ಬೆಂಗಳೂರು: ಪಕ್ಷದ ವರಿಷ್ಠರ ಜತೆ ಸುದೀರ್ಘ ಮಾತುಕತೆ, ಚರ್ಚೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ 29 ಜನ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮುಖದಲ್ಲಿ
ಕೆ.ಎಸ್.ಈಶ್ವರಪ್ಪ(ಶಿವಮೊಗ್ಗ), ಆರ್.ಅಶೋಕ್(ಪದ್ಮನಾಭ ನಗರ), ಬಿ.ಸಿ ಪಾಟೀಲ್(ಹಿರೇಕೆರೂರು), ಡಾ.ಸಿ.ಎನ್.ಅಶ್ವತ್ಥ ನಾರಾಯಣ(ಮಲ್ಲೇಶ್ವರ), ಬಿ.ಶ್ರೀರಾಮುಲು (ಮೊಳಕಾಲ್ಮೂರು), ಉಮೇಶ್ ಕತ್ತಿ(ಹುಕ್ಕೇರಿ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಬೈರತಿ ಬಸವರಾಜ(ಕೆ ಆರ್ ಪುರಂ), ಮುರುಗೇಶ್ ನಿರಾಣಿ(ಬೀಳಗಿ) ಶಿವರಾಂ ಹೆಬ್ಬಾರ್(ಯಲ್ಲಾಪುರ), ಶಶಿಕಲಾ ಜೊಲ್ಲೆ (ನಿಪ್ಪಾಣಿ), ಕೆ.ಸಿ ನಾರಾಯಣ ಗೌಡ(ಕೆಆರ್ ಪೇಟೆ), ಸುನೀಲ್ ಕುಮಾರ್ (ಕಾರ್ಕಳ), ಅರಗ ಜ್ಞಾನೇಂದ್ರ(ತೀರ್ಥಹಳ್ಳಿ), ಗೋವಿಂದ ಕಾರಜೋಳ (ಮುಧೋಳ), ಮುನಿರತ್ನ(ಆರ್ ಆರ್ ನಗರ), ಎಂ.ಟಿ.ಬಿ ನಾಗರಾಜ್ (ಎಂಎಲ್‌ಸಿ), ಗೋಪಾಲಯ್ಯ(ಮಹಾಲಕ್ಷಿ ಲೇಔಟ್), ಜೆ.ಸಿ.ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ), ಹಾಲಪ್ಪ ಆಚಾರ್(ಯಲಬುರ್ಗಾ), ಶಂಕರ್‌ಪಾಟೀಲ್ ಮುನೇನಕೊಪ್ಪ(ನವಲಗುಂದ), ಕೋಟಾ ಶ್ರೀನಿವಾಸ ಪೂಜಾರಿ(ಎಂಎಲ್‌ಸಿ), ಪ್ರಭು ಚೌವ್ಹಾಣ್(ಔರಾದ್), ವಿ ಸೋಮಣ್ಣ (ಗೋವಿಂದ ರಾಜನಗರ), ಎಸ್ ಅಂಗಾರ(ಸುಳ್ಯ), ಆನಂದ್ ಸಿಂಗ್ (ಹೊಸಪೇಟೆ), ಬಿಸಿ ನಾಗೇಶ್ (ತಿಪಟೂರು) ಸಿ.ಸಿ.ಪಾಟೀಲ್(ನರಗುಂದ) ಪ್ರಮಾಣ ವಚನ ಸ್ವೀಕರಿಸಿದರು.
8 ಲಿಂಗಾಯತರು, 3 ಒಬಿಸಿ, 7 ಮಂದಿ ಒಕ್ಕಲಿಗರು, ೩ ಹಿಂದುಳಿದ ವರ್ಗದವರಿಗೆ, 1 ರೆಡ್ಡಿ, 1 ಬ್ರಾಹ್ಮಣ, ಓರ್ವ ಮಹಿಳೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು ಸಚಿವ ಸಂಪುಟದ ಬಗ್ಗೆ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರವಿವಾರ ರಾತ್ರಿಯಿಂದಲೇ ನಡೆದಿರುವ ಸರ್ಕಾರದ ಸಂಪುಟ ರಚನೆಯ ಕಸರತ್ತು ಮಂಗಳವಾರ ತಡರಾತ್ರಿ ವೇಳೆಗೆ ಪೂರ್ಣಗೊಂಡಿದೆ. ರಾಜಭವನದೆದುರು ನೂತನ ಸಚಿವರ ಬೆಂಬಲಿಗರ ಘೋಷಣೆ ಮುಗಿಲು ಮುಟ್ಟಿದ್ದರೆ ಸಚಿವ ಸ್ಥಾನ ವಂಚಿತರಾದವರ ಬೆಂಬಲಿಗರ ಪ್ರತಿಭಟನೆ ಸಹ ನಡೆದಿದೆ.
ಹಿರಿಯ ನಾಯಕರಿಗೆ ಬಿಗ್‌ಶಾಕ್ ಕೊಟ್ಟ ಹೈಕಮಾಂಡ್
ನೂತನ ಸಚಿವ ಸಂಪುಟದಲ್ಲಿ ಹಲವು ಹಿರಿಯ ನಾಯಕರಿಗೆ ಶಾಕ್ ನೀಡಲಾಗಿದ್ದು, ಸಂಪುಟದಿAದ ಕೈಬಿಡಲಾಗಿದೆ.
ಪ್ರಮುಖವಾಗಿ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಮಾಜಿ ಡಿಸಿಎಂ ಲಕ್ಷ÷್ಮಣ ಸವದಿ, ಆರ್.ಶಂಕರ್, ಸಿ.ಪಿ.ಯೋಗೇಶ್ವರ್, ಶ್ರೀಮಂತ ಪಾಟೀಲ್ ಅವರನ್ನು ಸಂಪುಟದಿ0ದ ಕೈಬಿಡಲಾಗಿದೆ.
ಯತ್ನಾಳ್, ಬೆಲ್ಲದ್ ಹಾಗೂ ಸಿಪಿ ಯೋಗೇಶ್ವರ್ ಅವರ ನಡೆ ಮುಂದಿನ ದಿನಗಳಲ್ಲಿ ರಾಜಕೀಯದ ಜಿದ್ದಾಜಿದ್ದಿಗೆ ಕಾರಣ ವಾಗಬಹುದು ಎಂಬ ಮಾತು ಕೇಳಿಬರುತ್ತಿದೆ.