(57), ಹೂವಪ್ಪ ದಾಯಗೋಡಿ(43), ಮಹಾಂತೇಶ ಗಿರಿಮಠ (68), ಶ್ರೀಮತಿ ಶಶಿ ಬಿಜವಾಡ (69),ರಂಗನಾಯಕ ತಪೇಲಾ (61) ರಾಮಚಂದ್ರ ಹದಗಲ್,ಸಹದೇವ ಹೊಟಗಿ(35)., 3ನೇ ವಾರ್ಡಲ್ಲಿ ಮಂಜುನಾಥ ನಡಟ್ಟಿ,28ನೇ ವಾರ್ಡಲ್ಲಿ ವಿಜಯಕುಮಾರ ಅಪ್ಪಾಜಿ ಬಂಡಾಯವೆದ್ದಿದ್ದಾರೆ.
ವಾರ್ಡ್ ನಂ.26 ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ ಮಂಜುಳಾ ಅಕ್ಕೂರ ಅವರು ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಬಿಸಿ ತುಪ್ಪವಾಗಲಿದೆ.
ವಾರ್ಡ್ ನಂಬರ್ ಒಂದರಲ್ಲಿ ಸರಸ್ವತಿ ಭಂಗಿ, ಎರಡನೇ ವಾರ್ಡ್ ನಿಂದ ಮನೋಹರ ಅವರ ಪತ್ನಿ, ಮೂರನೇ ವಾರ್ಡ್ ನಿಂದ ಮಂಜುನಾಥ ಚೋಳಪ್ಪನವರ, ಮಂಜುನಾಥ ನಡಟ್ಟಿ, ನಾಲ್ಕನೇ ವಾರ್ಡ್ನಿಂದ ಐದನೇ ವಾರ್ಡ್ ಸೂರಜ್ ಪುಡಕಲಕಟ್ಟಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಗಳಾಗಿದ್ದಾರೆ.
ಬಿಜೆಪಿ ಬಿಟ್ಟು ಜೆಡಿಎಸ್‌ನಿಂದ ವಿಠ್ಠಲ ಚವ್ಹಾಣ ಅಭ್ಯರ್ಥಿ ಯಾಗಿದ್ದರೆ, ಎಂಟನೇ ವಾರ್ಡ್ನಲ್ಲಿ ಮಂಜುನಾಥ ಹಿರೇಮಠ ಮತ್ತು ನವನಗರದಲ್ಲಿ ಅಣ್ಣಪ್ಪ ಅಪ್ಪಾಜಿ ಸೇರಿದಂತೆ ಅನೇಕರು ತಮ್ಮ ನಾಮಪತ್ರಗಳನ್ನು ಸಲ್ಲಿಸುವ ಮೂಲಕ ಪಕ್ಷದ ವಿರುದ್ಧ ಬಂಡೆದ್ದಿದ್ದಾರೆ.
ವಾರ್ಡ್ ನಂಬರ್ ಒಂದರಲ್ಲಿ ಕಾಂಗ್ರೆಸ್ ತೊರೆದ ಸೇರಿ ಸುರೇಖಾ ಪರಮೇಶ್ವರ ಮೇದಾ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್‌ನಿ0ದ ಟಿಕೆಟ್ ಬಯಸಿದ್ದ ಕೆಲವರು ಪಕ್ಷ ತೊರೆದು ಬಿಜೆಪಿ ಮತ್ತು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರೆ, ಕೆಲವರು ನಾಮಪತ್ರ ಸಲ್ಲಿಸಿ ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದ್ದಾರೆ.
ಇನ್ನೊ0ದೆಡೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶ್ರೀಧರ ಶೇಟ್, ಕರೆಪ್ಪ ಸುಣಗಾರ ಈಗ ಅತಂತ್ರರಾಗಿದ್ದಾರೆ.
ಕಾ0ಗ್ರೆಸ್‌ನಲ್ಲಿ ಗಣೇಶ ಟಗರಗುಂಟಿ(71), 43ನೇ ವಾರ್ಡಿಂದ ಸಮೀರ ಖಾನ್, 50ನೇ ವಾರ್ಡಿಂದ ಸುಶೀಲಾ ಗುಡಿಹಾಳ,42ರಲ್ಲಿ ಅಶೋಕ ಕಲಾದಗಿ,ಅರ್ಜುನ ಪೂಜಾರ, ಅಲ್ಲದೇ 50 ನೇ ವಾರ್ಡನಲ್ಲಿ ಕೈ ಟಿಕೆಟ್ ಆಕಾಂಕ್ಷಿ ಮಂಜುಳಾ ಗುರು ಯಾತಗೇರಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾಳೆ. 56ರಲ್ಲಿ ಮಾಜಿ ಮೇಯರ್ ವೆಂಕಟೇಶ ಮೇಸ್ತಿç ಪತ್ನಿ ಚಂದ್ರಿಕಾ ಕಾಂಗ್ರೆಸ್ ಟಿಕೆಟ್ ಕೊನೆಯ ಕ್ಷಣದಲ್ಲಿ ತಪ್ಪಿದ್ದರಿಂದ ಪಕ್ಷೇತರರಾಗಿದ್ದಾರೆ.20ನೇ ವಾರ್ಡಲ್ಲಿ ಮಹಾನಗರ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಕಲಾವತಿ ಗಿರಿಯಣ್ಣವರ ಸೆಡ್ಡು ಹೊಡೆದಿದ್ದಾರೆ.
ಉಣಕಲ್‌ನಲ್ಲಿ ಕೊಕಾಟೆ ನಾಮಪತ್ರ ಕುತೂಹಲ
ಉಣಕಲ್ ಪ್ರದೇಶದಲ್ಲಿ ಸಾಮ,ಭೇದ ,ದಂಡದ ಮೂಲಕ 36, 38ರಲ್ಲಿ ಬಿಜೆಪಿ ಅವಿರೋಧ ಆಯ್ಕೆಗೆ ಸ್ಕೆಚ್ ತಯಾರಾಗಿದ್ದರೂ ಅಂತಿಮವಾಗಿ ಈ ಎರಡೂ ವಾರ್ಡಗಳಲ್ಲಿ ಕಾಂಗ್ರೆಸ್,ಆಪ್ ಹಾಗೂ ಪಕ್ಷೇತರರು ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
36ರಲ್ಲಿ ಮಾಜಿ ಮೇಯರ್ ದಿ.ಶಿವಪ್ಪ ಕೊಕಾಟೆಯವರ ಪುತ್ರ ಚನ್ನವೀರಪ್ಪ ಕೊಕಾಟೆ ಸ್ವತಂತ್ರವಾಗಿ ಕಣಕ್ಕಿಳಿದಿರುವುದು ಭಾರಿ ಕುತೂಹಲ ಕೆರಳಿಸಿದೆ.
ಸ್ಪರ್ಧೆಗಿಳಿದಿರುವ ಚನ್ನವೀರಪ್ಪ ಪ್ರದೇಶದ ಪ್ರಭಾವಿ ಮುಖಂಡ ರಾಮಣ್ಣ ಕೊಕಾಟಿಯವರ ಸಹೋದರರಾಗಿದ್ದಾರೆ.ಅಲ್ಲದೇ ಕಾಂಗ್ರೆಸ್‌ನಿ0ದ ವೀರಣ್ಣ ಹಿರೇಹಾಳ, ಆಪ್‌ನಿಂದ ಹಿರೇಮಠ, ಸಂಕಣ್ಣವರ ಇವರುಗಳು ಕಣದಲ್ಲಿದ್ದು ಇನ್ನೂ ಎಲ್ಲರ ಮನವೊಲಿಸುವ ತಂತ್ರಗಾರಿಕೆ ಮುಂದುವರಿದಿದೆ ಎನ್ನಲಾಗುತ್ತಿದೆ. 38ನೇ ವಾರ್ಡಲ್ಲಿ ತೌಸೀಪ್ ಲಕ್ಕುಂಡಿ ಕಣಕ್ಕಿಳಿದಿದ್ದಾರೆ.