ಹುಬ್ಬಳ್ಳಿ-ಧಾರವಾಡ ಸುದ್ದಿ

29ನೇ ವಾರ್ಡ ಮತ್ತೆ ಇತಿಹಾಸ ಮರುಕಳಿಸುವ ಲೆಕ್ಕಾಚಾರ ಷಣ್ಮುಖ ಬೆಟಗೇರಿಗೆ ಬೆಂಬಲದ ಮಹಾಪೂರ ಸ್ವಾತಂತ್ರö್ಯ ಹೋರಾಟಗಾರರ ಕುಟುಂಬದ ಬಗ್ಗೆ ವಿಶೇಷ ಮಮಕಾರ

 

 


ಹುಬ್ಬಳ್ಳಿ: ಬಹುತೇಕ ಅಮರಗೋಳ ಪ್ರದೇಶವನ್ನು ಒಳಗೊಂಡಿರುವ ಪಶ್ಚಿಮ ಕ್ಷೇತ್ರ ವ್ಯಾಪ್ತಿಯ ನೂತನ ೨೯ (ಹಳೆಯ ೨೪) ನೇ ವಾರ್ಡಿನಲ್ಲಿ ಇತಿಹಾಸ ಮರುಕಳಿಸುವ ಲಕ್ಷಣಗಳು ಗೋಚರಿಸಲಾರಂಭಿಸಿವೆ.
ಅಮರಗೋಳದ ಸ್ವಾತಂತ್ರö್ಯ ಹೋರಾಟಗಾರ ದಿ.ಪರಪ್ಪ ಚನ್ನಬಸಪ್ಪ ಬೆಟಗೇರಿಯವರ ಮೊಮ್ಮಗ ಷಣ್ಮುಖ ಬೆಟಗೇರಿ ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು ಮಹಾನಗರ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದು ಪ್ರಸಕ್ತ ಚುನಾವಣೆಯಲ್ಲಿ ಸಾಮಾನ್ಯರಿಗೆ ಮೀಸಲಾಗಿರುವ ಈ ವಾರ್ಡನ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಅAತಿಮ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಈ ಬಾರಿ ಕಳೆದ ಬಾರಿಯಂತೆ ಸ್ವತಂತ್ರ ಅಭ್ಯರ್ಥಿಗೆ ಅನುಕೂಲವಾಗುವ ಸಾಧ್ಯತೆಗಳು ಮೇಲ್ನೋಟಕ್ಕೆ ಕಂಡುಬರಲಾರ0ಬಿಸಿವೆ.
ಕಳೆದ 2013ರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಾಂತಪ್ಪ ದೇವಕಿ ಕಣಕ್ಕಿಳಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಹೊರಕೇರಿ ಬಂಡಾಯದ ಬಾವುಟ ಹಾರಿಸಿ ಅಟೋರಿಕ್ಷಾ ಚಿಹ್ನೆಯೊಂದಿಗೆ ಸ್ಪರ್ಧಿಸಿ ದ್ದರು. ಜನ ಅಟೋವನ್ನೇ ಹತ್ತಿ ಆಶೀರ್ವದಿಸಿದ್ದರು.
ಈ ಬಾರಿ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಷಣ್ಮುಖ ಬೆಟಗೇರಿಗೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ವಾರ್ಡಿನ ಬಹುತೇಕ ಜನರ ಅಭಿಲಾಷೆಯಂತೆ ನಾಮಪತ್ರ ಸಲ್ಲಿಸಿದ್ದು ಜನತೆಯೇ ಗೆಲ್ಲಿಸುವ ವಾಗ್ದಾನ ಮಾಡುತ್ತಿರುವದು ಇತಿಹಾಸ ಮರುಕಳಿಸುವ ಎಲ್ಲ ಲಕ್ಷಣಗಳು ಗೋಚರಿ ಸುವಂತೆ ಮಾಡಿದೆ.
ಸ್ವಾತಂತ್ರö್ಯ ಹೋರಾಟಗಾರರ ಹಿನ್ನೆಲೆಯ ಬೆಟಗೇರಿ ಕುಟುಂಬದ ಬಗೆಗೆ ಇಡೀ ಊರಿನಲ್ಲೇ ಸದಾಶಯವಿರುವುದು ಅಲ್ಲದೇ ಎಲ್ಲ ಸಮುದಾಯದವರ ಜತೆ ಉತ್ತಮ ಸಂಬAಧ ಹೊಂದಿದ್ದಾರಲ್ಲದೇ ಇವರ ತಂದೆಯವರು ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲೇ ಇದ್ದು ಸಕ್ರೀಯ ಸಂಘಟನೆಯಲ್ಲಿದ್ದರು.
ಬಿಜೆಪಿಯಿ0ದ ಈ ಸಲ ಕಳೆದ ಬಾರಿ ಪಕ್ಷೇತರರಾಗಿ ಗೆದ್ದು ಮತ್ತೆ ತವರಿಗೆ ಮರಳಿದ್ದ ಮಲ್ಲಿಕಾರ್ಜುನ ಹೊರಕೇರಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಂತಹ ಮಹತ್ವದ ಹುದ್ದೆ ಹೊಂದಿದ್ದರೂ ಕಮಲದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಹೊರಕೇರಿಯವರ ಹತ್ತಿರದ ಸಂಬ0ಧಿಗಳೇ ಆಗಿರುವ ರವಿ ದಾಸನೂರಗೆ ಮಣೆ ಹಾಕಿದೆ.
ಷಣ್ಮುಖ ಬೆಟಗೇರಿ ಅಧಿಕಾರವಿಲ್ಲದಿದ್ದರೂ ನೂರಾರು ಬಡಜನರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಪಿಂಚಣಿ, ಆಶ್ರಯ ಮನೆಗಳನ್ನು ಕೊಡಿಸಿ ದ್ದಲ್ಲದೇ ಬೀದಿ ದೀಪ ಹಾಕಿಸುವುದು, ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಹೀಗೆ ಸದಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದರೂ ಅಂತಿಮ ಗಳಿಗೆಯಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಜನತೆಯೇ ಅವರನ್ನು ಹುರಿದುಂಬಿಸಿ ಕಣಕ್ಕಿಳಿಸಿದ್ದು ಗೆಲುವಿನ ದಡ ತಲುಪಿಸುವ ಭರವಸೆಯೊಂದಿಗೆ ಪ್ರಚಾರಕ್ಕೆ ಮುಂದಾಗಿದ್ದಾರೆ.
ಕೋವಿಡ್ ಒಂದು ಮತ್ತು ಎರಡನೇ ಅಲೆಯ ಸಂದರ್ಭದಲ್ಲೂ ಬಡವರಿಗೆ, ನಿರಾಶ್ರಿತರ ಸಮಸ್ಯೆಗೆ ಸ್ಪಂದಿಸಿದ್ದಲ್ಲದೇ ಸಾವಿರಾರು ಕಿಟ್ ಹಂಚುವ ಮೂಲಕ ಅಧಿಕಾರದಲ್ಲಿ ಇಲ್ಲದಿದ್ದರೂ ತಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿರುವುದು ಅವರಿಗೆ ಪ್ಲಸ್ ಆಗಿ ಪರಿಣಮಿಸಿದೆ.ಅಲ್ಲದೇ ವಿವಿಧ ಸಾಮಾಜಿಕ ಸಂಘಟನೆಗಳೊAದಿಗೂ ಸಕ್ರೀಯರಾಗಿರುವುದು ಇನ್ನಷ್ಟು ಅನುಕೂಲವಾಗಿದೆ.

 

ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ಬೆಟಗೇರಿ ಕುಟುಂಬದವರಾದ ಷಣ್ಮುಖ ಗೆಲುವು ನಿಶ್ಚಿತ
ಬಸವರಾಜ ಡೊಂಕನವರ
ವಾರ್ಡ ನಿವಾಸಿ

ಬೆಟಗೇರಿ ಕುಟುಂಬದವರು ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರನ್ನು ಗೆಲ್ಲಿಸಿದಲ್ಲಿ ವಾರ್ಡ ಅಭಿವೃದ್ಧಿಗೆ ಪೂರಕವಾಗಲಿದೆ.
ಕಾಶೀಮಸಾಬ ದರಗಾದ
ವಾರ್ಡನ ನಿವಾಸಿ

ಬೆಟಗೇರಿ ಕುಟುಂದವರದ್ದು ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ಪಾಲ್ಗೊಂಡ ಮನೆತನ.ವಾರ್ಡಿನ ಬಗ್ಗೆ ಕಳಕಳಿಯಿರುವ ಬೆಟಗೇರಿಯಂತವರು ಆಯ್ಕೆಯಾದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಿರಾಯಾಸವಾಗಿ ಆಗುತ್ತವೆ.
ಶಿವಲಿಂಗಪ್ಪ ನಾಗಣ್ಣವರ
ವಾರ್ಡನ ನಿವಾಸಿ

ಆಶ್ರಯ ಕಾಲೋನಿಯ ಸಮಸ್ಯೆಗೆ ಸದಾ ಸ್ಪಂದಿಸುವAತಹ ಷಣ್ಮುಖ ಬೆಟಗೇರಿಯಂತಹ ಯುವ ಉತ್ಸಾಹಿಗಳು ಪಾಲಿಕೆ ಸದಸ್ಯರಾದರೆ ತುಂಬಾ ಅನುಕೂಲ.
ಚನ್ನವ್ವ ಜಮ್ಯಾಳ
ವಾರ್ಡ ನಿವಾಸಿ

administrator

Related Articles

Leave a Reply

Your email address will not be published. Required fields are marked *