ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡ ಜಿಲ್ಲೆಯ ಇಬ್ಬರು ಸಿಎಂ ರೇಸ್‌ನಲ್ಲಿ;     ರಾಷ್ಟ್ರೀಯ ವಾಹಿನಿಗಳಲ್ಲಿ ಜೋಶಿ ಪ್ರಂಟ್ ರನ್ನರ್

ಧಾರವಾಡ ಜಿಲ್ಲೆಯ ಇಬ್ಬರು ಸಿಎಂ ರೇಸ್‌ನಲ್ಲಿ; ರಾಷ್ಟ್ರೀಯ ವಾಹಿನಿಗಳಲ್ಲಿ ಜೋಶಿ ಪ್ರಂಟ್ ರನ್ನರ್

ಬೆಂಗಳೂರು: ಬಿಜೆಪಿ ಮೂಲಗಳ ಪ್ರಕಾರ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಕ್ರಿಯೆ ತೀವ್ರ ವೇಗ ಪಡೆದುಕೊಂಡಿದ್ದು ಜುಲೈ ೨೬ ರಿಂದ ಆಗಸ್ಟ್ ೧೫ರ ನಡುವೆ ಯಡಿಯೂರಪ್ಪ ಯಾವುದೇ ದಿನ, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಲ್ಲದೇ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಆಡಿಯೋದಲ್ಲಿ ಹೇಳಿರುವ ವಿಚಾರ ನಾಯಕತ್ವ ಬದಲಾವಣೆ ಮತ್ತಷ್ಟು ಖಚಿತಪಡಿಸಿದ್ದು ನಾಲ್ವರು ಹೆಸರು ಸಿಎಂ ರೇಸ್‌ನಲ್ಲಿ ಮುಂಚೂಣಿಗೆ ಬಂದಿದೆ.


ಯಡಿಯೂರಪ್ಪ ಬದಲಾವಣೆ ಬಹುತೇಕ ಖಚಿತ ಎಂದು ದಿಲ್ಲಿಯ ವಿವಿಧ ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದು ಹುಬ್ಬಳ್ಳಿಯವರಾದ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಮುಂದಿನ ಮುಖ್ಯಮಂತ್ರಿ ಎಂದು ನಿನ್ನೆ ರಾತ್ರಿಯಿಂದಲೇ ಬಿತ್ತರಗೊಳ್ಳುತ್ತಿದೆ.
ಮುಂದಿನ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ್, ಗಣಿ ಸಚಿವ ಮುರುಗೇಶ ನಿರಾಣಿ ಹಾಗೂ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಕೇಳಿ ಬರುತ್ತಿದೆ.


ನಾಯಕತ್ವದ ಬದಲಾವಣೆ ಚರ್ಚೆಯ ಮಧ್ಯೆಯೇ ೨೩ರಂದು ಯಡಿಯೂರಪ್ಪ ಶಿಕಾರಿಪುರಕ್ಕೆ ತೆರಳಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು ಅದೇ ಸಿಎಂ ಆಗಿ ತವರಿನ ಕೊನೆಯ ಕಾರ್ಯಕ್ರಮ ಎನ್ನಲಾಗುತ್ತಿದೆ.
ಅಲ್ಲದೇ ಸಿಎಂ ೨೫ರಂದು ಸಚಿವಾಲಯದ ಸಿಬ್ಬಂದಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಸಹಜವಾಗಿ ಅವಧಿ ಮುಗಿದ ಬಳಿಕ ಸಚಿವಾಲಯದ ಸಿಬ್ಬಂದಿಗೆ ಭೋಜನ ಕೂಟ ಆಯೋಜನೆ ಮಾಡುವುದು ಸಂಪ್ರದಾಯ. ಆದರೆ ಅವಧಿಗೆ ಮುನ್ನವೇ ಭೋಜನ ಕೂಟವನ್ನು ಆಯೋಹಿಸಿರುವ ಸಿಎಂ ಕ್ರಮ, ಅವಧಿಗೆ ಮುನ್ನವೇ ಸಿಎಂ ಬದಲಾವಣೆ ನಿಶ್ಚಿತ ಎಂಬುದನ್ನು ಮತ್ತಷ್ಟು ಖಚಿತಪಡಿಸಿದೆ.
ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ವಲಸಿಗ ಸಚಿವರಿಗೂ ತಳಮಳ ಶುರುವಾಗಿದ್ದು, ಮುಖ್ಯಮಂತ್ರಿ ಬದಲಾವಣೆಯಾದರೇ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದ್ದು, ೧೨ಕ್ಕೂ ಹೆಚ್ಚು ಸಚಿವರು ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ ಎನ್ನಲಾಗಿದೆ.
ಸಿಡಿ ಪ್ರಕರಣದಲ್ಲಿ ನಿರಾಣಿ ಸಹ ಕೋರ್ಟನಿಂದ ತಡೆಯಾಜ್ಞೆ ತಂದಿರುವುದು ಅವರಿಗೆ ಸ್ವಲ್ಪ ಹಿನ್ನೆಡೆಯಾಗುತ್ತಿದೆ ಎನ್ನಲಾಗಿದೆ.

 

ಈಶ್ವರಪ್ಪ, ಶೆಟ್ಟರ್ ಪಕ್ಷದ ಎರಡು ಕಣ್ಣು!

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರದಲ್ಲಿ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಆಡಿಯೋಗೂ ನನಗೂ ಯಾವುದೇ ಸಂಬಂಧ ವಿಲ್ಲ’ ಎಂದಿದ್ದಾರೆ.


ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆಯುವೆ. ಈ ಬಗ್ಗೆ ತನಿಖೆಯಾಗಬೇಕು. ತನಿಖೆಯ ಬಳಿಕ ಆಡಿಯೋದ ಸತ್ಯಾಸತ್ಯತೆ ಹೊರಬರಲಿದೆ ಎಂದಿರುವ ಕಟೀಲ್, ನಾಯಕತ್ವ ಬದಲಾವಣೆ ಕುರಿತು ನಮ್ಮಲ್ಲಿ ಯಾವುದೇ ಚರ್ಚೆ ಗಳಿಲ್ಲ ಎಂದರು.
ನಮ್ಮ ಪಾರ್ಟಿಗೆ ಆತ್ಮ ಯಡಿಯೂರಪ್ಪ. ಯಡಿಯೂರಪ್ಪ ನಮ್ಮ ಸರ್ವ ಸಮ್ಮತದ ನಾಯಕ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳು ಇದ್ದಂತೆ ಎಂದಿದ್ದಾರೆ.
’ತನಿಖೆಯಾಗದೇ ಯಾರ ಬಗ್ಗೆಯೂ ಸಂಶಯ ವ್ಯಕ್ತಪಡಿಸುವುದಿಲ್ಲ.ತನಿಖೆ ಮೂಲಕ ಸತ್ಯ ಹೊರಬರಲಿ. ಎಲ್ಲದಕ್ಕೂ ಬಳಿಕ ಉತ್ತರ ನೀಡ್ತೇನೆ’ ಎಂದಿರುವ ಕಟೀಲ್, ಇವತ್ತು ಅಧಿವೇಶನಕ್ಕೆ ಹೋಗ್ತಾ ಇದ್ದು, ಆಡಿಯೋ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿರು ವುದಾಗಿ ಹೇಳಿದರು.

administrator

Related Articles

Leave a Reply

Your email address will not be published. Required fields are marked *