ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸದ್ದು ಜೋರಾಗಿದ್ದು, ಆಕಾಂಕ್ಷಿತರ ಪಟ್ಟಿಯಲ್ಲಿರುವ ಸಚಿವ ಮುರುಗೇಶ್ ನಿರಾಣಿ ಅವರು, ನಿನ್ನ ಕಾಶಿ ಯಾತ್ರೆಗೆ ತೆರಳಿ, ಪುಣ್ಯಸ್ನಾನ ಮಾಡಿ ಬಂದ ಬೆನ್ನಲ್ಲೇ, ಇಂದು ಧಾರವಾಡ ಶಾಸಕ ಅರವಿಂದ್ ಬೆಲ್ಲದ ಕೂಡ ಕಾಶಿಯಾತ್ರೆ ಕೈಗೊಂಡಿದ್ದಾರೆ.
ಯಡಿಯೂರಪ್ಪ ಬದಲಾವಣೆ ಮಾಡಿದ ನಂತರ ಆ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನಿಗೆ, ಬಿಜೆಪಿ ಹೈಕಮಾಂಡ್ ನೀಡಲಿದೆ ಎನ್ನಲಾಗುತ್ತಿದ್ದು, ಮುಂಚೂಣಿಯಲ್ಲಿ ಸಚಿವ ಮುರುಗೇಶ್ ನಿರಾಣಿ ಅಲ್ಲದೇ ಅರವಿಂದ್ ಬೆಲ್ಲದ್ ಹೆಸರು ಸದ್ದು ಮಾಡುತ್ತಿದೆ.
ಇಂದು ಶಾಸಕ ಬೆಲ್ಲದ್ ಕೂಡ ವಾರಣಾಸಿಯ ಕಾಶಿ ವಿಶ್ವನಾಥನ ಮೊರೆ ಹೋಗಿದ್ದಾರೆ. ವಾರಣಾಸಿಗೆ ತೆರಳಿ, ಕಾಶಿ ವಿಶ್ವನಾಥನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿವ ಭಾಗ್ಯ ವಿಶ್ವನಾಥ ಯಾರಿಗೆ ಕಲ್ಪಿಸುತ್ತಾನೆ ಕಾದು ನೋಡಬೇಕಿದೆ.