ನಿಮಗೆ ಟಿಕೆಟ್ ಎಂದು ಹೊರಟ್ಟಿಗೆ ಕೊಟ್ಟರು: ತುಂಬಾ ಬೇಸರವಾಯಿತು
ಹುಬ್ಬಳ್ಳಿ: ನಾನು ಯಾವುದೇ ಕರಾರಿಲ್ಲದೆ ಕಾಂಗ್ರೆಸ್ ಸೇರಿದ್ದೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಮೂರು ವರ್ಷ ಜನ ವಿರೋಧಿ ಸರ್ಕಾರ ಇದೆ. ಇದರಿಂದ ತಮಗೆ ಬಹಳ ನೋವಾಗಿದೆ. 2008 ರಲ್ಲಿ ನಾನು ಪಧವೀಧರ ಕ್ಷೇತ್ರದಿಂದ ನಾನು ಗೆದ್ದಿದ್ದೆ. ಬಿಜೆಪಿ ಮುಖಂಡರು ಎಲ್ಲರೂ ಸೇರಿ ನನ್ನ ಚುನಾವಣೆಗೆ ನಿಲ್ಲಸಿದ್ರು ಎಂದರು.
2013 ರಲ್ಲಿ ಯಡಿಯೂರಪ್ಪ ಕೆಜಿಪಿ ಕಟ್ಟಿದಾಗ ಯಾರೂ ಅವರ ಜೊತೆ ಹೋಗಲಿಲ್ಲ. ಕೆಲ ಮಂತ್ರಿಗಳು ಅವರಿಗೆ ಕೆಜಿಪಿ ಪಕ್ಷ ಕಟ್ಟಲು ಉತ್ತೇಜನ ನೀಡಿದರು. ಆದ್ರೆ ಅವರ ಜೊತೆ ಯಾರೂ ಬರಲಿಲ್ಲ. ತಮ್ಮ್ನ ಅಧಿಕಾರ ಅವಧಿ ಒಂದೂವರೆ ವರ್ಷ ಇದ್ರೂ ನಾನು ಯಡಿಯೂರಪ್ಪ ಜೊತೆ ಹೋದೆ ಎಂದರು.
2014ರಲ್ಲಿ ನನಗೆ ಟಿಕೆಟ್ ಎಂದು, ಟಿಕೆಟ್ ಕೊಡಲಿಲ್ಲ. 2020ರಲ್ಲೂ ಕೊಡಲಿಲ್ಲ, 2022ರಲ್ಲಿ ನೀವೇ ಅಭ್ಯರ್ಥಿ ಎಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಮಗೆ ಟಿಕೆಟ್ ಎಂದಿದ್ದರು. ಚುನಾವಣೆ ಬರುತ್ತಲೆ ಬಸವರಾಜ ಹೊರಟ್ಟಿಗೆ ಟಿಕೆಟ್ ಕೊಟ್ಟರು. ಇದರಿಂದ ನನಗೆ ಮನಸ್ಸಿಗೆ ಬೇಜಾರಾಗಿದೆ. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದರು.
ಕಾಂಗ್ರೆಸ್ ಯಾವುದೇ ಜವಾಬ್ದಾರಿ ಕೊಟ್ರೆ ನಿಭಾಯಿಸುತ್ತೇನೆ. ಇದು ಏಕಾಂಗಿ ನಿರ್ಧಾರ, ಯಡಿಯೂರಪ್ಪ ಬಿಜೆಪಿಯಲ್ಲಿದ್ದಾರೆ. ನಾನು ಅವರಿಗೆ ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ. ಹೇಳಬೇಕು ಅನ್ನುವ ಪ್ರಮೇಯ ಬಂದಿಲ್ಲ. ನಾನು ಕಾಂಗ್ರೆಸ್ ಸೇರಿದ ಮೇಲೆ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದರು.