ಹುಬ್ಬಳ್ಳಿ: ಮೊನ್ನೆ ಮಧ್ಯರಾತ್ರಿ ಮಹಾನಗರ ಪಾಲಿಕೆ ಚುನಾವಣೆಗೆ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಎರಡನೇ ಪಟ್ಟಿಯನ್ನು ತೀವ್ರ ಕಸರತ್ತಿನ ನಂತರ ಅಂತಿಮಗೊಳಿಸಿದ್ದರೂ ಅಧಿಕೃತವಾಗಿ ಬಿಡುಗಡೆ ಮಾಡಬೇಕಾಗಿದೆ.
ಸೆಂಟ್ರಲ್ ಕ್ಷೇತ್ರದ ಹಾಗೂ ಪೂರ್ವ ಕ್ಷೇತ್ರದ ೧೫ ಅಭ್ಯರ್ಥಿಗಳೂ ಸೇರಿದಂತೆ ಪಶ್ಚಿಮ ಮತ್ತು ಗ್ರಾಮೀಣ ಕ್ಷೇತ್ರಗಳ ಸುಮಾರು ೨೫ ಉಮೇದುವಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಇಂದು ಬೆಳಗಿನಜಾವದವರೆಗೂ ಕೋರ ಕಮೀಟಿ ಸಭೆ ನಡೆದು ಎರಡನೇ ಪಟ್ಟಿ ಅಂತಿಮಗೊಳಿಸಿದ್ದು ಕೊನೆಯ ಪಟ್ಟಿ ನಾಳೆ ಪ್ರಕಟವಾಗುವ ಸಾಧ್ಯತೆ ಇದೆ. ಕೆಲ ವಾರ್ಡಗಳಿಗೆ ಪುನಃ ಸಮೀಕ್ಷೆ ನಡೆಸಲಾಗುತ್ತಿದ್ದು ಅದರ ವರದಿ ಆಧರಿಸಿ ಪ್ರಕಟಿಸುವುದಾಗಿ ಹೇಳುತ್ತಿದ್ದರೂ ತಮ್ಮ ಆಪ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸೆ0ಟ್ರಲ್ ಕ್ಷೇತ್ರದಲ್ಲಿ ಹಿರಿಯ ಮುಖಂಡ ಸಿದ್ದು ಮೊಗಲಿ ಶೆಟ್ಟರ್ ಪತ್ನಿ ಸೀಮಾ ಮೊಗಲಿಶೆಟ್ಟರ್ (39), ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ(41), ಪ್ರದೀಪ ಶೆಟ್ಟರ್ ಬಲಗೈ ಬಂಟ ಮಣಿಕಂಠ ಶ್ಯಾಗೋಟಿ (45), ಉಮಾ ಮುಕುಂದ (44), ವೀಣಾ ಚೇತನ ಭರದ್ವಾಡ (49), ಶ್ರೀಮತಿ ಶ್ವೇತಾ ರಾಯನಗೌಡರ(59) ಇವರಿಗೆ ಅಂತಿಮಗೊಳಿಸಿ ನಾಮಪತ್ರ ಸಲ್ಲಿಸಲು ಸೂಚಿಸಲಾಗಿದೆ.
ಅಂತಿಮಗೊ0ಡವರಿಗೆ ಇಂದು ಪಕ್ಷದ ಕಾರ್ಯಾಲಯದಲ್ಲಿ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಬಿಫಾರ್ಮ ವಿತರಿಸಿದ್ದಾರೆ.
ಹಿರಿಯರಾದ ಡಾ.ಪಾಂಡುರ0ಗ ಪಾಟೀಲ, ಸಂತೋಷ ಚವ್ಹಾಣ ಸೇರಿದಂತೆ ಎಲ್ಲ ಅಭ್ಯರ್ಥಿಗಳು ಬಿಫಾರಂ ಪಡೆದುಕೊಂಡಿದ್ದಾರೆ.
ಪೂರ್ವ ಕ್ಷೇತ್ರದಲ್ಲಿ ಅನೂಪ್ ಬಿಜವಾಡ (61), ಮಲ್ಲಪ್ಪ ಶಿರಕೋಳ (62), ರುಕ್ಮಿಣಿ ಶೆಜವಾಡಕರ (64), ಜಶ್ವಂತ ಜಾಧವ (69), ಮಂಜುನಾಥ ಬಿಜವಾಡ(81), ಶಾಂತಾ ಹೊನ್ನಪ್ಪ ಕೋಗೊಡ (82) ಅಲ್ಲದೇ 77ನೇ ವಾರ್ಡಿನಿಂದ ಸ್ವಲೇಹಾ ಝಕ್ರಿಯಾ ಹೊಸೂರಗೆ ಟಿಕೆಟ್ ಖಚಿತವಾಗಿದೆ.
ಪಶ್ಚಿಮ ಹಾಗೂ ಧಾರವಾಡ ೭೧ರ ಕೆಲ ಟಿಕೆಟ್ ಅಂತಿಮಗೊ0ಡಿದ್ದು, ಪಟ್ಟಿ ದೊರೆಯಬೇಕಿದೆ. ಮಹಾನಗರ ಅಧ್ಯಕ್ಷ ಅರವಿಂದ ಬೆಲ್ಲದ ಶೀಘ್ರ ಪ್ರಕಟ ಮಾಡುವುದಾಗಿ ಹೇಳಿದ್ದಾರೆ. 22ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಪಾರ್ವತೆವ್ವ ಹಿತ್ತಲಮನಿಗೆ ಟಿಕೆಟ್ ಅಂತಿಮವಾಗಿದೆ ಎಂದು ತಿಳಿದುಬಂದಿದೆ.
ಮುಸ್ಲಿ0 ಮಹಿಳೆಗೆ ಮಣೆ
ಬಿಜೆಪಿಯಿಂದ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಮಣೆ ಹಾಕಲಾಗಿದೆ.ಒಬಿಸಿ ಎ ಸಮುದಾಯಕ್ಕೆ ಮೀಸಲಾದ 77ನೇ ವಾರ್ಡಿನಲ್ಲಿ ಸ್ವಲೇಹಾ ಝಕ್ರಿಯಾ ಹೊಸೂರ ಎಂಬುವವರು ಕಮಲ ಹಿಡಿದು ಮತ ಯಾಚಿಸಲಿದ್ದಾರೆ.
ಇಲ್ಲಿ ಕಾಂಗ್ರೆಸ್‌ನಿ0ದ ಕಿಲ್ಲೆದಾರ ಚಾಚಿ ಎಂದೆ ಖ್ಯಾತರಾಗಿರುವ ಹಿರಿಯ ಸದಸ್ಯೆ ಫೆಮಿದಾ ಕಿಲ್ಲೇದಾರ ಅವರ ಪುತ್ರಿ ಬತುಲ್ ಕಿಲ್ಲೇದಾರ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ:
39-ಸೀಮಾ ಮೊಗಲಿಶೆಟ್ಟರ್, 41-ಸಂತೋಷ ಚವ್ಹಾಣ, 45-ಮಣಿಕಂಠ ಶ್ಯಾಗೋಟಿ, 44-ಉಮಾ ಮುಕುಂದ, 49-ವೀಣಾ ಚೇತನ ಭರದ್ವಾಡ, 59-ಶ್ವೇತಾ ರಾಯನಗೌಡರ, 61-ಅನೂಪ್ ಬಿಜವಾಡ, 62-ಮಲ್ಲಪ್ಪ ಶಿರಕೋಳ, 64-ರುಕ್ಮಿಣಿ ಶೆಜವಾಡಕರ, 69-ಜಶ್ವಂತ ಜಾಧವ, 81-ಮಂಜುನಾಥ ಬಿಜವಾಡ, 82-ಶಾಂತಾ ಹೊನ್ನಪ್ಪ ಕೋಗೊಡ, 77-ಸ್ವಲೇಹಾ ಝಕ್ರಿಯಾ ಹೊಸೂರ
ಕೇಸರಿ ಪಡೆಗೆ ಕಗ್ಗಂಟಾದ 68
ಪೂರ್ವ ಕ್ಷೇತ್ರದ 68ನೇ ವಾರ್ಡ ಕಾಂಗ್ರೆಸ್‌ಗೆ 71 ಆದಂತೆಯೆ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.
ಸಾಮಾನ್ಯರಿಗೆ ಮೀಸಲಾದ ಕ್ಷೇತ್ರದಲ್ಲಿ ನಾರಾಯಣ ಜರತಾರಘರ, ಶಿವಾನಂದ ಮುತ್ತಣ್ಣವರ ತೀವ್ರ ಪೈಪೋಟಿ ನಡೆದಿದ್ದು, ಇಬ್ಬರ ಜಗಳ ಬೇರೊಬ್ಬರಿಗೆ ವರವಾಗುವ ಸಾಧ್ಯತೆಗಳು ಇಲ್ಲದಿಲ್ಲ.
ಲಿಂಗಾಯತ ಸಮುದಾಯದವರಿಗೆ ನೀಡಬೇಕೆಂಬ ಒತ್ತಡ ಹೆಚ್ಚಾಗಿದ್ದು ಕಾಂಗ್ರೆಸ್‌ನಿAದ ಇಲ್ಲಿ ನಿರಂಜನ ಹಿರೇಮಠಗೆ ಟಿಕೆಟ್ ಅಂತಿಮಗೊAಡಿದೆ.